Advertisement

ಕಾವೇರಿ ನದಿ ಸಂರಕ್ಷಣೆಗೆ ಯೋಜನೆ ರೂಪಿಸಲು ಸಿಎಂಗೆ ಮನವಿ

01:00 AM Mar 03, 2019 | Harsha Rao |

ಮಡಿಕೇರಿ: ಕಾವೇರಿ ನದಿ ಸಂರಕ್ಷಣೆಗೆ ಸರಕಾರದ ಮೂಲಕ ನದಿ ತಟಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ರಾಜ್ಯ ಸರಕಾರ ವಿಶೇಷ ಅನುದಾನ ಕಲ್ಪಿಸುವಂತೆ ಕಾವೇರಿ ನದಿ ಸ್ವತ್ಛತಾ ಆಂದೋಲನ ಪ್ರಮುಖರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲೆಗೆ ಭೇಟಿ ನೀಡಿ ಕುಶಾಲನಗರ ಮೂಲಕ ಮೈಸೂರಿಗೆ ತೆರಳುವ ಸಂದರ್ಭ ಕೊಪ್ಪ ಮಿನಿಸ್ಟರ್‌ ಕೋರ್ಟ್‌ ಹೊಟೇಲ್‌ನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಮಿತಿಯ ಪ್ರಮುಖರು ಜೀವನದಿ ಕಾವೇರಿ ಸಂರಕ್ಷಣೆ ಬಗ್ಗೆ ಸರಕಾರ ಕಾಳಜಿ ವಹಿಸಬೇಕು. ನದಿಗಳ ಸಂರಕ್ಷಣೆಗೆ ರಾಜ್ಯದಲ್ಲಿ ಕಾನೂನು ರೂಪಿಸಿ ಅನುಷ್ಠಾನ ಗೊಳಿಸಬೇಕು.

ಕುಶಾಲನಗರ-ಮಡಿಕೇರಿ ಒಳಚರಂಡಿ ಯೋಜನೆ ಕಾಮಗಾರಿ ಕೂಡಲೆ ಪೂರ್ಣಗೊಳಿಸುವುದರೊಂದಿಗೆ ಸ್ವತ್ಛ ಕೊಡಗು ಹಾಗೂ ಸ್ವತ್ಛ ಕಾವೇರಿಗೆ ಆದ್ಯತೆ ನೀಡಬೇಕು. ನದಿ ತಟಗಳ ವ್ಯಾಪ್ತಿಯ ಗ್ರಾ.ಪಂ.¤ಗಳ ಹಾಗೂ ಪಟ್ಟಣಗಳ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಸದಂತೆ ಯೋಜನೆ ರೂಪಿಸುವುದು, ಪ್ರವಾಸಿ ಕೇಂದ್ರಗಳಿಗೆ ಕಾವೇರಿ ನದಿಯಿಂದಲೇ ಶುದ್ಧ ಕುಡಿವ ನೀರನ್ನು ಒದಗಿಸಲು ಕ್ರಮಕೈಗೊಳ್ಳುವ ಮೂಲಕ ಬಾಟಲಿ ನೀರಿಗೆ ನಿರ್ಭಂದ ಹೇರುವುದು, ನದಿ ವ್ಯಾಪ್ತಿಯ ಸರ್ವೆ ಕಾರ್ಯ ನಡೆಸಿ ನದಿಯ ಮೂಲ ಅಸ್ತಿತ್ವವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು. 

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಮಾತನಾಡಿದರು.ಕುಶಾಲನಗರದ ಜೆಡಿಎಸ್‌ ಪ್ರಮು ಖರಾದ ಎಚ್‌.ಟಿ.ವಸಂತ್‌, ಎಚ್‌.ಜೆ. ಸಂತೋಷ್‌, ಎಚ್‌.ಎಂ. ಚಂದ್ರು, ಜಕ್ರಿಯ, ಕಮರ್‌, ಕೆ.ಎಚ್‌. ಅಯೂಬ್‌ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿದರು.

ಶಾಸಕ ಕೆ. ಮಹದೇವ್‌, ಜಿ.ಪಂ. ಸದಸ್ಯ ರಾಜೇಂದ್ರ, ಉದ್ಯಮಿ ಎಂ.ಎ. ರಘು, ಸ್ವಚ್ಚತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್‌. ಚಂದ್ರಮೋಹನ್‌, ಸೋಮಶೇಖರ್‌, ಕೆ.ಆರ್‌. ಶಿವಾನಂದನ್‌, ಮಂಡೇಪಂಡ ಬೋಸ್‌ ಮೊಣ್ಣಪ್ಪ, ಅಕ್ಷಯ್‌ಗೌಡ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next