Advertisement

ಸ್ಲಂ ಬೋರ್ಡ್‌ ಆಯುಕ್ತರ ವಿರುದ್ದ ಕ್ರಮಕ್ಕೆ ಆಗ್ರಹ

05:21 PM Jun 16, 2022 | Team Udayavani |

ರಾಯಚೂರು: ಕರ್ನಾಟಕ ಕೊಳಚೆ ಪ್ರದೇಶಗಳ ಅನಿಯಮ 1973ರ ಕಲಂ 3 ಹಾಗೂ 17ನ್ನು ಉಲ್ಲಂಘಿಸುತ್ತಿರುವ ಸ್ಲಂ ಬೋರ್ಡ್‌ನ ಆಯುಕ್ತರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಬುಧವಾರ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾವೇದಿಕೆ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ಡಿಸಿ ಕಚೇರಿ ಎದುರು ಧರಣಿ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, 1973ರ ಸ್ಲಂ ಕಾಯ್ದೆ ಮತ್ತು 2016ರ ಸ್ಲಂ ನೀತಿ ಜಾರಿಯಾಗಿದ್ದರೂ ಸಹ ರಾಜ್ಯದಲ್ಲಿ ಅತಿ ವೇಗವಾಗಿ ಸ್ಲಂಗಳ ಸಂಖ್ಯೆ ಹಾಗೂ ಸ್ಲಂ ನಿವಾಸಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈವರೆಗೆ ರಾಜ್ಯದಲ್ಲಿ 1808 ಕೊಳಚೆ ಪ್ರದೇಶಗಳು ಕಲಂ 3ರಲ್ಲಿ ಘೋಷಿಸಿ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿಯನ್ನು ವಸತಿ ಇಲಾಖೆಯ ಅಧಿಧೀನದಲ್ಲಿರುವ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. 709 ಕೊಳಚೆ ಪ್ರದೇಶಗಳು ಖಾಸಗಿ ಮಾಲೀಕತ್ವದಲ್ಲಿವೆ. ಈ ಖಾಸಗಿ ಮಾಲೀಕತ್ವದಲ್ಲಿರುವ ಸ್ಲಂಗಳನ್ನು 1973ರ ಸ್ಲಂ ಕಾಯ್ದೆಯ 17ಕಲಂ ಅಡಿ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸುವ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

2021ರಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರಾಗಿ ಬಂದಿರುವ ಬಿ. ವೆಂಕಟೇಶ ಮೌಖೀಕವಾಗಿ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ ಗಳಿಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ಖಾಸಗಿ ಮಾಲೀಕತ್ವದಲ್ಲಿರುವ ಕೊಳಚೆ ಪ್ರದೇಶಗಳನ್ನು ಘೋಷಿಸದಂತೆ ಸೂಚಿಸಿರುವುದು ಖಂಡನೀಯ. ಕೂಡಲೇ ಸ್ಲಂ ಬೋರ್ಡ್‌ನ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸ್ಲಂ ನಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಮುಖಂಡರಾದ ವೀರೇಶ, ನರಸಿಂಹಲು, ವೆಂಕಟೇಶ, ನಾಗರಾಜ, ಲಕ್ಷ್ಮಣ, ರಾಜಶೇಖರ, ಶರಣಬಸವ ಹಾಗೂ ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next