Advertisement

ಕರ್ತವ್ಯಪಥದಲ್ಲಿ ಆತ್ಮನಿರ್ಭರತೆ ಮೆರುಗು, ಸಾಂಸ್ಕೃತಿಕ ಪರಂಪರೆಯ ಅನಾವರಣ

11:27 PM Jan 26, 2023 | Team Udayavani |

ಹೊಸದಿಲ್ಲಿ: ದೇಶದ 74ನೇ ಗಣರಾಜ್ಯೋ ತ್ಸವದ ದಿನವಾದ ಗುರುವಾರ ಹೊಸದಿಲ್ಲಿಯ ಕರ್ತವ್ಯಪಥದಲ್ಲಿ “ಆತ್ಮನಿರ್ಭರತೆ’ಯ ಶಕ್ತಿಯೊಂದಿಗೆ ಭಾರತದ ಸೇನಾ ಪರಾಕ್ರಮ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಅನಾವರಣಗೊಂಡಿತು.

Advertisement

“ನಾರೀಶಕ್ತಿ’ಯೇ ಪ್ರಸಕ್ತ ವರ್ಷದ ಪರೇಡ್‌ನ‌ ಪ್ರಮುಖ ಥೀಮ್‌ ಆಗಿತ್ತು. ಸ್ತ್ರೀ ಸಶಕ್ತೀಕರಣ ವನ್ನು ಬಿಂಬಿಸುವ ಕರ್ನಾಟಕದ “ನಾರೀಶಕ್ತಿ’ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು, ಇಲಾಖೆಗಳ ಒಟ್ಟು 23 ಸ್ತಬ್ಧಚಿತ್ರಗಳು ಪರೇಡ್‌ನ‌ಲ್ಲಿ ಸಾಗಿದವು. ಕರ್ನಾಟಕದವರಾದ ಲೆಫ್ಟಿನೆಂಟ್‌ ಕಮಾಂಡರ್‌ ದಿಶಾ ಅಮೃತ್‌ ಅವರು ಭಾರತೀಯ ನೌಕಾಪಡೆಯ 144 ಯುವ ನಾವಿಕರ ಪಡೆಯನ್ನು ಮುನ್ನಡೆಸಿದರು. ಲೆ| ಚೇತನಾ ಶರ್ಮಾ ಅವರ ನೇತೃತ್ವದಲ್ಲಿ ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ಪ್ರದರ್ಶಿಸಲಾಯಿತು.

ಈಜಿಪ್ಟ್ ಸೈನಿಕರೂ ಭಾಗಿ: ಕಳೆದ ವರ್ಷ ರಾಜ ಪಥವನ್ನು ಕರ್ತವ್ಯಪಥ ಎಂದು ಮರುನಾಮ ಕರಣ ಮಾಡಿದ ಬಳಿಕ ಈ ಪಥದಲ್ಲಿ ನಡೆದ ಮೊದಲ ಗಣರಾಜ್ಯೋತ್ಸವ ಇದಾಗಿತ್ತು. ಈಜಿಪ್ಟ್ ಅಧ್ಯಕ್ಷ ಅಬ್ಧೆಲ್‌ ಫ‌ತ್ತಾಹ್‌ ಅಲ್‌-ಸಿಸಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡಿದ್ದರು. ಅಲ್ಲದೇ ಈಜಿಪ್ಟ್ನ ಸಶಸ್ತ್ರ ಪಡೆಗಳ 144 ಯೋಧರು ಕರ್ನಲ್‌ ಮಹೂ¾ದ್‌ ಮೊಹಮ್ಮದ್‌ ಅಬ್ಧೆಲ್‌ ಫ‌ತ್ತಾಹ್‌ ಎಲಾರಸಾವಿ ಅವರ ನೇತೃತ್ವದಲ್ಲಿ ಪರೇಡ್‌ನ‌ಲ್ಲಿ ಹೆಜ್ಜೆಹಾಕಿದ್ದು ವಿಶೇಷವಾಗಿತ್ತು.

ಸ್ವಾವಲಂಬನೆಯ ಪ್ರದರ್ಶನ: ಗುರುವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿಯ ವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದರು. ಅನಂತರ ಪದ್ಧತಿಯಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ವಿಶೇಷವೆಂದರೆ ಈ ಬಾರಿಯ 21 ಗನ್‌ ಸೆಲ್ಯೂಟ್‌ಗೆ ಬ್ರಿಟಿಷರ ಕಾಲದ 25 ಪಾಂಡರ್‌ ಗನ್‌ಗಳಿಗೆ ಗುಡ್‌ಬೈ ಹೇಳಿ, ಭಾರತದಲ್ಲೇ ನಿರ್ಮಿಸಲಾದ 105 ಮಿ. ಮೀ. ಫೀಲ್ಡ್‌ ಗನ್‌ಗಳನ್ನು ಬಳಸಲಾಯಿತು. ಈ ಮೂಲಕ ರಕ್ಷಣ ಪಡೆಯಲ್ಲಿ ಆತ್ಮನಿರ್ಭರತೆಯನ್ನು ಪ್ರತಿಬಿಂಬಿಸಲಾಯಿತು.

ಇನ್ನೊಂದೆಡೆ 50 ವಿಮಾನಗಳು ಬೇರೆ ಬೇರೆ ರೂಪದಲ್ಲಿ ಆಗಸದಲ್ಲೇ ಚಿತ್ತಾರಗಳನ್ನು ರೂಪಿಸಿ ನೆರೆದಿದ್ದವರ ಮನ ಸೆಳೆದವು. ಅರ್ಜುನ, ನಾಗ ಕ್ಷಿಪಣಿ ವ್ಯವಸ್ಥೆ, ಕೆ-9 ವಜ್ರ ಸೇರಿದಂತೆ ಭಾರತದಲ್ಲೇ ತಯಾರಾದ ರಕ್ಷಣ ವ್ಯವಸ್ಥೆಗಳ ಪ್ರದರ್ಶನವೂ ನಡೆಯಿತು.

Advertisement

ಮೂವರು ಪರಮ ವೀರ ಚಕ್ರ ಪುರ ಸ್ಕೃತರು, ಮೂವರು ಅಶೋಕ ಚಕ್ರ ಪುರಸ್ಕೃ ತರು ಕೂಡ ಪರೇಡ್‌ನ‌ಲ್ಲಿ ಭಾಗಿಯಾದರು. “ನಿವೃತ್ತ ಸೇನಾಧಿಕಾರಿಗಳ ಸಂಕಲ್ಪದೊಂದಿಗೆ ಭಾರತದ ಅಮೃತ ಕಾಲದತ್ತ’ ಎಂಬ ಥೀಮ್‌ನಲ್ಲಿ “ನಿವೃತ್ತ ಸೇನಾಧಿಕಾರಿಗಳ ಟ್ಯಾಬ್ಲೋ’ ಕೂಡ ಪ್ರದರ್ಶನಗೊಂಡಿತು.

ಶ್ರಮಯೋಗಿಗಳಿಗೆ ಆದ್ಯತೆ: ಸೆಂಟ್ರಲ್‌ ವಿಸ್ತಾ, ಕರ್ತವ್ಯಪಥ, ಹೊಸ ಸಂಸತ್‌ ಭವನದ ನಿರ್ಮಾಣದಲ್ಲಿ ತೊಡಗಿಕೊಂಡ ಕಾರ್ಮಿಕರು, ಹಾಲು, ತರಕಾರಿ ಮಾರಾಟಗಾರರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ಜತೆಗೆ ಅವರಿಗೆ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು.

ಸಿರಿಧಾನ್ಯಗಳಿಗೂ ಸ್ಥಾನ: ವಿಶ್ವಸಂಸ್ಥೆಯು 2023 ಅನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿರುವಂತೆಯೇ ಸಿರಿಧಾನ್ಯಗಳನ್ನೇ ಬಳಸಿ ವರ್ಣರಂಜಿತ ಕಲಾಕೃತಿಗಳನ್ನು ರೂಪಿಸಲಾಗಿತ್ತು. ಕೃಷಿ, ಆಧುನಿಕ ಕೃಷಿಯ ಸಮ್ಮಿಲನವನ್ನು ತೋರಿಸುವಂತೆ ಟ್ಯಾಬ್ಲೋ ಎದುರಿದ್ದ ಟ್ರ್ಯಾಕ್ಟರ್‌ ಅನ್ನು ಸಿರಿ ಧಾನ್ಯಗಳ ರಂಗೋಲಿಯಿಂದ ಅಲಂಕರಿಸಲಾಗಿತ್ತು.

ಅಯೋಧ್ಯೆ ಆಕರ್ಷಣೆ: ವನವಾಸದಿಂದ ಮರಳಿದ ಶ್ರೀರಾಮ ಮತ್ತು ಸೀತೆಯನ್ನು ಅಯೋಧ್ಯೆಯ ಜನರು ಭಕ್ತಿಭಾವದಿಂದ ಸ್ವಾಗತಿಸುತ್ತಿರುವುದನ್ನು ಬಿಂಬಿಸುವ ಸ್ತಬ್ಧಚಿತ್ರ ವನ್ನು ಉತ್ತರಪ್ರದೇಶ ಸರಕಾರ ರೂಪಿಸಿತ್ತು. ಅಯೋಧ್ಯೆಯಲ್ಲಿ ಜರಗುವ 3 ದಿನಗಳ ದೀಪೋತ್ಸವವನ್ನೂ ಟ್ಯಾಬ್ಲೋದಲ್ಲಿ ಪ್ರದರ್ಶಿಸ ಲಾಯಿತು. ಹರಿಯಾಣದ ಸ್ತಬ್ಧಚಿತ್ರದಲ್ಲಿ ಭಗವದ್ಗೀತೆಯ ಸಾರವಿದ್ದರೆ, ಪ.ಬಂಗಾಲದ ಸ್ತಬ್ಧಚಿತ್ರದಲ್ಲಿ ದುರ್ಗಾಪೂಜೆ, ಜಮ್ಮು ಮತ್ತು ಕಾಶ್ಮೀರದ ಸ್ತಬ್ಧಚಿತ್ರದಲ್ಲಿ ಅಮರನಾಥ ದೇವಾಲಯದ ವೈಭವವಿತ್ತು.

ರಾಜಸ್ಥಾನಿ ಪೇಟ ತೊಟ್ಟ ಪ್ರಧಾನಿ
74ನೇ ಗಣರಾಜ್ಯೋತ್ಸವದ ಆಚರಣೆಯಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿ ಪ್ರತಿಬಿಂಬಿಸುವ ಬಹುವರ್ಣೀಯ ರಾಜಸ್ಥಾನಿ ಪೇಟವನ್ನು ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದರು. ಅಲ್ಲದೆ ಈ ಮೂಲಕ ಎಲ್ಲರ ಗಮನಸೆಳೆದರು. ಪರೇಡ್‌ ಆರಂಭಕ್ಕೂ ಮುನ್ನ ದಿಲ್ಲಿಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ, ಬಿಳಿ ಬಣ್ಣದ ಕುರ್ತಾ, ಪ್ಯಾಂಟ್‌ ಹಾಗೂ ಕಪ್ಪು ಬಣ್ಣದ ಕೋಟ್‌ ಧರಿಸಿದ್ದರಲ್ಲದೇ ಬಹುವರ್ಣೀಯ ರಾಜಸ್ಥಾನಿ ಪೇಟವನ್ನು ತೊಟ್ಟಿದ್ದರು. ಇದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು.ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿದ ಬಳಿಕ ಮೋದಿ, ಕರ್ತವ್ಯಪಥದತ್ತ ಹೆಜ್ಜೆ ಹಾಕಿದರು. ಕಳೆದ ವರ್ಷ ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next