Advertisement

ಗಣರಾಜ್ಯೋತ್ಸವ ನೋಡಲು ಆನ್‌ಲೈನ್‌ನಲ್ಲೇ ಟಿಕೆಟ್‌ ಖರೀದಿಸಿ

08:44 PM Jan 06, 2023 | Team Udayavani |

ನವದೆಹಲಿ: ಈ ವರ್ಷ ಜ.26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ನೋಡಬೇಕೇ? ಸ್ವಾತಂತ್ರ್ಯ ದಿನಾಚರಣೆಯನ್ನು ನೋಡಬೇಕೇ? ಇನ್ನು ಮುಂದೆ ನೀವು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ನೀವು ಇದ್ದಲ್ಲೇ ಕುಳಿತು ಆನ್‌ಲೈನ್‌ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು.

Advertisement

ಗಣ್ಯರು ಪಾಸ್‌ಗಳನ್ನೂ ಪಡೆಯಬಹುದು. ಇದಕ್ಕಾಗಿಯೇ ಕೇಂದ್ರ ಸರ್ಕಾರ ವೆಬ್‌ಸೈಟ್‌ ಒಂದನ್ನು ಶುರು ಮಾಡಿದೆ.

//www.aamantran.mod.gov.inಮೂಲಕ ನೀವು ಇಂತಹ ಕಾರ್ಯಕ್ರಮಗಳಿಗೆ ಬೇಕಾದ ಟಿಕೆಟ್‌ಗಳನ್ನು ಪಡೆಯಬಹುದು. ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಅಜಯ್‌ ಭಟ್‌ ಇದಕ್ಕೆ ಚಾಲನೆ ನೀಡಿದ್ದಾರೆ.

ದೇಶದ ಯಾವುದೇ ಪ್ರಜೆ ಬೇಕಾದರೂ ಟಿಕೆಟ್‌ ಖರೀದಿಸಬಹುದು. ಗಣ್ಯರು ತಮಗೆ ಮತ್ತು ಸಂಬಂಧಿಕರಿಗೆ ಪಾಸ್‌ಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ಟಿಕೆಟ್‌ ಪಡೆದರೆ, ಅವನ್ನು ಆನ್‌ಲೈನ್‌ನಲ್ಲೇ ಕಳಿಸಲಾಗುತ್ತದೆ.

ಪ್ರವೇಶದ್ವಾರದಲ್ಲಿ ಕ್ಯೂಆರ್‌ ಕೋಡ್‌ ಮೂಲಕ ಸ್ಕ್ಯಾನ್‌ ಮಾಡಲಾಗುತ್ತದೆ. ಈ ಟಿಕೆಟ್‌ಗಳನ್ನು ರದ್ದು ಮಾಡಲಿಕ್ಕೆ ಸಾಧ್ಯವಿಲ್ಲ, ಇನ್ನೊಬ್ಬರಿಗೆ ವರ್ಗಾಯಿಸಲು ಅಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next