Advertisement

Report; ಸ್ವಿಸ್‌ನಲ್ಲಿ ಭಾರತೀಯರ ಹಣ ಇಳಿಕೆ

12:35 AM Jun 21, 2024 | Team Udayavani |

ದಿಲ್ಲಿ/ಜ್ಯೂರಿಚ್‌: ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಹಾಗೂ ಭಾರತೀಯ ಕಂಪೆನಿಗಳ ಹಣದ ಪ್ರಮಾಣದಲ್ಲಿ ಶೇ.70ರಷ್ಟು ಕುಸಿತವಾಗಿದ್ದು, 2023 ರಲ್ಲಿ ಕೇವಲ 9,771 ಕೋಟಿ ರೂ. ಮಾತ್ರ ಇದೆ ಎಂದು ಸ್ವಿಟ್ಸರ್‌ಲ್ಯಾಂಡ್‌ ಕೇಂದ್ರ ಬ್ಯಾಂಕ್‌ ತನ್ನ ವಾರ್ಷಿಕ ವರದಿ ಯಲ್ಲಿ ತಿಳಿಸಿದೆ. 14 ವರ್ಷಗಳ ಪೈಕಿ 2021ರಲ್ಲಿ ಗರಿಷ್ಠ ಮಟ್ಟಕ್ಕೆ ಅಂದರೆ 35 ಸಾವಿರ ಕೋಟಿ ರೂ.ಇದ್ದದ್ದು, ಸತತ ಎರಡು ವರ್ಷಗಳಿಂದ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ಸಂಗ್ರಹವು ಕುಸಿತ ಕಾಣುತ್ತಿದೆ.

Advertisement

ಇದು ಸ್ವಿಸ್‌ ನ್ಯಾಶನಲ್‌ ಬ್ಯಾಂಕ್‌ಗೆ ಅಲ್ಲಿ ಬ್ಯಾಂಕ್‌ಗಳು ವರದಿ ಮಾಡಿದ ಅಧಿಕೃತ ಅಂಕಿ ಅಂಶಗಳಾಗಿವೆ. ಸ್ವಿಟ್ಸರ್‌ಲ್ಯಾಂಡ್‌ನ‌ಲ್ಲಿ ಭಾರತೀಯರು ಹೊಂದಿರುವ ಹೆಚ್ಚು ಚರ್ಚಿತ ಕಪ್ಪು ಹಣದ ಪ್ರಮಾಣ ಸೂಚಿಸು ವುದಿಲ್ಲ. ಈ ಮಾಹಿತಿ ಎನ್‌ಆರ್‌ಐ ಅಥವಾ ಇತರರು ಸ್ವಿಸ್‌ ಬ್ಯಾಂಕ್‌ಗಳಲ್ಲಿ 3ನೇ ದೇಶದ ಕಂಪೆನಿಗಳ ಹೆಸರಿ ನಲ್ಲಿ ಇಟ್ಟಿರಬಹುದಾದ ಹಣವನ್ನು ಒಳಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next