Advertisement

Fraud Case ಅಮಾನ್ಯ ನೋಟು ಬದಲಾಯಿಸಿ ನೀಡುವುದಾಗಿ 57 ಲ.ರೂ. ವಂಚನೆ

12:22 AM Aug 08, 2024 | Team Udayavani |

ಕಾಸರಗೋಡು: ವರ್ಷಗಳ ಹಿಂದೆ ಕೇಂದ್ರ ಸರಕಾರ ಅಮಾನ್ಯಗೊಳಿಸಿದ್ದ 1,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿ ಕೊಡುವ ಕಂಪೆನಿ ಹೆಸರಲ್ಲಿ 57 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಐವರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಪಳ್ಳಿಕೆರೆ ಮುಕ್ಕೂಟು ಕಾರಕುನ್ನಿನ ಬಿ.ಎಸ್‌. ವಿಲ್ಲಾದ ಇಬ್ರಾಹಿಂ ಬಾದುಶಾ (33) ನೀಡಿದ ದೂರಿನಂತೆ ಪಳ್ಳಿಕೆರೆ ಹದ್ದಾದ್‌ ನಗರದ ಸಮೀರ್‌ (ಟೈಗರ್‌ ಸಮೀರ್‌), ಕೋಟಪ್ಪಾರದ ಶರೀಫ್‌, ಗಿರಿ ಕೈಲಾಸ್‌ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2023ರ ಜ. 15ರಿಂದ 2023ರ ಆ. 30ರ ಮಧ್ಯಾವಧಿಯಲ್ಲಿ ಲಾಭದ ಭರವಸೆ ನೀಡಿ ಹಣ ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ಕಂಪೆನಿಗೆ ಹಣ ನೀಡಿದರೆ ಅವರು ಹೆಚ್ಚು ಲಾಭ ನೀಡುತ್ತಾರೆ ಎಂದು ನಂಬಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶರೀಫ್‌ ಅವರಲ್ಲಿ 125 ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ 1,000 ರೂ. ನೋಟುಗಳಿವೆ ಎಂದು ನಂಬಿಸಿ ಸಮೀರ್‌ ತನ್ನನ್ನು ಸಂಪರ್ಕಿಸಿ ಅಮಾನ್ಯಗೊಂಡ ನೋಟುಗಳನ್ನು ಬದಲಾಯಿಸಿ ನೀಡುವ ಪ್ರಧಾನ ಕಂಪೆನಿಯೊಂದು ದಿಲ್ಲಿಯಲ್ಲಿ ಕಾರ್ಯವೆಸಗುತ್ತಿದೆ ಎಂದು ನಂಬಿಸಿದ್ದ. ಕೆಲವರು ವಾಹನದಲ್ಲಿ ಬಂದು ಅಮಾನ್ಯ ನೋಟುಗಳ ವ್ಯವಹಾರದ ವೀಡಿಯೋ ದೃಶ್ಯಗಳನ್ನು ತೋರಿಸಿ ತನ್ನಿಂದ ಒಟ್ಟಾರೆಯಾಗಿ 57 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ಇಬ್ರಾಹಿಂ ಬಾದ್‌ಶಾ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next