Advertisement

ಮುರಿದು ವಾಲಿದ್ದ ಕಲಶ ದುರಸ್ತಿ

02:42 PM Nov 22, 2021 | Team Udayavani |

ಮೇಲುಕೋಟೆ: ಮೇಲುಕೋಟೆ ಶ್ರೀ ಯೋಗಾ ನರಸಿಂಹಸ್ವಾಮಿ ಬೆಟ್ಟದ ರಾಜಗೋಪುರದಲ್ಲಿ ಮುರಿದು ವಾಲಿಕೊಂಡಿದ್ದ ಕಳಸವನ್ನು ಶನಿವಾರ ಸರಿಪಡಿಸಲಾಗಿದೆ. ಇದರಿಂದ ಭಕ್ತರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.

Advertisement

ವಿಜಯನಗರ ಶೈಲಿಯ ಪಂಚಮಹಡಿಯ ರಾಜಗೋಪುರದಲ್ಲಿ ಕಳಸ ವಾಲಿಕೊಂಡು ಭಕ್ತರಲ್ಲಿ ಆತಂಕ ಉಂಟಾಗಿರುವ ಮಾಹಿತಿ ತಿಳಿದ ತಕ್ಷಣ ಮೇಲುಕೋಟೆಗೆ ಆಗಮಿಸಿ ಬೆಟ್ಟದ ರಾಜಗೋಪುರ ಪರಿಶೀಲನೆ ನಡೆಸಿದ ಶಾಸಕ ಸಿ.ಎಸ್‌.ಪುಟ್ಟರಾಜು, ಶೀಘ್ರ ಮುರಿದು ವಾಲಿಕೊಂಡಿರುವ ಕಳಸವನ್ನು ಯಥಾಸ್ಥಿತಿಗೆ ತರುವುದಾಗಿ ಭರವಸೆ ನೀಡಿದ್ದರು.

ಶಾಸಕರು ನೀಡಿದ ಭರವಸೆಯಂತೆ ನುರಿತ ಕುಲಶ ಕರ್ಮಿಯನ್ನು ಕಳುಹಿಸಿ ಶನಿವಾರ ಸರಿಪಡಿಸಿದ್ದಾರೆ. ಕಳಸ ಸರಿಪಡಿಸಿದ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಮೇಲುಕೋಟೆ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಅವ್ವಗಂಗಾಧರ್‌, ಬಾಲಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

ಚಿನ್ನದ ಲೇಪನ: 2022ರ ಫೆಬ್ರವರಿಯಲ್ಲಿ ಯೋಗಾನರಸಿಂಹಸ್ವಾಮಿ ಬೆಟ್ಟದ ಐದು ಅಂತಸ್ತು ಗಳ ರಾಜಗೋಪುರದ ಮೇಲೆ ಅಳವಡಿಸಿರುವ ಐದೂ ಕಳಸಗಳಿಗೆ ಸ್ವರ್ಣ ಲೇಪನ ಕಾರ್ಯ ನಡೆ ಯಲಿದೆ. ಸ್ವರ್ಣ ಲೇಪನ ಮುಕ್ತಾಯವಾಗುತ್ತಿ ದ್ದಂತೆ ಕುಂಭಾಭಿಷೇಕ ಮಹೋತ್ಸವ ಸಹ ನೆರವೇರಲಿದೆ.

ದುರಸ್ತಿಗೆ ಮುನ್ನ ವಾಲಿದ್ದ ಕಳಶ

Advertisement

ದುಬೈನಲ್ಲಿರುವ ಅನಿವಾಸಿ ಭಾರತೀಯ ರವೀಂದ್ರ ಮಾಧ್ಯಮಗಳ ವರದಿ ನೋಡಿ 1 ಕೋಟಿಗೂ ಹೆಚ್ಚು ಹಣ ವ್ಯಯಿಸಿ ಶಿಥಿಲಾ ವಸ್ಥೆಯ ಲ್ಲಿದ್ದ ರಾಜಗೋಪುರವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ರಾಜಗೋಪುರ ಮೇಲಿರುವ ಕಳಸ ಗಳಿಗೆ ಸ್ವರ್ಣಲೇಪನ ಮಾಡಲೂ ಸಹ ಸರ್ಕಾರ ದಿಂದ ಅನುಮತಿ ಪಡೆದುಕೊಂಡಿದ್ದು, ಫೆಬ್ರವರಿ ಯಲ್ಲಿ ಗೋಪುರದ ಮೇಲ್ಭಾಗದಲ್ಲೇ ನವೀನ ತಂತ್ರಜ್ಞಾನದ ಮೂಲಕ ಕಳಸಗಳಿಗೆ ಸ್ವರ್ಣಲೇಪನ ಮಾಡುವ ಕಾರ್ಯ ನಡೆಯಲಿದೆ.

ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಾಗೂ ದೇವಾಲಯದ ಕೈಂಕರ್ಯಪರರ ಆಗಮಿಕರ ಸಮ್ಮುಖದಲ್ಲಿ ಈ ಕಾರ್ಯ ನಡೆದು, ಮುಂಬರುವ ವೈರಮುಡಿ ಉತ್ಸವ ವೇಳೆಗೆ ಸ್ವರ್ಣಲೇಪನ ಮಾಡಿದ ಕಳಸಗಳು ಧಾರ್ಮಿಕ ಕೈಂಕರ್ಯ ನಡೆದು ಅರ್ಪಣೆಯಾಗಲಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next