Advertisement
ವಿಜಯನಗರ ಶೈಲಿಯ ಪಂಚಮಹಡಿಯ ರಾಜಗೋಪುರದಲ್ಲಿ ಕಳಸ ವಾಲಿಕೊಂಡು ಭಕ್ತರಲ್ಲಿ ಆತಂಕ ಉಂಟಾಗಿರುವ ಮಾಹಿತಿ ತಿಳಿದ ತಕ್ಷಣ ಮೇಲುಕೋಟೆಗೆ ಆಗಮಿಸಿ ಬೆಟ್ಟದ ರಾಜಗೋಪುರ ಪರಿಶೀಲನೆ ನಡೆಸಿದ ಶಾಸಕ ಸಿ.ಎಸ್.ಪುಟ್ಟರಾಜು, ಶೀಘ್ರ ಮುರಿದು ವಾಲಿಕೊಂಡಿರುವ ಕಳಸವನ್ನು ಯಥಾಸ್ಥಿತಿಗೆ ತರುವುದಾಗಿ ಭರವಸೆ ನೀಡಿದ್ದರು.
Related Articles
Advertisement
ದುಬೈನಲ್ಲಿರುವ ಅನಿವಾಸಿ ಭಾರತೀಯ ರವೀಂದ್ರ ಮಾಧ್ಯಮಗಳ ವರದಿ ನೋಡಿ 1 ಕೋಟಿಗೂ ಹೆಚ್ಚು ಹಣ ವ್ಯಯಿಸಿ ಶಿಥಿಲಾ ವಸ್ಥೆಯ ಲ್ಲಿದ್ದ ರಾಜಗೋಪುರವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ರಾಜಗೋಪುರ ಮೇಲಿರುವ ಕಳಸ ಗಳಿಗೆ ಸ್ವರ್ಣಲೇಪನ ಮಾಡಲೂ ಸಹ ಸರ್ಕಾರ ದಿಂದ ಅನುಮತಿ ಪಡೆದುಕೊಂಡಿದ್ದು, ಫೆಬ್ರವರಿ ಯಲ್ಲಿ ಗೋಪುರದ ಮೇಲ್ಭಾಗದಲ್ಲೇ ನವೀನ ತಂತ್ರಜ್ಞಾನದ ಮೂಲಕ ಕಳಸಗಳಿಗೆ ಸ್ವರ್ಣಲೇಪನ ಮಾಡುವ ಕಾರ್ಯ ನಡೆಯಲಿದೆ.
ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಾಗೂ ದೇವಾಲಯದ ಕೈಂಕರ್ಯಪರರ ಆಗಮಿಕರ ಸಮ್ಮುಖದಲ್ಲಿ ಈ ಕಾರ್ಯ ನಡೆದು, ಮುಂಬರುವ ವೈರಮುಡಿ ಉತ್ಸವ ವೇಳೆಗೆ ಸ್ವರ್ಣಲೇಪನ ಮಾಡಿದ ಕಳಸಗಳು ಧಾರ್ಮಿಕ ಕೈಂಕರ್ಯ ನಡೆದು ಅರ್ಪಣೆಯಾಗಲಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.