Advertisement

ಮೋಟಾರ್‌ಗಳ ದುರಸ್ತಿ; ಶೀಘ್ರ ಕಾಲುವೆಗೆ ನೀರು

04:52 PM Aug 03, 2022 | Shwetha M |

ಸಿಂದಗಿ: ಈ ಭಾಗದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕೆಂಭಾವಿ ಬಳಿಯ ಜಾಕ್‌ವೆಲ್‌ನಲ್ಲಿ ಕಾರ್ಯ ಸ್ಥಗಿತಗೊಂಡಿದ್ದ ನೀರೆತ್ತುವ ಮೋಟಾರುಗಳನ್ನು ದುರಸ್ತಿಗೊಳಿಸಲು ಗುಜರಾತ್‌ ಜ್ಯೋತಿ ಕಂಪನಿ ಟೆಂಡರ್‌ ನೀಡಲಾಗಿತ್ತು. ಈಗ ಅಲ್ಲಿಂದ ಮೋಟಾರ್‌ಗಳು ದುರಸ್ತಿಯಾಗಿ ಜಾಕ್‌ವೆಲ್‌ಗೆ ಸಿಂದಗಿ ಮಾರ್ಗವಾಗಿ ಹೋಗುತ್ತಿವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಮಂಗಳವಾರ ಪಟ್ಟಣದ ಬೈಪಾಸ್‌ ಬಳಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕೆಂಭಾವಿ ಬಳಿಯ ಜಾಕ್‌ವೆಲ್‌ಗೆ ಪಟ್ಟಣದ ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ದುರಸ್ತಿಯಾದ ಮೋಟಾರ್‌ಗಳನ್ನು ವಿಕ್ಷಣೆ ಮಾಡಿ ಅವರು ಮಾತನಾಡಿದರು.

ಕೆಂಭಾವಿ ಬಳಿಯ ಜಾಕ್‌ವೆಲ್‌ ನಲ್ಲಿ ಕಾರ್ಯ ಸ್ಥಗಿತಗೊಂಡಿದ್ದ ನೀರೆತ್ತುವ ಮೋಟಾರುಗಳನ್ನು ದುರಸ್ತಿಗೊಳಿಸಲು 7.75 ಕೋಟಿ ರೂ. ವೆಚ್ಚದಲ್ಲಿ ಗುಜರಾತ್‌ ಜ್ಯೋತಿ ಕಂಪನಿ ಟೆಂಡರ್‌ ನೀಡಲಾಗಿತ್ತು. ಈಗ ಆ ಮೋಟಾರ್‌ಗಳು ದುರಸ್ತಿ ಕಾರ್ಯ ಪೂರ್ಣಗೊಂಡು ಮರಳಿ ಜಾಕ್‌ವೆಲ್‌ಗೆ ಹೋಗುತ್ತಿದ್ದು ಶೀಘ್ರದಲ್ಲಿ ಮೋಟಾರ್‌ ಗಳನ್ನು ಅಳವಡಿಸಿ ಕಾಲುವೆಗೆ ನೀರು ಹರಿಸಲಾಗುವುದು ಎಂದು ಹೇಳಿದರು.

ಯೋಜನೆ ಆರಂಭವಾದಾಗಿನಿಂದ ಇತ್ತೀಚಿನವರೆಗೂ ಜಾಕ್‌ವೆಲ್‌ ಹತ್ತಿರದಲ್ಲಿರುವ ಮಣ್ಣಿನ ಕಾಲುವೆ ಮುಖಾಂತರ ನೀರು ಹರಿಸಲಾಗಿದೆ. ಇದರಿಂದಾಗಿ ಕಾಲುವೆಯಲ್ಲಿ ವಿಪರೀತ ಹೂಳು ತುಂಬಿಕೊಂಡಿದೆ. 20 ವರ್ಷಗಳಿಂದ ಜಾಕ್‌ವೆಲ್‌ ಹತ್ತಿರ 900 ಮೀ. ಮುಖ್ಯ ಕಾಲುವೆಯನ್ನು ಕಾಂಕ್ರೀಟ್‌ ಮಾಡಿಸದೇ ಮಣ್ಣಿನ ಕಾಲುವೆಯಿಂದಲೇ ನೀರು ಹರಿಸಲಾಗುತ್ತಿತ್ತು. ಅದೇ ಕಾಲುವೆಯನ್ನು ಈಗ 2.20 ಕೋಟಿ ರೂ. ವೆಚ್ಚದಲ್ಲಿ ನಮ್ಮ ಸರ್ಕಾರ ಕಾಂಕ್ರೀಟ್‌ ಕಾಲುವೆ ನಿರ್ಮಾಣ ಆರಂಭಿಸಿದೆ. ಕಾಮಗಾರಿ ಭರದಿಂದ ಸಾಗಿದೆ ಎಂದರು.

ರೈತರು ನನ್ನ ಜೀವಾಳ. ಅವರ ಬದುಕು ನಮ್ಮ ಬದುಕಾಗಿದೆ. ಅವರ ಕಷ್ಟವೇ ನಮ್ಮ ಕಷ್ಟವಾಗಿದೆ. ಶೀಘ್ರದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆ ನೀರು ಆ. 15ರೊಳಗಾಗಿ ರೈತರ ಜಮೀನುಗಳಿಗೆ ಹರಿಸಲಾಗುವುದು ಎಂದು ಹೇಳಿದರು.

Advertisement

ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮುಖಂಡರಾದ ಸಂತೋಷ ಪಾಟೀಲ ಡಂಬಳ, ರವಿ ನಾಯೊRàಡಿ, ಸಿದ್ದರಾಯ ಪೂಜಾರಿ, ಹುಸೆನಿ ಅಡಾಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next