Advertisement
ಆರೋಪಿಗಳು ಶವವನ್ನು ಎಸೆದಿದ್ದ ರಾಜಕಾಲುವೆಯಲ್ಲಿ ಮೊಬೈಲ್‌ಗಾಗಿ ಹತ್ತಕ್ಕೂ ಹೆಚ್ಚು ಪೌರಕಾರ್ಮಿಕರು ಸುಮಾರು 3 ಗಂಟೆಗೂ ಅಧಿಕ ಕಾಲ 200 ಮೀಟರ್ ವ್ಯಾಪ್ತಿಯಲ್ಲಿ ಶೋಧಿಸಿದರು. ಆದರೆ ಮೊಬೈಲ್ ಪತ್ತೆಯಾಗಿಲ್ಲ.10 ದಿನ ಕಳೆದರೂ ಪತ್ತೆಯಾಗದ ಮೊಬೈಲ್ ರೇಣುಕಾಸ್ವಾಮಿ ಕೊಲೆಯಾಗಿ 10 ದಿನ ಕಳೆದರೂ ಆತನ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ.
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಜು ಅಲಿಯಾಸ್ ಧನರಾಜ್‌ನನ್ನು ರವಿವಾರ ಬಂಧಿಸಲಾಗಿದೆ. ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಿದ ಆರೋಪ ಈತನ ಮೇಲಿದೆ. ಆತನಿಂದ ಕರೆಂಟ್ ಶಾಕ್ ನೀಡಲು ಬಳಸಿದ ಮೆಗ್ಗರ್ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಲಿರುವುದರಿಂದ ದರ್ಶನ್ ಮತ್ತು ಗ್ಯಾಂಗ್‌ಗೆ ಬಲವಾದ ಸಂಕಷ್ಟ ಎದುರಾಗಿದೆ ಎಂದು ಮೂಲಗಳು ಹೇಳಿವೆ. 9ನೇ ಆರೋಪಿಯಾಗಿರುವ ಧನರಾಜ್, ಕರೆಂಟ್ ಶಾಕ್ ನೀಡಲು ನಂದೀಶ್ ಜತೆಗೂಡಿದ್ದ ಎಂಬ ಆರೋಪವಿದೆ.
Related Articles
Advertisement