Advertisement

Renukaswamy Case Follwup: ರೇಣುಕಾಸ್ವಾಮಿ ಮರ್ಮಾಂಗಕ್ಕೆ ತೀವ್ರ ಹಲ್ಲೆ?

10:13 PM Jun 13, 2024 | Team Udayavani |

ಬೆಂಗಳೂರು: ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಫೋಟೊ ಕಳಿಸಿದ್ದಾನೆ ಎನ್ನಲಾದ ರೇಣುಕಾಸ್ವಾಮಿಗೆ ಮರ್ಮಾಂಗ ಹಾಗೂ ದೇಹದ ಇತರ ಭಾಗಗಳಿಗೆ ಆರೋಪಿಗಳ ಜತೆಗೆ ಸೇರಿಕೊಂಡು ನಟ ದರ್ಶನ್‌ ಸಹ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಆದರೆ ತನಿಖಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Advertisement

ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಪೋಟೋ ಕಳುಹಿಸಿದ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ದರ್ಶನ್‌ ಸಿಟ್ಟಿನಿಂದ ಒದ್ದಿದ್ದಾರೆ ಎನ್ನಲಾಗುತ್ತಿದೆ. ಸಾಲದಕ್ಕೆ ಬೆಲ್ಟ್ನಿಂದಲೂ ಹಲ್ಲೆ ನಡೆಸಿದ್ದಾರೆ. ಇನ್ನು ಮುಂದೆ ಈ ರೀತಿ ಮಾಡದಂತೆ ಬೆದರಿಸಿ ಎಚ್ಚರಿಕೆ ಕೊಟ್ಟಿದ್ದಾರೆ ಎಂಬಿತ್ಯಾದಿ ಸಂಗತಿಯು ನಟ ದರ್ಶನ್‌ ಜತೆಗೆ ಬಂಧನಕ್ಕೊಳಗಾಗಿರುವ ಇತರ ಆರೋಪಿಗಳ ವಿಚಾರಣೆ ವೇಳೆ ತಿಳಿದು ಬಂದಿದೆ. ಪವಿತ್ರಾ ಗೌಡ ಅವರಿಗೆ ಅಶ್ಲೀಲ “ಫೋಟೋ ಕಳುಹಿಸ್ತೀಯಾ’ ಎಂದು ಆಕ್ರೋಶದಲ್ಲಿ ರೇಣುಕಾ ಸ್ವಾಮಿಯ ಕಾಲು ಅಗಲಿಸಿ ಆರೋಪಿಗಳು ಆತನ ಮರ್ಮಾಂಗಕ್ಕೆ ಒದ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ದರ್ಶನ್‌ ಮತ್ತು ಬಳಗದ ಏಟಿನ ಆಘಾತದಿಂದ ನೆಲದಲ್ಲಿ ಬಿದ್ದಿದ್ದ ರೇಣುಕಾ ಸ್ವಾಮಿ ತಪ್ಪಾಯ್ತು, ತನ್ನನ್ನು ಬಿಡುವಂತೆ ಪರಿ ಪರಿಯಾಗಿ ಕೇಳಿಕೊಂಡರೂ ಸಿಟ್ಟಿಗೆದ್ದಿದ್ದ ದರ್ಶನ್‌ ಮತ್ತು ತಂಡ  ಆತನಿಗೆ ಮತ್ತೆ ಹಲ್ಲೆ ಮಾಡಿದ್ದರು. ಅವರು ಹಲ್ಲೆ ನಡೆಸಿದ ರಭಸಕ್ಕೆ ರೇಣುಕಾಸ್ವಾಮಿಯ ತಲೆ ಗೋಡೌನ್‌ನಲ್ಲಿ ನಿಲ್ಲಿಸಿದ್ದ ಟೆಂಪೊಗೆ ತಗಲಿ ತಲೆಗೂ ಪೆಟ್ಟು ಬಿದ್ದಿತ್ತು. ಮರದ ತುಂಡು, ದೊಣ್ಣೆ ಸಹಿತ ಸ್ಥಳದಲ್ಲಿ ಸಿಕ್ಕಿದ ನಾನಾ ವಸ್ತುಗಳಿಂದ ರೇಣುಕಾಸ್ವಾಮಿ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಪೊಲೀಸರು ತಮ್ಮ ಶೈಲಿಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ನಡೆದ ಘಟನೆ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ. ಆಗ ಈ ಸಂಗತಿಯೂ ಬೆಳಕಿಗೆ ಬಂದಿದೆ.

ದರ್ಶನ್‌ ಕೂಡ ಪೊಲೀಸರ ವಿಚಾರಣೆ ವೇಳೆ ನಡೆದಿರುವ ಒಂದೊಂದೇ ವಿಚಾರದ ಬಗ್ಗೆ ಮಾಹಿತಿ ಬಿಚ್ಚಿಡುತ್ತಿದ್ದಾರೆ. ಇದೆಲ್ಲದಕ್ಕೂ ಪೂರಕವಾಗಿ ದರ್ಶನ್‌ ಮತ್ತು ತಂಡ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲೂ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next