Advertisement

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

10:35 AM Jun 29, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ(Renuka Swamy Case) ಪ್ರಕರಣದಲ್ಲಿ ನಟ ದರ್ಶನ್‌(Darshan Thoogudeepa) ಹಾಗೂ ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

ದರ್ಶನ್‌ ಆಪ್ತೆ ಪವಿತ್ರಾ ಗೌಡ (Pavithra Gowda) ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಮೆಸೇಜ್‌ ಮಾಡುತ್ತಿದ್ದ  ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಅಪಹರಿಸಿ, ಶೆಡ್‌ ವೊಂದರಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ, ಆ ಬಳಿಕ ಭೀಕರವಾಗಿ ಹತ್ಯೆಗೈದು ಮೋರಿಯೊಂದಕ್ಕೆ ಎಸೆಯಲಾಗಿತ್ತು.

ಮೊದಲಿಗೆ ಇದೊಂದು ಹಣಕಾಸು ವಿಚಾರಕ್ಕೆ ನಡೆದ ಕೊಲೆ, ಇದನ್ನು ನಾವೇ ಮಾಡಿದ್ದೇವೆ ಎಂದು ಇಬ್ಬರು ಆರೋಪಿಗಳು ಠಾಣೆಗೆ ಬಂದು ಶರಣಾಗಿದ್ದರು. ಆ ಬಳಿಕ ತೀವ್ರ ವಿಚಾರಣೆ ನಡೆಸಿದ ಬಳಿಕ ದರ್ಶನ್‌ ಸೂಚನೆ ಮೇರೆಗೆ ಕೊಲೆ ಮಾಡಿದ್ದೇವೆ ಎಂದು ತಪ್ಪೋಪ್ಪಿಕೊಂಡಿದ್ದಾರೆ.

ಈ ಪ್ರಕರಣದ ಸಂಬಂಧ ತೀವ್ರ ವಿಚಾರಣೆ ನಡೆಸಿದ ಬಳಿಕ ಎ1 ಪವಿತ್ರಾ ಗೌಡ, ಎ2 ದರ್ಶನ್‌ ಸೇರಿ 18 ಮಂದಿಯನ್ನು ಮೊದಲಿಗೆ ಬಂಧಿಸಲಾಗಿತ್ತು. ಇದರಲ್ಲಿ ಸದ್ಯ 14 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣ ದೇಶದಲ್ಲೇ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕಿರುತೆರೆಯಲ್ಲಿ ಈ ಘಟನೆಯನ್ನು ಆಧರಿಸಿಯೇ ಎಪಿಸೋಡ್‌ ವೊಂದರ ಪ್ರೋಮೊ ರಿಲೀಸ್‌ ಆಗಿ ಸದ್ದು ಮಾಡಿದೆ.

Advertisement

ಖಾಸಗಿ ವಾಹಿನಿಯ ‘ಶಾಂತಂ ಪಾಪಂ’ ಎನ್ನುವ ಕ್ರೈಮ್‌ ಕಥಾನಕದ ಕಾರ್ಯಕ್ರಮವೊಂದಲ್ಲಿ ರೇಣುಕಾಸ್ವಾಮಿ ಪ್ರಕರಣವನ್ನು ಹೋಲುವ ಎಪಿಸೋಡ್‌ ವೊಂದು ಪ್ರಸಾರ ಆಗಲಿದೆ.

ಈ ಡೇಡ್ ಡೆವಿಲ್ ದೇವದಾಸ್‌ ಎನ್ನುವ  ಎಪಿಸೋಡ್‌ ಇದಾಗಿದ್ದು, ಇದರಲ್ಲಿ ಒಬ್ಬ ಶ್ರೀಮಂತನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಪ್ರಭಾವಿಗಳ ಒತ್ತಡ ಕೇಳಿಬಂದರೂ ಪೊಲೀಸರು ಆತನನ್ನು ಬಂಧಿಸುತ್ತಾರೆ. ಈತನಿಗೆ ಸಂಸಾರಯಿದ್ದರೂ ಈತ ಒಂದು ಹೆಣ್ಣಿನ ಜೊತೆ ಸಂಬಂಧವನ್ನಿಟ್ಟುಕೊಂಡಿರುತ್ತಾನೆ. ಆ ಹೆಣ್ಣಿಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಮೆಸೇಜ್‌ ಗಳನ್ನು ಮಾಡುತ್ತಾನೆ. ಇದನ್ನರಿತ ಶ್ರೀಮಂತ ವ್ಯಕ್ತಿ ತನ್ನ ಪ್ರಭಾವವನ್ನು ಬಳಸಿಕೊಂಡು ಕೆಟ್ಟದಾಗಿ ಮೆಸೇಜ್‌ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ತನ್ನ ಸಹಚರರೊಂದಿಗೆ ಸೇರಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡುವ ದೃಶ್ಯವನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಇಲ್ಲಿ ಗರ್ಭಿಣಿ ಪತ್ನಿ ನೋವು, ಅಕ್ರಮ ಸಂಬಂಧದ ಹಿನ್ನೆಲೆ ಮುಂತಾದ ಸನ್ನಿವೇಶವನ್ನು ತೋರಿದಸಲಾಗಿದ್ದು, ಇದು ರೇಣುಕಾಸ್ವಾಮಿ ಕೇಸ್‌ ಎಂದು ಅನೇಕ ವೀಕ್ಷಕರು ಪ್ರೋಮೊ ಕೆಳಗೆ ಕಾಮೆಂಟ್‌ ಮಾಡಿದ್ದಾರೆ.

ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಆಧಾರಿಸಿ ‘ಶಾಂತಂ ಪಾಪಂ’ ನಲ್ಲಿ ಸಿರೀಸ್‌ ರೀತಿ ಪ್ರಸಾರ ಮಾಡಲಾಗುತ್ತದೆ. ಸೋಮ – ಶುಕ್ರ ರಾತ್ರಿ 10:30ಕ್ಕೆ ಕಾರ್ಯಕ್ರಮ ಪ್ರಸಾರವಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next