Advertisement
ಮಂಗಳವಾರ ಪುತ್ರಿ ಖುಷಿ, ಸಹೋದರ ಹಾಗೂ ಪೋಷಕರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ತೆರಳಿ ಪವಿತ್ರಾಗೌಡಳನ್ನು ಭೇಟಿಯಾಗಿ ಕೆಲ ಹೊತ್ತು ಮಾತನಾಡಿದರು. ಆಗ ಪುತ್ರಿಯನ್ನು ಕಂಡ ಪವಿತ್ರಾಗೌಡ, ಕೆನ್ನೆ ಸವರುತ್ತ ಕಣ್ಣೀರಿಟ್ಟಿದ್ದಾಳೆ. ಕ್ಷಮಿಸಿ ಎಂದೆಲ್ಲ ಕೇಳಿಕೊಂಡಿದ್ದಾರೆ. ಆಗ ಸಹೋದರ ಹಾಗೂ ಪೋಷಕರು ಧೈರ್ಯ ತುಂಬಿ, ನಾವು ನಿನ್ನೊಂದಿಗೆ ಇದ್ದೇವೆ. ಯೋಜನೆ ಮಾಡಬೇಡ ಎಂದು ಆತ್ಮವಿಶ್ವಾಸ ತುಂಬಿ, ವಾಪಸ್ ತೆರಳಿದರು.
ಆ ನಂತರ ಮಧ್ಯಾಹ್ನ ಮತ್ತೂಮ್ಮೆ ಕಾರಿನಲ್ಲಿ ಬಂದ ಪವಿತ್ರಾಗೌಡ ಸಹೋದರ ಯಾರೊಂ ದಿಗೆ ಮಾತನಾಡದೆ ನೇರವಾಗಿ ಕಾರಾಗೃಹದ ಬಳಿ ಅಧಿಕಾರಿಗಳ ಜತೆ ಕೆಲ ಕಾಲ ಚರ್ಚಿಸಿದ್ದಾರೆ. ನಂತರ ಕಾರಿನ ಬಳಿ ಬಂದು ಕಪ್ಪು ಬಣ್ಣದ ಬ್ಯಾಗ್ ಕೊಂಡೊಯ್ದು, ಪವಿತ್ರಾಗೌಡಗೆ ಕೊಡಲಾಗಿದೆ. ಅದರಲ್ಲಿ ಊಟ ಹಾಗೂ ದಿನ ಬಳಕೆ ವಸ್ತುಗಳು ಇತ್ತು ಎಂದು ಹೇಳಲಾಗಿದೆ. ಐಷಾರಾಮಿ ಜೀವನ, ಡಯಟ್ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪವಿತ್ರಾಗೌಡಗೆ ಜೈಲಿನಲ್ಲಿ ನೀಡುವ ಅನ್ನ, ಮುದ್ದೆ, ಚಪಾತಿ ಇಷ್ಟವಾಗುತ್ತಿಲ್ಲ. ಜತೆಗೆ ಸೊಳ್ಳೆ ಕಾಟಕ್ಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಆಕೆಗೆ ಅಗತ್ಯವಿರುವ ವಸ್ತುಗಳನ್ನು ಸಹೋದರ ಬ್ಯಾಗ್‌ನಲ್ಲಿ ಕೊಂಡೊಯ್ದಿದ್ದಾನೆ ಎಂದು ಹೇಳಲಾಗಿದೆ.