Advertisement

Renukaswamy Case: ಪವಿತ್ರಾಗೌಡ ಮಾಸ್ಟರ್‌ಮೈಂಡ್‌!

11:25 AM Jun 21, 2024 | Team Udayavani |

ಬೆಂಗಳೂರು:  ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಗೆಳತಿ ಪವಿತ್ರಾಗೌಡ ಮಾಸ್ಟರ್‌ ಮೈಂಡ್‌ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಪೊಲೀಸ್‌ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆಕೆ ಯನ್ನು ಸದ್ಯ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾ ಗಿದೆ. ಇದೇ ವೇಳೆ ಕೃತ್ಯದಲ್ಲಿ ಈಕೆಯ ಪಾತ್ರದ ಬಗ್ಗೆ ತನಿಖಾಧಿಕಾರಿಗಳು ಕೋರ್ಟ್‌ಗೆ ಕೆಲವೊಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಈಕೆಯೇ ಪ್ರಕರಣದ ಪ್ರಮುಖ ಕಾರಣಕರ್ತೆಯಾಗಿದ್ದು, ಈಕೆಯ ಪ್ರಚೋದನೆಯಿಂದಲೇ ಇತರೆ ಆರೋಪಿಗಳು ಕೊಲೆ ಒಳಸಂಚು ರೂಪಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈಕೆಗೆ ರೇಣುಕಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶವನ್ನು ದರ್ಶನ್‌ಗೆ ತೋರಿಸಿ ಕೃತ್ಯಕ್ಕೆ ಪ್ರಚೋದನೆ ನೀಡಿದ್ದಳು. ಅದರಿಂದ ದರ್ಶನ್‌, ತನ್ನ ಅಭಿಮಾನಿ ಬಳಗ ಹಾಗೂ ಆಪ್ತರ ಮೂಲಕ ಚಿತ್ರ ದುರ್ಗದಿಂದ ರೇಣುಕ ಸ್ವಾಮಿಯನ್ನು ಕರೆಸಿಕೊಂಡು ಹತ್ಯೆ ಮಾಡಿದ್ದಾನೆ.

ಶೆಡ್‌ ದುಷ್ಕೃತ್ಯ ಎಸಗುವ ಅಡ್ಡ: ಪಟ್ಟಣಗೆರೆ ಜಯಣ್ಣ ಎಂಬಾತನಿಗೆ ಸೇರಿದ ಶೆಡ್‌ ದುಷ್ಕೃತ್ಯಗಳ ಎಸಗುವ ಅಡ್ಡೆ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ತನ್ನ ಸಂಬಂಧಿ ಜಯಣ್ಣಗೆ ಸೇರಿದ ಶೆಡ್‌ನ್ನು ವಿನಯ್‌, ತನ್ನ ಸ್ನೇಹಿತ ದೀಪಕ್‌ ಜತೆ ನಿರ್ವಹಿಸುತ್ತಿದ್ದ. ಅಲ್ಲದೆ, ವಿನಯ್‌, ತನ್ನ ದುಷ್ಕೃತ್ಯಗಳು ಹಾಗೂ ಇತರೆ ಅಕ್ರಮ ಚಟುವಟಿಕೆಗಳ ಎಸಗಲು ಇದನ್ನೇ ಅಡ್ಡೆಯನ್ನಾಗಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Advertisement

ಕೆಲ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳಿಸಿದ ರೇಣುಕಸ್ವಾಮಿ  

ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನಿಂದ ಹತ್ಯೆಗೊಳಗಾದ ಚಿತ್ರದುರ್ಗದ ರೇಣುಕಸ್ವಾಮಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಕೆಲ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿರುವುದಾಗಿ ತಿಳಿದು ಬಂದಿದೆ.

ರಾಜ್ಯಾದ್ಯಂತ ಭಾರಿ ಕೋಲಾಹಲ ಎಬ್ಬಿಸಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆತನ ಹಿನ್ನೆಲೆ ಕೆದಕುತ್ತಾ ಹೋದಾಗ ಇನ್‌ಸ್ಟಾಗ್ರಾಂನಲ್ಲಿ ಕೆಲ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಅಶ್ಲೀಲ ಸಂದೇಶದ ಜತೆಗೆ ಆತನ ಆಕ್ಷೇಪಾರ್ಹ ಫೋಟೋಗಳನ್ನು ಸಹ ಕಳುಹಿಸಿದ್ದಾನೆ ಎನ್ನಲಾಗಿದೆ. ಇನ್‌ಸ್ಟಾಗ್ರಾಂ ಖಾತೆಯಿಂದ ಅಶ್ಲೀಲ ಸಂದೇಶಗಳು, ಫೋಟೋಗಳನ್ನು ಕಳಿಸಿರುವ ಬಗ್ಗೆ ಇಬ್ಬರು ಮಹಿಳೆಯರು ರೇಣುಕಸ್ವಾಮಿ ವಿರುದ್ಧ ಈ ಹಿಂದೆ ಆರೋಪಿಸಿದ್ದರು. ಸಾಮಾಜಿಕ ಜಾಲತಾಣ ಗಳನ್ನು ಹೆಚ್ಚೆಚ್ಚು ಸಕ್ರಿಯನಾಗಿದ್ದ ರೇಣುಕಸ್ವಾಮಿ ಇತ್ತೀಚೆಗೆ ನಟ ದರ್ಶನ್‌ ಸ್ನೇಹಿತೆ ಪವಿತ್ರಾಗೌಡಗೂ ಇದೇ ರೀತಿಯ ಸಂದೇಶಗಳು ಹಾಗೂ ಖಾಸಗಿ ಭಾಗಗಳ ಫೋಟೋಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಪವಿತ್ರಾ ಈ ಸಂಗತಿಯನ್ನು ತನ್ನ ಮನೆಕೆಲಸದಾತ ಪವನ್‌ಗೆ ತಿಳಿಸಿದ್ದಳು.

ಚಾಟ್‌ ಮಾಡಿ ರೇಣುಕಸ್ವಾಮಿ ನಂಬರ್‌ ಪಡೆದಿದ್ದ ಪವನ್‌!:  ಇತ್ತ ಪವನ್‌ ಈ ವಿಚಾರವನ್ನು ದರ್ಶನ್‌ ಗಮನಕ್ಕೆ ತಂದಿದ್ದ. ಜತೆಗೆ ಪವಿತ್ರಾ ಹೆಸರಿನಲ್ಲಿ ರೇಣುಕಸ್ವಾಮಿ ಜತೆಗೆ ಇನ್‌ ಸ್ಟಾಗ್ರಾಂನಲ್ಲಿ ಚಾಟ್‌ ಮಾಡಿಕೊಂಡು ಆತನ ನಂಬರ್‌ ಪಡೆದುಕೊಂಡಿದ್ದ. ಪವಿತ್ರಾ ಗೌಡ ತಮ್ಮ ಬಳಿ ಚಾಟ್‌ ಮಾಡಿರಬಹುದು ಎಂದು ನಂಬಿದ್ದ ರೇಣುಕಸ್ವಾಮಿ ತನ್ನ ಮೊಬೈಲ್‌ ನಂಬರ್‌ ಅನ್ನು ಹಂಚಿಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ “ಡಿ’ ಗ್ಯಾಂಗ್‌ ಆತನ ಮೊಬೈಲ್‌ ನಂಬರ್‌ ಆಧಾರದಲ್ಲಿ ಆತನ ಜಾಡು ಹಿಡಿದಾಗ ಚಿತ್ರದುರ್ಗದಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಳಿವು ಸಿಕ್ಕಿತ್ತು.

ಚಿತ್ರದುರ್ಗ ಜಿಲ್ಲೆಯ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಆರೋಪಿ ರಾಘವೇಂದ್ರನನ್ನು ನಟ ದರ್ಶನ್‌ ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಮೊಬೈಲ್‌ ಹಾಗೂ ಫೋಟೋ ಆಧರಿಸಿ ರಾಘವೇಂದ್ರ ಚಿತ್ರದುರ್ಗದಲ್ಲಿ ಹುಡುಕಾಟ ನಡೆಸಿ ರೇಣುಕಸ್ವಾಮಿಯನ್ನು ಪತ್ತೆಹಚ್ಚಿದ್ದ. ಜೂನ್‌ 8ರಂದು ಚಿತ್ರದುರ್ಗದಲ್ಲಿ ರೇಣುಕಸ್ವಾಮಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಬಂದು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆ ತರಲಾಗಿತ್ತು. ನಂತರ “ಡಿ’ ಗ್ಯಾಂಗ್‌ ಆತನಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿತ್ತು. ಬಳಿಕ ರಾಜಕಾಲುವೆ ಬಳಿ ಮೃತದೇಹ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next