Advertisement

Renukaswamy case: ರೆಡ್ಡಿ 2205 ಖಾತೆಯ ಮೂಲಕ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌

11:32 AM Jun 12, 2024 | Team Udayavani |

ಬೆಂಗಳೂರು: ಮಾಜಿ ನಟಿ ಪವಿತ್ರಾ ಗೌಡಗೆ ಫೇಕ್‌ ಅಕೌಂಟ್‌ ಮೂಲಕ ಪದೇ ಪದೆ ಅಶ್ಲೀಲ ಮೆಸೇಜ್‌ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ದರ್ಶನ್‌ ಟೀಂ ಪತ್ತೆ ಹಚ್ಚಲು ಬಹಳ ಶ್ರಮಪಟ್ಟಿದೆ. ಈ ಅಶ್ಲೀಲ ಮೆಸೇಜ್‌ ಅನ್ನು ಮಾಡುತ್ತಿರುವವರು ಯಾರು? ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು.

Advertisement

ಈ ಕಾರಣಕ್ಕಾಗಿಯೇ ದರ್ಶನ್‌ ಟೀಂನ ಪವನ್‌ ಮತ್ತು ಕೆಲವರು ನಕಲಿ ಖಾತೆ ತೆರೆದು ರೇಣುಕಾಸ್ವಾಮಿಯ ಫೇಕ್‌ ಅಕೌಂಟ್‌ಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿ ಬಳಿಕ ಚಾಟ್‌ ಮಾಡಿದ್ದಾರೆ. ಅಲ್ಲಿಂದ ಆತನ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಆಮೇಲೆ ಚಿತ್ರದುರ್ಗದಲ್ಲಿರುವ ದರ್ಶನ್‌ ತೂಗುದೀಪ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ತಿಳಿಸಿ ಜೂನ್‌ 8ರಂದು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಪವಿತ್ರಾಗೌಡಗೆ ಅಶ್ಲೀಲ ಸಂದೇಶ: ರೇಣುಕಾಸ್ವಾಮಿ ದರ್ಶನ್‌ನ ಕಟ್ಟಾ ಅಭಿಮಾನಿ, ಎಕ್ಸ್‌ನಲ್ಲಿ “ರೆಡ್ಡಿ 2205′ ಎಂಬ ನಕಲಿ ಖಾತೆ ತೆರೆದು, “ನಮ್ಮ ಡಿ ಬಾಸ್‌ ಮತ್ತು ಅತ್ತಿಗೆ ವಿಜಯಲಕ್ಷ್ಮಿಯಿಂದ ದೂರ ಇರಬೇಕು. ಅವರ ಕುಟುಂಬಕ್ಕೆ ತೊಂದರೆ ಕೊಡಬೇಡ’ ಎಂದು ನಿರಂತರವಾಗಿ ಪವಿತ್ರಾ ಜತೆ ಚಾಟ್‌ ಮಾಡಿದ್ದಾನೆ. ಜತೆಗೆ ಅಶ್ಲೀಲವಾಗಿಯೂ ಚಾಟ್‌ ಮಾಡಿದ್ದಾನೆ.

ಕೊಲೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ, ಕೊಲೆಯಾದವನು ಗೊತ್ತಿಲ್ಲ: ದರ್ಶನ್‌

Advertisement

ನ್ಯಾಯಾಧೀಶರ ಮುಂದೆಯೇ ಕಣ್ಣೀರಿಟ್ಟ ಚಾಲೆಂಜಿಂಗ್‌ ಸ್ಟಾರ್‌

ಬೆಂಗಳೂರು: ಮೈಸೂರಿನಿಂದ ಅನ್ನ ಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಗೆ ಕರೆತಂದ ದರ್ಶನ್‌ಗೆ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ರೇಣುಕಾಸ್ವಾಮಿ ಯಾರೆಂದು ಗೊತ್ತಿಲ್ಲ. ಈ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳ ಫೋಟೋ ತೋರಿಸಿ ಕೇಳಿದಾಗ, ಈ ಎಲ್ಲರ ಪರಿಚಯವಿದೆ. ಈ ಪೈಕಿ ಒಬ್ಬ ಚಾಲಕ, ಮ್ಯಾನೇಜರ್‌ ಹಾಗೂ ಇತರರು ಆಪ್ತರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ ದರ್ಶನ್‌ಗೆ ತೋರಿಸಿದಾಗ ಸುಮ್ಮನಾಗಿದ್ದಾರೆ ಎಂದು ಹೇಳಲಾಗಿದೆ.

ಕೋರ್ಟ್‌ನಲ್ಲಿ ಕಣ್ಣೀರಿಟ್ಟರು: ಮಂಗಳವಾರ ಸಂಜೆ ದರ್ಶನ್‌ ಸೇರಿ ಎಲ್ಲ 13 ಮಂದಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ದರ್ಶನ್‌ ಮತ್ತು ಪವಿತ್ರಾಗೌಡ ನ್ಯಾಯಾಧೀಶರ ಎದುರು ಭಾವುಕರಾದ ಪ್ರಸಂಗ ಕೂಡ ನಡೆಯಿತು.

ಪವಿತ್ರಾ ಗೌಡ ಯಾರು?

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿಕೊಟ್ಟವರು. ಎಸ್‌ .ನಾರಾಯಣ್‌ ನಿರ್ದೇಶನದ “ಛತ್ರಿಗಳು ಸಾರ್‌ ಛತ್ರಿಗಳು’ ಸಿನಿಮಾದ ನಾಯಕಿಯರಲ್ಲೊಬ್ಬರಾಗಿದ್ದಾರೆ. ಆ ನಂತರ ಅಗಮ್ಯ ಸೇರಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಚಿತ್ರರಂಗದಿಂದ ದೂರವಾಗಿದ್ದ ಪವಿತ್ರಾ ಹೆಸರು ಕೇಳಿಬಂದಿದ್ದು ದರ್ಶನ್‌ ಜತೆಗೆ. ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದ ಪವಿತ್ರಾ “ನಮ್ಮ ಸಂಬಂಧಕ್ಕೆ ಹತ್ತು ವರ್ಷಗಳಾಗಿವೆ’ ಎಂದು ಬರೆದುಕೊಂಡು ಜಗಜ್ಜಾಹೀರು ಮಾಡಿದ್ದಳು. ಇದಕ್ಕೆ “ಕರ್ಮ ರಿಟರ್ನ್ಸ್’ ಎಂದು ವಿಜಯಲಕ್ಷ್ಮಿ ಹೇಳಿದ್ದರು.

ಮದುವೆಯಾಗಿದ್ದ ಪವಿತ್ರಾ

ಪವಿತ್ರಾ ಗೌಡಗೆ ಚಿತ್ರರಂಗಕ್ಕೆ ಬರುವ ಮುನ್ನವೇ ಮದುವೆಯಾಗಿತ್ತು. ಸಂಜಯ್‌ ಎನ್ನುವರನ್ನು ವಿವಾಹವಾಗಿ, ಬಳಿಕ ಡೈವೋರ್ಸ್‌ ಪಡೆದಿದ್ದರು. ಇವರಿಗೆ ಖುಷಿ ಎಂಬ ಮಗಳಿದ್ದಾಳೆ. ಕೆಲವು ತಿಂಗಳ ಹಿಂದೆ ಪವಿತ್ರಾ ಗೌಡ ಪುತ್ರಿ ಖುಷಿ ಜತೆ ದರ್ಶನ್‌ ಡ್ಯಾನ್ಸ್‌ ಮಾಡಿದ ವಿಡಿಯೋ ವೈರಲ್‌ ಆಗಿತ್ತು.

ಹಾದಿ ತಪ್ಪಿಸಲು ಬಂದವರಿಂದಲೇ ಕೊಲೆ ಹಿಂದಿನ ರಹಸ್ಯ ಬಯಲು!

ಹಣಕಾಸು ವಿಚಾರಕೆ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣು

ಬೆಂಗಳೂರು: ಕಾಮಾಕ್ಷಿಪಾಳ್ಯದ ಸತ್ವ ಅಪಾರ್ಟ್‌ಮೆಂಟ್‌ ಸಮೀಪದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆತಂಕಗೊಂಡ ನಾಲ್ವರು ಹಂತಕರು, ಪೊಲೀಸ್‌ ಠಾಣೆಗೆ ಬಂದು ಶರಣಾಗಿ, ಮೃತ ವ್ಯಕ್ತಿಯ ಹೆಸರು ಹಾಗೂ ಹತ್ಯೆ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ನಾವೇ ಹಣಕಾಸಿನ ವಿಚಾರಕ್ಕೆ ಕೊಂದಿದ್ದಾಗಿ ಹೇಳಿಕೆ ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು, ನಾಲ್ವರನ್ನು ಯಾರ ಮಾಹಿತಿ ಮೇರೆಗೆ ಠಾಣೆಗೆ ಬಂದು ಶರಣಾಗಿದ್ದಿರಿ? ಎಂದೆಲ್ಲ ಪ್ರಶ್ನಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾರೆ. ಆರೋಪಿಗಳನ್ನು ಪೊಲೀಸ್‌ ಶೈಲಿಯಲ್ಲಿ ವಿಚಾರಿಸಿದಾಗ ಇತರ 7 ಮಂದಿ ಹಂತಕರ ಹೆಸರು ಬಾಯಿಬಿಟ್ಟಿದ್ದಾರೆ.

ಅನುಮಾನ ಬಂದಿದ್ದು ಇಲ್ಲಿಂದ: ಜೂ. 10ರಂದು ಆರೋಪಿಗಳ ಪೈಕಿ ನಾಲ್ವರು ಏಕಾಏಕಿ ಪೊಲೀಸರಿಗೆ ಶರಣಾಗಿ, ಹಣ ಕಾಸಿನ ವಿಚಾರಕ್ಕೆ ತಾವೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿ ಕೊಂಡಿ ದ್ದಾರೆ. ಅನುಮಾನ ಗೊಂಡ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌, ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇತರ 7 ಮಂದಿ ಹೆಸರನ್ನು ಬಾಯಿಬಿಟ್ಟಿದ್ದರು. ಇದಕ್ಕೂ ಮುನ್ನ ಜೂ.9ರಂದು ಮಂಜಾನೆ ಫ‌ುಡ್‌ ಡೆಲಿವರಿ ಬಾಯ್‌, ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next