ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಡಿ.06) ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರ ವಾದ ಆಲಿಸಿ ಡಿ.9ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
ಇಂದು ಮಧ್ಯಾಹ್ನ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ನ್ಯಾ.ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ ಪಿಪಿ(SPP) ಪ್ರಸನ್ನ ಕುಮಾರ್ ಅವರು, 30-10-2024ರಂದು ತಾವು ನೀಡಿದ್ದ ಜಾಮೀನು ಆದೇಶದ ಕುರಿತು ವಾದ ಮಂಡಿಸುವುದಾಗಿ ತಿಳಿಸಿದ್ದರು. “ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡದಿದ್ರೆ ಲಕ್ವ ಹೊಡೆಯುತ್ತದೆ ಎಂದು ವಾದಿಸಿದ್ದರು.
ವೈದ್ಯರು ನೀಡಿರುವ ಮೊದಲ ವರದಿಯಲ್ಲಿ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದಿದೆ. ಈಗ ನೀಡಿರುವ ಎರಡನೇ ವರದಿಯಲ್ಲಿ ದರ್ಶನ್ ಬಿಪಿ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ 2.25 ಪೈಸೆ ಮಾತ್ರೆ ತಿಂದರೆ ಬಿಪಿ ನಿಯಂತ್ರಿಸಲು ಸಾಧ್ಯವಿದೆ. ಈಗ ಶಸ್ತ್ರಚಿಕಿತ್ಸೆ ನಡೆಸದೇ, ಕೇವಲ ಪಿಸಿಯೋಥೆರಪಿ ಮಾತ್ರ ನೀಡುತ್ತಿದ್ದಾರೆ ಎಂದು ಎಸ್ ಪಿಪಿ ವಾದ ಮಂಡಿಸಿದ್ದಾರೆ.
ನಾನು ಇಂದಲ್ಲ, ನಾಳೆ ಸರ್ಜರಿ ಮಾಡಬಹುದೆಂದು ಕಾಯುತ್ತಿದ್ದೆ.ಆದರೆ ಇವರು ಸಿನಿಮಾ ಗೀತೆಯಂತೆ ವರದಿ ಸಲ್ಲಿಸಿದ್ದಾರೆ. ಅಶ್ಲೀಲ ಮೆಸೇಜ್ ಕಳುಹಿಸಿದಾಗ ಅದನ್ನು ಬ್ಲಾಕ್ ಮಾಡುವ ಅವಕಾಶವಿತ್ತು. ಸೆಂಡ್ ಮಿ ಯುವರ್ ನಂಬರ್ ಎಂದು ರೇಣುಕಾಸ್ವಾಮಿ ಇನ್ ಸ್ಟಾ ಗ್ರಾಮ್ ಗೆ ಪವಿತ್ರಾ ಗೌಡ ಸಂದೇಶ ಕಳುಹಿಸಿದ್ದರು. ನಂತರ ಪವಿತ್ರಾ ಗೌಡ ತನ್ನ ನಂಬರ್ ಎಂದು ಪವನ್ ನಂಬರ್ ನೀಡಿದ್ದರು. ಇದರ ಜತೆಗೆ ರೇಣುಕಾಸ್ವಾಮಿ ಘಟನೆ ಸಂದರ್ಭದಲ್ಲಿ ತನ್ನ ಬಿಟ್ಟು ಬಿಡಿ ಎಂದು ಹೇಳಿ ಕೈ ಮುಗಿಯುವ ಫೋಟೋ ಸಿಕ್ಕಿದೆ. ವಾಹನಗಳು ಬರ್ತಿರುವ ಬಗ್ಗೆ6 ಜನರ ಸಾಕ್ಷಿ ಇದೆ. ರೇಣುಕಾ ಸ್ವಾಮಿ ಬಟ್ಟೆ ಬಿಚ್ಚಿ ಅಮಾನವೀಯವಾಗಿ ಹಾಗೂ ಮಾರಣಾಂತಿಕವಾಗಿ ಹೊಡೆದಿರುವುದಾಗಿ ಎಸ್ ಪಿಪಿ ವಾದ ಮಂಡಿಸಿದ್ದಾರೆ.
ವಾದವನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ.ವಿಶ್ವಜಿತ್ ಶೆಟ್ಟಿ ಅವರು, ಡಿ.9ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿರುವುದಾಗಿ ತಿಳಿಸಿದರು.