Advertisement

ಪವಿತ್ರಾ ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ಕೇಳಿ ಬರ್ತಿದೆ ಮತ್ತೊಬ್ಬ ಮಹಿಳೆ ಹೆಸರು ಯಾರೀಕೆ?

06:15 PM Jun 12, 2024 | Team Udayavani |

ಬೆಂಗಳೂರು: ಕನ್ನಡದ ಖ್ಯಾತ ನಟ ದರ್ಶನ್‌ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವವನ ಹತ್ಯೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, 17 ಮಂದಿಯ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ.

Advertisement

ಘಟನೆ ನಡೆದ ಬಳಿಕ ವಿಚಾರಣೆಯಲ್ಲಿ ಒಂದೊಂದೇ ಆಘಾತಕಾರಿ ವಿಚಾರಗಳು ಬೆಳಕಿಗೆ ಬರುತ್ತಿದೆ. ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್‌ ಹಾಗೂ ಕಾಮೆಂಟ್‌ ಮಾಡುತ್ತಿದ್ದ ಕಾರಣ ರೇಣುಕಾಸ್ವಾಮಿ ಅವರನ್ನು ಅಪಹರಿಸಿ, ಬೆಂಗಳೂರಿನ ಶೆಡ್‌ ವೊಂದರಲ್ಲಿ ಇರಿಸಿ ಹಲ್ಲೆ ಮಾಡಿ, ಹತ್ಯೆಗೈದು ಮೃತದೇಹವನ್ನು ಮೋರಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ದರ್ಶನ್‌ ಅವರು ನೇರವಾಗಿ ಭಾಗಿಯಾಗಿದ್ದು, ರೇಣುಕಾಸ್ವಾಮಿ ಅವರಿಗೆ ಹಲ್ಲೆ ಮಾಡಿದ ಗ್ಯಾಂಗ್‌ ನಲ್ಲಿ ದರ್ಶನ್‌ ಕೂಡ ಇದ್ದರು ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಪ್ರಕರಣ ಸಂಬಂಧ ಮತ್ತೊಬ್ಬ ಮಹಿಳೆಯ ಹೆಸರು ಕೂಡ ಕೇಳಿ ಬರುತ್ತಿದೆ.

ಆಶ್ಲೀಲ ಮೆಸೇಜ್‌ ಮಾಡಿದ್ದನ್ನು ಪವಿತ್ರಾಗೆ ತಿಳಿಸಿದ್ದು ಯಾರು?: ದರ್ಶನ್‌ ಅಭಿಮಾನಿ ಎನ್ನಲಾದ ರೇಣುಕಾಸ್ವಾಮಿ ಕಳೆದ ಕೆಲ ತಿಂಗಳಿನಿಂದ ದರ್ಶನ್‌ ಹಾಗೂ ವಿಜಯಲಕ್ಷ್ಮೀ ಅವರ ಸಂಬಂಧಕ್ಕೆ ಯಾರು ಕೂಡ ಅಡ್ಡಿಯಾಗಬಾರದೆನ್ನುವ ನಿಟ್ಟಿನಲ್ಲಿ ದರ್ಶನ್‌ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಆಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ. ನೀನು ನಮ್ಮ ಬಾಸ್‌ ಸಂಸಾರದಲ್ಲಿ ಬರುವುದು ಸರಿಯಲ್ಲ ಎಂದು ಪವಿತ್ರಾ ಗೌಡಗೆ ಆಶ್ಲೀಲವಾದ ಕಾಮೆಂಟ್‌ ಗಳನ್ನು ಮಾಡುತ್ತಿದ್ದ. ಇದಲ್ಲದೆ ಕೆಲ ದಿನಗಳ ಹಿಂದಷ್ಟೇ ರೇಣುಕಾಸ್ವಾಮಿ ಮರ್ಮಾಂಗದ ಫೋಟೋ ಕಳುಹಿಸಿ ಕೆಟ್ಟದಾಗಿ ಮೆಸೇಜ್‌ ಮಾಡಿದ್ದ.

ಪೊಲೀಸ್‌ ಕಸ್ಟಡಿಯಲ್ಲಿರುವ ನಟಿ ಪವಿತ್ರಾ ಗೌಡ, ಪ್ರಕರಣದಲ್ಲಿ ಎ1 ಆಗಿದ್ದಾರೆ. ಪೊಲೀಸರು ಅವರನ್ನು ಕಳೆದ ಕೆಲ ಗಂಟೆಗಳಿಂದ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.

Advertisement

ಪೊಲೀಸರ ವಿಚಾರಣೆಯಲ್ಲಿ ಪವಿತ್ರಾ ಗೌಡ ರಜಿನಿ ಎನ್ನುವಾಕೆಯ ಹೆಸರನ್ನು ಹೇಳಿರುವುದಾಗಿ ʼಬಿಟಿವಿʼ ವಾಹಿನಿ ವರದಿ ಮಾಡಿದೆ.

ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಿದ್ದ ಬಗ್ಗೆ ಪವಿತ್ರಾ ಗೌಡಗೆ ರಜಿನಿ ಹೇಳಿರುವುದಾಗಿ  ವರದಿ ತಿಳಿಸಿದೆ.

ಯಾರು ಈ ರಜಿನಿ?: ʼರಜಿನಿ ಎಕ್ಸ್‌ ಪ್ರೆಸ್‌ʼ ಎನ್ನುವ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿರುವ ರಜಿನಿ, ಅವರ ಚಾನೆಲ್‌ ನಲ್ಲಿ ದರ್ಶನ್‌ ಗೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ಅಪ್ಲೋಡ್‌ ಮಾಡುತ್ತಿದ್ದರು. ಇದರಿಂದ ದರ್ಶನ್‌ ಹಾಗೂ ಪವಿತ್ರಾ ವಿಶ್ವಾಸವನ್ನು ರಜಿನಿ ಗಳಿಸಿದ್ದರು. ಪವಿತ್ರಾ ಅವರನ್ನು ಸೋಶಿಯಲ್‌ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದ ರಜಿನಿ ಕೆಟ್ಟ ಕಾಮೆಂಟ್‌ ಮಾಡುತ್ತಿದ್ದವರ ಬಗ್ಗೆ ಪವಿತ್ರಾ ಅವರ ಗಮನಕ್ಕೆ ತರುತ್ತಿದ್ದರು. ಇದರಲ್ಲಿ ರೇಣುಕಾಸ್ವಾಮಿ ಕಾಮೆಂಟ್‌ ಕೂಡ ಇತ್ತು ಎನ್ನಲಾಗಿದೆ.

ಈ ವಿಚಾರ ಪವಿತ್ರಾಗೆ ಗೊತ್ತಾಗಿ ಪವಿತ್ರಾ ದರ್ಶನ್‌ ಅವರಿಗೆ ಹೇಳಿರುವುದಾಗಿ ವರದಿ ತಿಳಿಸಿದೆ.

ಪ್ರಕರಣ ಸಂಬಂಧ ದರ್ಶನ್‌, ಪವಿತ್ರಾ ಗೌಡ, ವಿನಯ್‌ , ನಿಖಿಲ್‌ ಸೇರಿದಂತೆ 13 ಮಂದಿಯನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆರೋಪಿಗಳನ್ನು 6 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next