ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣ (Renukaswamy Case) ಸಂಬಂಧ ನಟ ದರ್ಶನ್ (Darshan) ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ (ಡಿ.9ರಂದು) ನಡೆದಿದೆ.
ನಟ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆದಿದೆ.
ಪ್ರಾಸಿಕ್ಯೂ ಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದವನ್ನು ಮುಂದುವರೆಸಿದ್ದಾರೆ.
ಪಾನಿಪೂರಿ ಕಿಟ್ಟಿ, ದುನಿಯಾ ವಿಜಿ ಪ್ರಕರಣದಲ್ಲಿ ಇದೇ ಕೋರ್ಟ್ ವಜಾಗೊಳಿಸಿದೆ. ಇಂತಹ ಪ್ರಕರಣ ಅಪಹರಣವಾಗುವುದಿಲ್ಲವೆಂದ ವಾದವನ್ನು ಇದೇ ಕೋರ್ಟ್ ತಿರಸ್ಕರಿಸಿದೆ ಎಂದು ಅಪಹರಣಕ್ಕೆ ಪೂರಕವಾಗಿ ಹೈಕೋರ್ಟ್ ತೀರ್ಪಿನ್ನು ಉಲ್ಲೇಖಿಸಿದ್ದಾರೆ.
ರೇಣುಸಾಸ್ವಾನಿ ಮೋಸದಿಂದ ಅಪಹರಿಸಿದ್ದಾರೆ. ದರ್ಶನ್ ರನ್ನು ಭೇಟಿ ಮಾಡಿಸಿ ಕರೆ ತರುವುದಾಗಿ ಹೇಳಿದ್ದರು. ಇದು ಕೂಡ ಅಪರಣದ ವ್ಯಾಖ್ಯಾನಕ್ಕೆ ಬರುತ್ತದೆ. ಅಪಹರಣದ ಜತೆ ರಾಬರಿ ಕೂಡ ನಡೆದಿದೆ. ದೇಹದ ಮೇಲಿನ ಕರಡಿಗೆಯನ್ನು ಕಿತ್ತುಕೊಂಡಿದ್ದಾರೆ ಎಂದು ವಾದ ಮಂಡಿಸಿದ್ದಾರೆ.
ದರ್ಶನ್ ಕಾರಿನಲ್ಲಿದ್ದವರೇ ಹಲ್ಲೆ ನಡೆಸಿದ್ದಾರೆ. ಶೆಡ್ ಗೆ ಕರೆತಂದ ಬಳಿಕ ಎ 5 ಸೇರಿದಂತೆ ಇತರರು ಸೇರಿ ಹಲ್ಲೆ ಮಾಡಿದ್ದಾರೆ. ಪವಿತ್ರಾ ಗೌಡ ಚಪ್ಪಲಿಯಲ್ಲಿ ಹೊಡೆದ ಬಳಿಕ ದರ್ಶನ್ ಹೊಡೆದಿದ್ದಾರೆ. ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯ ಎಂದು ಹೇಳಿ ದರ್ಶನ್ ಹೊಡೆದಿದ್ದಾರೆ. ಆ ಬಳಿಕ ಪ್ಯಾಂಟ್ ಬಿಚ್ಚಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಇದಲ್ಲದೆ ಎದೆ ಭಾಗಕ್ಕೆ ಕಾಲಿನಿಂದ ತುಳಿದಿದ್ದಾರೆ. ಪ್ಯಾಂಟ್ ಬಿಚ್ಚಿಸಿ ಪವನ್ ಕೈಯಲ್ಲಿ ರೇಣುಕಾಸ್ವಾಮಿ ಮಾಡಿದ ಮೆಸೇಜ್ ಓದಿಸಿದ್ದಾರೆ. ನಂತರ ಟೀ ತಂದು ಇವರೆಗೆಲ್ಲಾ ಕೊಟ್ಟಿದ್ದೇನೆಂದು ಸಾಕ್ಚಿಯಾಗಿ ಹೇಳಿದ್ದಾರೆ ಎಂದು ವಾದದಲ್ಲಿ ಉಲ್ಲೇಖಿಸಿದ್ದಾರೆ.
ಪವಿತ್ರಾ ಗೌಡನನ್ನು ಬಿಟ್ಟು ಬರಲು ಪುನೀತ್‌ಗೆ ಸೂಚಿಸಿದ್ದರು. ಈ ವೇಳೆಯೂ ದರ್ಶನ್ ಹಲ್ಲೆ ಮಾಡುತ್ತಿದ್ದರು. ದರ್ಶನ್ ಹೊರಟಾಗ ಆರೋಪಿಗಳು ದರ್ಶನ್ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಎ2, ಎ 7, ಎ8 ಫೋಟೋ ಇದೆ. ಫೋಟೋ ಇರುವ ಮೊಬೈಲ್ ರಿಕವರಿ ಆಗಿದೆ. ಶೆಡ್‌ನಲ್ಲೇ ಆರೋಪಿಗಳು ಫೋಟೋ ತೆಗೆಸಿಕೊಂಡಿದ್ದಾರೆ. ಇದು ದರ್ಶನ್ ಉಪಸ್ಥಿತಿಗೆ ಸಾಕ್ಷಿ ಎಂದು ವಾದ ಮಂಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಮೂಳೆ ಮುರಿದ ಬಗ್ಗೆ ಮಾಹಿತಿಯಿದೆ. ಎದೆಯ ಒಟ್ಟು 17 ಮೂಳೆಗಳು ಮುರಿದಿವೆ. ಆಗ ರೇಣುಕಾಸ್ವಾಮಿ ಸತ್ತಿದ್ದನೋ ಬದುಕಿದ್ದನೋ ಎಂದು ಹೇಳಲು ವೈದ್ಯರು ಇರಲಿಲ್ಲ ಎಂದು ವಾದದಲ್ಲಿ ಉಲ್ಲೇಖಿಸಿದ್ದಾರೆ.
ದೇಹದಲ್ಲಿ 13 ರಕ್ತದ ಗಾಯಗಳಿವೆ. ಅಶೋಕ್ ಲೇಲ್ಯಾಂಡ್ ವಾಹನದಲ್ಲೂ ರಕ್ತದ ಡಿಎನ್ ಎ ಪತ್ತೆಯಾಗಿದೆ. ಮರ್ಮಾಂಗಕ್ಕೂ ಗಾಯವಾದ ಬಗ್ಗೆ ಪೋಸ್ಟ್ ಮಾರ್ಟಂ ವರದಿಯಲ್ಲಿದೆ. ಊಟ ಮಾಡಿದ ಒಂದೆರೆಡು ಗಂಟೆಯಲ್ಲಿ ಪ್ರಾಣ ಹೋಗಿದೆ. ಆದರೆ ದರ್ಶನ್ ವಕೀಲರು 2.5 X1 ಸೆಂ.ಮೀ ನಷ್ಟು ಗಾಯ ಮಾರ್ಕ್ಸ್ ಆಗಿದೆ ಎಂದು ವಾದ ಮಾಡಿದ್ದಾರೆ. ದೇಹದಲ್ಲಿನ ಆಹಾರ ದ್ರವವನ್ನು ಪರಿಶೀಲಿಸಿ ಪೋಸ್ಟ್ ಮಾರ್ಟಂ ವರದಿ ಮಾಡಲಾಗಿದೆ. ವೈದ್ಯರ ಅಭಿಪ್ರಾಯ ಹಾಗೂ ಚಾರ್ಜ್ ಶೀಟ್ ಅಂಶ ಹೋಲಿಕೆ ಆಗುತ್ತದೆ ಎಂದು ವಾದಿಸಿದ್ದಾರೆ.
ದರ್ಶನ್, ಬಟ್ಟೆ ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಡಿಎನ್ ಎ ಪತ್ತೆಯಾಗಿದೆ. ಕೊಲೆ ನಡೆದ ಸ್ಥಳದ ಮಣ್ಣಿನಲ್ಲೂ ರಕ್ತದ ಡಿಎನ್ ಎ ಪತ್ತೆಯಾಗಿದೆ. ಪೋಸ್ಟ್ ಮಾರ್ಟಂ ವೈದ್ಯರು ರೇಣುಕಾಸ್ವಾಮಿ ರಕ್ತವಿದ್ದ ಸೀಲ್ ಬಾಟಲ್ ಕಳುಹಿಸಿದ್ದರು. ಡಿಎನ್ ಎನ್ ಮ್ಯಾಚ್ ಮಾಡಲು ಇದನ್ನು ಸಂಗ್ರಹಿಸಲಾಗಿತ್ತು. ಎಫ್ ಎಸ್ ಎಲ್ ನವರು ಬಾಟಲ್‌ನಿಂದ ರಕ್ತ ಹಾಕಿದ್ದಾರೆ ಎಂದ ವಾದವನ್ನು ಒಪ್ಪಲಾಗುವುದಿಲ್ಲ ಎಂದಿದ್ದಾರೆ.
ಜೂ. 10 ರಂದು ಎ15 , 16.17 ಸೆರಂಡರ್ ಆದರು. ಎ 14 ಇವರನ್ನು ಡ್ರಾಪ್ ಮಾಡಿ ಹೋಗಿದ್ದ. ಎ 14 ಕರೆತಂದು ವಿಚಾರಣೆ ನಡೆದ ಬಳಿಕ ಘಟನೆ ಬಗ್ಗೆ ಆರೋಪಿಗಳು ಒಂದೊಂದು ವಿಚಾರವನ್ನು ಬಾಯಿಬಿಟ್ಟರು ಆರೋಪಿಗಳ ಬಳಿಯಿದ್ದ ದರ್ಶನ್ ಹಣವನ್ನು ರಿಕವರಿ ಮಾಡಲಾಗಿದೆ ಎಂದು ವಾದ ಮಂಡಿಸಿದ್ದಾರೆ.
ಪ್ರಮುಖ ಸಾಕ್ಷಿ ಪುನೀತ್ ಹೇಳಿಕೆ ಪಡೆಯಲು ವಿಳಂಬವಾದ ಬಗ್ಗೆ ವಾದ ಮಂಡಿಸಿದ ಅವರು, ಜೂ.19 ರಂದು ಪುನೀತ್ ಗೋವಾಕ್ಕೆ ತೆರಳಿದ್ದ. ತಿರುಪತಿ, ಹುಬ್ಬಳ್ಳಿಯಲ್ಲಿ ತಿರುಗಾಡಿ ತಾನು ಆರೋಪಿಯಲ್ಲವೆಂದು ಸ್ಪಷ್ಟವಾದ ಬಳಿಕ ಬಂದಿದ್ದ. ಆತ ಬಂದ ಬಳಿಕ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಯಿತು. ವಿಮಾನದಲ್ಲಿ ತೆರಳಿದ ಸಾಕ್ಷಿಗೆ ಬೋರ್ಡಿಂಗ್ ಪಾಸ್ ಕೂಡ ಇದೆ ಎಂದು ಗೋವಾಕ್ಕೆ ಹೋದ ಕುರಿತ ದಾಖಲೆಯನ್ನು ಸಲ್ಲಿಕೆ ಮಾಡಲಾಗಿದೆ.
ಧರಿಸಿದ್ದ ಎಲ್ಲ ವಸ್ತುಗಳನ್ನು ತೋರಿಸುತ್ತೇನೆಂದು ದರ್ಶನ್ ಹೇಳಿದ್ದರು. ಅವರು ಏನು ಹೇಳಿದ್ದರೋ ಅದನ್ನೇ ದಾಖಲು ಮಾಡಲಾಗಿದೆ. ತನಿಖಾಧಿಕಾರಿಗಳು ಅವರ ಮೇಲೆ ಯಾವ ಒತ್ತಡವನ್ನು ಹಾಕಿಲ್ಲ ಎಂದು ಎಸ್ ಪಿಪಿ ಹೇಳಿದ್ದಾರೆ.
ಚಪ್ಪಲಿ ಅಂಥ ಇದೆ. ಹಾಗಿದ್ರೆ ಶೂ ಯಾಕೆ ರಿಕವರಿ ಮಾಡಿದ್ರೀರಿ ಎಂದು ಸಿವಿ ನಾಗೇಶ್ ಪ್ರಶ್ನಿಸಿದ್ದಾರೆ. ಇದಕ್ಕೆ ಎಸ್ ಪಿಪಿ ದರ್ಶನ್ ಹೇಳಿದ್ದನ್ನಷ್ಟೇ ನಾವು ಕಾನೂನು ಪ್ರಕಾರ ದಾಖಲು ಮಾಡಿದ್ದೇವೆ. ಶೋ ರಿಕವರಿ ಮಾಡಲು ನಾವು ಅವರ ಮನೆಗೆ ಹೋದಾಗ ಅಲ್ಲಿ ಶೂ ಇರಲಿಲ್ಲ. ಕಾಸ್ಟ್ಯೂಮ್ ಅಸಿಸ್ಟಂಟ್ ರಾಜು ತೆಗದುಕೊಂಡು ಹೋಗಿದ್ದರು ಎಂದು ಅವರು ಹೇಳಿಕೆ ನೀಡಿದ್ದರು. ರಾಜುಗೆ ಕೇಳಿದಾಗ ಇದನ್ನು ಅವರ ಪತ್ನಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಶೂನಲ್ಲಿ ರಕ್ತ ಕಲೆ, ಮಣ್ಣು ಇತ್ತು ಎಸ್ ಪಿಪಿ ಹೇಳಿದ್ದಾರೆ.
ಬಟ್ಟೆ ಒಗೆದ ನಂತರ ಡಿಎನ್ ಎನ ಸಿಗುತ್ತದೆಯೇ ಎಂದು ನಾಗೇಶ್ ಪ್ರಶ್ನಿಸಿದ್ದಾರೆ. ಲಾಂಡ್ರಿ, ಡಿಟರ್ಜೆಂಟ್ ನಲ್ಲಿ ಒಗೆದು ಸಂಶೋಧನೆ ಮಾಡಲಾಗಿದೆ. 60 ಡಿಗ್ರಿ, 90 ಡಿಗ್ರಿ ತಾಪಮಾನದಲ್ಲಿ ಒಗೆದು ಸಂಶೋಧನೆ ಮಾಡಲಾಗಿದೆ. ಆದರೂ ರಕ್ತದ ಡಿಎನ್ ಎ ಪತ್ತೆಯಾಗಿದೆ. ಬರಿಗಣ್ಣಿನಲ್ಲಿ ಕಾಣದ ರಕ್ತದ ಕಲೆಗಳು ಡಿಎನ್ ಎ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಎಸ್ ಪಿಪಿ ಹೇಳಿದ್ದಾರೆ.
ಆರೋಪಿಗಳು ಘಟನೆಯ ಮೊದಲು ಹಾಗೂ ನಂತರ ಸಂಪರ್ಕದಲ್ಲಿದ್ದರು. ಇದು ಸಿಡಿಆರ್ ತನಿಖೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಎಸ್ ಪಿಪಿ ಹೇಳಿದ್ದಾರೆ. ಈ ಹಿಂದೆ ನಾಗೇಶ್ ಅವರು ಆರೋಪಿಗಳಿಗೆ ಮೊದಲೇ ಪರಿಚಯವಿತ್ತು ಇದನ್ನು ಕೊಲೆಗೆ ಹೇಗೆ ಕಲ್ಪಿಸುತ್ತೀರಿ ಎಂದು ಪ್ರಶ್ನಿಸಿದ್ದರು. ಆದರೆ ಸಿಡಿಆರ್ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಎಸ್ ಪಿಪಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ದರ್ಶನ ಪರ ವಾದ ಮಂಡನೆ..: ಸರ್ಜರಿಗಾಗಿ ಮಧ್ಯಂತರ ಜಾಮೀನು ಪಡೆದು ಸರ್ಜರಿ ಮಾಡಿಸಿಲ್ಲವೆಂದು ಹೇಳಿರುವ ಎಸ್ ಪಿಪಿ ಅವರ ವಾದಕ್ಕೆ ಸಿವಿ ನಾಗೇಶ್ ಪ್ರತಿವಾದವಾಗಿ ಕೆಲ ವಿಚಾರಗಳನ್ನು ಹೇಳಿದ್ದಾರೆ.
ವೈದ್ಯರು 5 ಸರ್ಟಿಫಿಕೇಟ್ ಗಳನ್ನು ನೀಡಿದ್ದಾರೆ. ಸರ್ಜರಿ ಮಾಡಿಸಿಲ್ಲದಿದ್ರೆ ಕಾಲು ಮರಗಟ್ಟುತ್ತದೆ. ಯಾವಾಗ ಸರ್ಜರಿ ಮಾಡಬೇಕೆನ್ನುವುದು ದರ್ಶನ್ ಅಲ್ಲ ವೈದ್ಯರು ನಿರ್ಧರಿಸಬೇಕು. ಸರ್ಜರಿ ಮುಂಚಿತವಾಗಿ ಕೆಲ ಚಿಕಿತ್ಸೆಗಳನ್ನು ನೀಡಬೇಕಾಗುತ್ತದೆ. ಡಿ.11 ರಂದೇ ಅವರ ಸರ್ಜರಿ ನಡೆಯುತ್ತದೆ. ಅದಕ್ಕಾಗಿ ಸಿದ್ದತೆ ನಡೆಸಲಾಗುತ್ತಿದೆ. ಬಿಪಿಯಲ್ಲಿ ಏರಳಿತವಾಗುತ್ತಿದೆ ಹೀಗಾಗಿ ವಿಳಂಬವಾಗುತ್ತಿದೆ ಎಂದು ಸರ್ಪಿಫಿಕೇಟ್ ಗಳನ್ನು ನೀಡಿರುವ ಬಗ್ಗೆ ಕೋರ್ಟ್‌ಗೆ ಹೇಳಿದ್ದಾರೆ.
ದರ್ಶನ್ ಎಲ್ಲೂ ಕೂಡ ಮಧ್ಯಂತರ ಜಾಮೀನಿನ ನಿಯಮವನ್ನು ಉಲ್ಲಂಘಿಸಿಲ್ಲ ಅವರು ಹೇಳಿದ್ದಾರೆ.
13 ರಕ್ತದ ಕಲೆಗಳು ಇದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಇವೆಲ್ಲವೂ ತನಿಖಾಧಿಕಾರಿಗಳಿಗೆ ಸುಲಭವಾಗುವಂತೆ ಮಾಡಿದ ವರದಿಗಳೆಂದು ನಾಗೇಶ್ ಹೇಳಿದ್ದಾರೆ. ಬಾಸುಂಡೆಯ ಗಾಯಗಳಿಂದ ರಕ್ತ ಚಿಮ್ಮಲು ಸಾಧ್ಯವಿಲ್ಲ. ಪ್ರಮುಖ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲು ಯಾಕೆ ತಡವಾಯಿತು ಎನ್ನುವ ಪ್ರಶ್ನೆಯನ್ನು ಮತ್ತೊಮ್ಮೆ ನಾಗೇಶ್ ಅವರು ಕೇಳಿದ್ದಾರೆ.
ದರ್ಶನ್ ಅವರ ಮಧ್ಯಂತರ ಅವಧಿ ಡಿಸೆಂಬರ್ 11 ರಂದು ಮುಕ್ತಾವಾಗಲಿದ್ದು, ಅದೇ ದಿನ ಅವರ ಸರ್ಜರಿ ಕೂಡ ನಡೆಯಲಿದೆ.
ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ. ಇದರೊಂದಿಗೆ ದರ್ಶನ್ ಅವರ ಮಧ್ಯಂತರ ಜಾಮೀನನ್ನು ವಿಸ್ತರಣೆ ಆಗಿದೆ. ಆ ಮೂಲಕ ಅವರಿಗೆ ತಾತ್ಕಾಲಿಕ ರಿಲೀಸ್ ಸಿಕ್ಕಿದೆ. ಮುಂದಿನ ದಿನಾಂಕದವರೆಗೂ ಜಾಮೀನು ವಿಸ್ತರಣೆ ಆಗಿದೆ.