Advertisement
ಈ ನಾಲ್ವರು ಆರೋಪಿಗಳು ಪ್ರಕರಣಕ್ಕೆ ಬೇಕಾದ ಮಾಹಿತಿ ಹಾಗೂ ಕೆಲವೊಂದು ಮಹತ್ವದ ವಿಚಾರಗಳ ಬಾಯಿಬಿಡಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಕೃತ್ಯ ಮರೆಮಾಚಲು ಹಣಕಾಸಿನ ವ್ಯವಹಾರ ನಡೆಸಿದ್ದು, ಈ ಹಣದ ಮೂಲ ಪಡೆಯಬೇಕು. ಮೃತನ ಮೊಬೈಲ್ ಹಾಗೂ ಕೃತ್ಯದ ಪ್ರಮುಖ ಸಾಕ್ಷ್ಯವಾದ ಮತ್ತೂಂದು ಮೊಬೈಲ್ ಪತ್ತೆ ಹಚ್ಚುವ ಉದ್ದೇಶದಿಂದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಟ ದರ್ಶನ್ ಮನೆಯಿಂದ 37.40 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಆತನ ಪತ್ನಿ ವಿಜಯಲಕ್ಷಿ$¾àಗೆ ನೀಡಿದ್ದ 3 ಲಕ್ಷ ರೂ. ಅನ್ನು ಜಪ್ತಿ ಮಾಡಲಾಗಿದೆ. ಆದರೆ, ದರ್ಶನ್ ಈ ಹಣದ ಮೂಲದ ಬಗ್ಗೆ ಬಾಯಿಬಿಡುತ್ತಿಲ್ಲ. ಅದರ ದಾಖಲಾತಿ ಪಡೆಯಬೇಕು. ಕೃತ್ಯ ಎಸಗಿದ ಬಳಿಕ ಸಮಾಜದ ಕೆಲ ಪ್ರತಿಷ್ಠಿತ ವ್ಯಕ್ತಿಗಳನ್ನು ದರ್ಶನ್ ಸಂಪರ್ಕಿಸಿದ್ದು, ಅದರ ಉದ್ದೇಶ ಹಾಗೂ ಕಾರಣಗಳ ಕುರಿತು ವಿಚಾರಣೆ ನಡೆಸಬೇಕು. ಇನ್ನು ಪ್ರದೂಶ್ ಸಾಕ್ಷ್ಯನಾಶ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಈತ ಕೂಡ ತನಿಖೆಗೆ ಸಹಕಾರ ನೀಡುತ್ತಿಲ್ಲ. ಪ್ರಮುಖವಾಗಿ ಈತ ಕೃತ್ಯದ ಸ್ಥಳಕ್ಕೆ ಮತ್ತೂಬ್ಬ ವ್ಯಕ್ತಿಯನ್ನು ಕರೆದೊಯ್ದಿದ್ದಾನೆ. ಆ ಅಪರಿಚಿತ ವ್ಯಕ್ತಿ ಬಗ್ಗೆ ಈತನಿಗೆ ಮಾತ್ರ ತಿಳಿದಿದ್ದು, ಆತ ಯಾರೆಂಬ ಬಗ್ಗೆ ಪ್ರದೂಶ್‌ನಿಂದ ಮಾಹಿತಿ ಪಡೆಯಬೇಕು.
Related Articles
Advertisement
ವಿನಯ್ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಬೇಕಾದ ಅತೀ ಮುಖ್ಯವಾದ ಸಾಕ್ಷ್ಯ ದೊರೆತಿದ್ದು, ಅದನ್ನು ಕಳುಹಿಸಿದ್ದ ವ್ಯಕ್ತಿ ಯಾರೆಂದು ವಿನಯ್‌ನಿಂದ ತಿಳಿಯಬೇಕು.
ಕೃತ್ಯ ನಡೆದ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಕೆಲವರು ಸಾಕ್ಷ್ಯ ನುಡಿಯದಂತೆ ಹಣದ ಆಮಿಷವೊಡ್ಡಿದ್ದಾರೆ. ಆ ವ್ಯಕ್ತಿಗಳು ಯಾರೆಂದು ಈ ನಾಲ್ವರಿಂದ ಮಾಹಿತಿ ಪಡೆಯಬೇಕು.
ವಿನಯ್ ಮತ್ತು ದೀಪಕ್ ಮೂಲಕ ನಟ ದರ್ಶನ್ ಕೃತ್ಯ ಮರೆಮಾಚಲು ಕೇಶವಮೂರ್ತಿಗೆ 5 ಲಕ್ಷ ರೂ. ನೀಡಿದ್ದು, ಈ ಹಣವನ್ನು ಕೇಶವಮೂರ್ತಿ ತನ್ನ ಸ್ನೇಹಿತನಿಗೆ ನೀಡಿದ್ದಾಗಿ ತಿಳಿಸಿದ್ದಾನೆ. ಈ ಹಣ ಪಡೆದ ವ್ಯಕ್ತಿಯ ಪತ್ತೆಯಾಗಿಲ್ಲ. ಆ ಹಣ ವಶಕ್ಕೆ ಪಡೆಯಬೇಕಿದೆ.
ಯಾರೆಲ್ಲ ನ್ಯಾಯಾಂಗ ಬಂಧನಕ್ಕೆ?ದರ್ಶನ್ ಗೆಳತಿ ಪವಿತ್ರಾ ಗೌಡ, ಚಿತ್ರದುರ್ಗದ ರಾಘವೇಂದ್ರ, ಅನುಕುಮಾರ್, ನಾಗರಾಜು, ಲಕ್ಷ್ಮಣ್, ಕೇಶವಮೂರ್ತಿ, ದೀಪಕ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತರ ಆರು ಮಂದಿಯನ್ನು ಈ ಹಿಂದೆಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.