Advertisement
ರಾಜರಾಜೇಶ್ವರಿ ನಗರದಲ್ಲಿರುವ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ಶುಕ್ರವಾರ ಆರೋಪಿ ವಿನಯ್‌ನನ್ನು ಪೊಲೀಸರು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ 30 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಇದು ಕೊಲೆ ಆರೋಪ ಎದುರಿಸುತ್ತಿರುವ ಯುವಕರಿಗೆ ನೀಡಲು ಇಟ್ಟಿದ್ದ ಹಣ ಎನ್ನಲಾಗಿದೆ.
ದರ್ಶನ್ ಮತ್ತು ತಂಡದಿಂದ ರೇಣುಕಾಸ್ವಾಮಿಯನ್ನು ಜೂನ್ 8ರ ಬೆಳಗ್ಗೆ 11.30ಕ್ಕೆ ಗುಯಿಲಾಳು ಟೋಲ್ ಬಳಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಕಾರಿನ ಮುಂಭಾಗ ಚಾಲಕ ರವಿ ಹಾಗೂ ರಾಘವೇಂದ್ರ ಕುಳಿತಿದ್ದರು. ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿರುವ ಈ ಗ್ಯಾಂಗ್ ವಿಐಪಿ ಕಾರ್ಡ್ ತೋರಿಸಿ ಹೋಗಿದ್ದಾರೆ. ದರ್ಶನ್ ಸಂಘದ ಅಧ್ಯಕ್ಷ ಎಂದು ಬಿಲ್ಡಪ್ ಕೊಟ್ಟು ಹೋಗಿದ್ದರು ಎನ್ನಲಾಗಿದೆ.
Related Articles
ಪವಿತ್ರಾ ಗೌಡ ಭೇಟಿಗೆ ಆಕೆಯ ಸಹೋ ದರಿ ಹಾಗೂ ಸಂಬಂಧಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು. ಭೇಟಿಗೆ ಪೊಲೀಸರು ನಿರಾಕರಿಸಿದರು. ಫೋನ್ ಮಾಡಿಸಿ ಒಳಗಡೆ ಹೋಗಲು ವಿಫಲ ಯತ್ನ ನಡೆಸಿದರು. ಸಾಂತ್ವನ ಕೇಂದ್ರಕ್ಕೆ ಹೋಗಿದ್ದಾಗ ಠಾಣೆಯಲ್ಲಿ ಭೇಟಿ ಮಾಡುವಂತೆ ಸೂಚಿಸಿ ಕಳುಹಿಸಲಾಗಿತ್ತು.
Advertisement
ದರ್ಶನ್ ವಿರುದ್ಧ ಸಾಕ್ಷ್ಯಗಳೇನಿವೆ ?ಶೆಡ್‌ನಲ್ಲಿ ರೇಣುಕಾಸ್ವಾಮಿಯ ರಕ್ತದ ಕಲೆ, ಕೂದಲು, ಬೆವರಿನ ಸ್ಯಾಂಪಲ್ ಮತ್ತು ಆರೋಪಿಗಳ ಬೆರಳಚ್ಚು, ಪಾದದ ಹೆಜ್ಜೆ, ರಕ್ತದ ಮಾದರಿ, ಕೊಲೆ ಬಳಿಕ ದರ್ಶನ್‌ಗೆ ಕರೆ ಮಾಡಿದ್ದ ಆರೋಪಿಗಳು, ದರ್ಶನ್ ಕಾರು ಸಿಸಿ ಕೆಮರಾದಲ್ಲಿ ಸೆರೆ, ಒಂದೇ ಸ್ಥಳದಲ್ಲಿ ಆರೋಪಿಗಳಿರುವುದು ಟವರ್ ಡಂಪ್‌ನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ದರ್ಶನ್, ಪವಿತ್ರಾ ಗೌಡ, ನಾಗ, ವಿನಯ್ ,ಸಹಿತ 6 ಮಂದಿಯ ಟವರ್ ಡಂಪ್, ಪೊಲೀಸ್ ಅಧಿಕಾರಿಗಳ ಜತೆ ಕೃತ್ಯದ ಬಗ್ಗೆ ಚರ್ಚಿಸಿರುವ ಕರೆಗಳು, ಮೃತದೇಹ ಎಸೆಯಲು ತಲಾ 5 ಲಕ್ಷ ನೀಡಿದ್ದಾಗಿ ಆರೋಪಿಗಳ ಹೇಳಿಕೆ, ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಂದ ಕಿಡ್ನಾಪ್, ದರ್ಶನ್ ಹೇಳಿದಂತೆ ರೇಣುಕಾಸ್ವಾಮಿ ಕರೆತಂದಿದ್ದೇವೆ ಎಂದು ರಘು ಹೇಳಿಕೆ ಇತರ ಸಾಕ್ಷ್ಯಗಳು ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದಕ್ಕೆ ಪುಷ್ಟಿ ನೀಡುತ್ತದೆ.