Advertisement

ಸೀಳುನಾಯಿ ಪದ ಬಳಕೆ : ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಕಿಡಿ

02:02 PM Jun 09, 2022 | Team Udayavani |

ಬೆಂಗಳೂರು:ಸೀಳುನಾಯಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕಿಡಿ ಕಾರಿದ್ದು,ಲಘುವಾಗಿ ಮಾತನಾಡಿದರೆ ಸೋನಿಯಾ ಗಾಂಧಿ ಮೆಚ್ಚಿಸಹುದು ಅಂತ ಬಹಳ ಹಗುರವಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ಹೋರ ಹಾಕಿದ್ದಾರೆ.

Advertisement

ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಬಾಯಲ್ಲಿ ಅಂತ ಪದಗಳು ಬರಬಾರದು.ಸಂಘ ಪರಿವಾರ ಭಾರತ ಮಾತೆಯ ಗೌರವ ಉಳಿಸುತ್ತಿರುವ ಸಂಸ್ಥೆ ಗಳು.ಸೀಳುನಾಯಿಗಳು ಅಂತ ಹೇಳುತ್ತಾರೆ. ನಾಯಿಗೆ ಇರುವ ನಿಯತ್ತು ಬೇರೆಯವರಿಗೆ ಇಲ್ಲ. ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿ ಶಾಸಕರು ಕೈಕಟ್ಟಿ ಕೂರುವುದಕ್ಕಾಗುತ್ತದೆಯೋ ಎಂದು ಪ್ರಶ್ನಿಸಿದರು.

ನಾಲಿಗೆ ಇದೆ ಅಂತ ಹೇಳಿ ಹಗುರವಾಗಿ ಮಾತನಾಡಿದರೆ ಜನ ನಿಮ್ಮನ್ನು ಒಪ್ಪುವುದಿಲ್ಲ. ಲೋಕಸಭೆಯಲ್ಲಿ ನಿಮಗೆ ವಿಳಾಸವೇ ಇಲ್ಲ. ಈ ದೇಶದ ಜನ ಸ್ಪಷ್ಟವಾಗಿ ಜನಾದೇಶ ಬಿಜೆಪಿ ಗೆ ಇದೆ ಅಂತ ತೋರಿಸಿದ್ದಾರೆ. 2023ಕ್ಕೆ ಚುನಾವಣೆ ವೇಳೆ ಚಡ್ಡಿ ಮುಟ್ಟಿದರೆ ಏನಾಗುತ್ತದೆ ಎಂದು ನಿಮಗೆ ಅರ್ಥವಾಗುತ್ತದೆ ಎಂದರು.

ದೇಶದ್ರೋಹಿಗಳನ್ನು ಗೌರವಿಸುವವರು ಸಿದ್ದರಾಮಯ್ಯ. ಕಾಂಗ್ರೆಸ್ ಹೈಕಮಾಂಡ್ ಬ್ಯಾಟರಿ ಲೋ ಆಗಿದೆ. ಹಗುರವಾಗಿ ನಾಲಿಗೆ ಹರಿಬಿಟ್ಟರೆ ಜನರೇ ಪಾಠ ಕಲಿಸುತ್ತಾರೆ. ಹತಾಶ ಮನೊಭಾವನೆಯಿಂದ ಸಿದ್ದರಾಮಯ್ಯ ಏಕಾಂಗಿಯಾಗಿದ್ದೇನೆ ಅಂತ ಮಾತನಾಡುತ್ತಾರೆ ಎಂದರು.

ಖರ್ಗೆ ಸಿಎಂ ಆಗಬೇಕು ಅಂತ ಅವರ ಗುಂಪು, ಪರಮೇಶ್ವರ್ ಸಿಎಂ ಆಗಬೇಕು ಅಂತ ಅವರ ಗುಂಪು, ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ಜಮೀರ್ ಬಹುಪರಾಕ್ ಹೇಳುತ್ತಾರೆ. ಬಿಜೆಪಿಯಲ್ಲಿ ಗುಂಪಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ನಿಮ್ಮನ್ನು ಸೋಲಿಸುತ್ತೇವೆ. ನಮಗೆ ಸೀಳುನಾಯಿ ಅಂತ ಕರೆಯಬಹುದ, ನಮಗೆ ನಿಯತ್ತಿದೆ. ಸಿದ್ದರಾಮಯ್ಯ ಬೆಂಬಲಕ್ಕೆ ಒಬ್ಬರೇ ಒಬ್ಬ ಶಾಸಕರು ಇಲ್ಲ. ರಾಜಕೀಯವಾಗಿ ನಿಮ್ಮನ್ನು ಮುಗಿಸುತ್ತಾರೆ ಎಂದರು.

Advertisement

ಚಡ್ಡಿ ಚಡ್ಡಿ ಅಂತ ಹೇಳುತ್ತೀರಲ್ಲ. ಚಡ್ಡಿ ಹಾಕಿಕೊಂಡು ಸಂಘಕ್ಕೆ ಬನ್ನಿ. ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಟಿಪ್ಪು ಬೆಂಬಲಿಸಿದವರು ಸಿದ್ದರಾಮಯ್ಯ.  ಚಡ್ಡಿ ಹಾಕಿಕೊಂಡು ಬಂದು ನಮಸ್ತೆ ಸದಾ ವತ್ಸಲೆ ಅಂತ ಹೇಳಲಿ ಆಗ ಗೊತ್ತಾಗುತ್ತದೆ ಅವರಿಗೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ರದ್ದು ಮಾಡಬೇಕೆಂದು ಕಾಂಗ್ರೆಸ್ ಹೋರಾಟ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅನೇಕ ಸಂಘಟನೆಗಳು , ಮಠಾಧೀಶರು ಮಾತಾಡಿದ್ದಾರೆ. ಸಿಎಂ ಹಾಗೂ ಶಿಕ್ಷಣ ಸಚಿವರು ಸಮಸ್ಯೆ ಬಗೆ ಹರಿಸುತ್ತಾರೆ‌.ಕೇಸರಿಕರಣ ಮಾಡಿದರೆ ತಪ್ಪೇನು. ನೀವು ಮಠಗಳಿಗೆ ಹೋಗುವುದಿಲ್ಲವಾ ? ನೀವೇ ಮಾಡಿದ ಸಮಿತಿಗಳು ತಪ್ಪ ಮಾಡಿವೆ.ಅದರ ಬಗ್ಗೆ ಧ್ವನಿ ಎತ್ತಲಿಲ್ಲ.ಈಗಿರುವ ಸಮಸ್ಯೆ ಮುಖ್ಯಮಂತ್ರಿಗಳು ಬಗೆ ಹರಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next