Advertisement
ಕೃತ್ಯದ ದಿನ ದರ್ಶನ್ ಧರಿಸಿದ್ದ ಶೂಗಳನ್ನು ವಿಜಯಲಕ್ಷಿ$¾à ಅವರ ಮನೆಯಲ್ಲಿ ಕೆಲಸದವರು ಇಟ್ಟು ಹೋಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಜತೆಗೆ ಕೃತ್ಯವೆಸಗಿದ ಮರುದಿನ ಅವರು ಆ ಮನೆಗೆ ಹೋಗಿದ್ದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀಗೆ ನೋಟಿಸ್ ನೀಡಲಾಗಿತ್ತು. ಅವರು ಠಾಣೆಗೆ ಹಾಜರಾಗಿ ತನಿಖೆಗೆ ಸಹಕಾರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಯಾರೆಂಬುದು ಗೊತ್ತಿಲ್ಲ. ಆತನ ಕೊಲೆಯ ಬಗ್ಗೆಯೂ ಮಾಹಿತಿ ಇಲ್ಲ. ಶೂ ಹಾಗೂ ಬಟ್ಟೆಗಳನ್ನು ದರ್ಶನ್ ಸಹಾಯಕರು ತಂದು ಇಟ್ಟಿದ್ದಾರೆ. ಅದರಲ್ಲಿ ಯಾವುದು? ಏನು? ಎಂಬುದು ತಿಳಿದಿಲ್ಲ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ. ಆದರೆ ಪವಿತ್ರಾ ಮತ್ತು ಪತಿ ದರ್ಶನ್ ನಡುವಿನ ಸಂಬಂಧದ ಬಗ್ಗೆ ಈ ಹಿಂದೆಯೇ ಗೊತ್ತಿತ್ತು. ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾರೆ ಎನ್ನುತ್ತ ಭಾವುಕರಾದರು ಎಂದು ಹೇಳಲಾಗಿದೆ.
Related Articles
ಮಾತ್ರ ಸಿಕ್ಕಿತ್ತು
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಸಂದರ್ಭ ಧರಿಸಿದ್ದ ಬಟ್ಟೆಗಳನ್ನು ಜೂನ್ 16ರಂದು ಆರ್.ಆರ್. ನಗರದ ದರ್ಶನ್ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಶೂ ಪತ್ತೆಯಾಗಿರಲಿಲ್ಲ. ಶೂ ಮತ್ತು ಇತರ ಕೆಲವು ಬೆಲೆಬಾಳುವ ವಸ್ತುಗಳನ್ನು ವಿಜಯಲಕ್ಷ್ಮೀ ಅವರ ಮನೆಯಿಂದ ವಶಕ್ಕೆ ಪಡೆಯಲಾಗಿತ್ತು.
Advertisement