ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ, ಎ 4 ರಾಘವೇಂದ್ರನ ತಾಯಿ ಮಂಜುಳಮ್ಮ (65) ಶನಿವಾರ ನಿಧನ ಹೊಂದಿದ್ದಾರೆ.
ಕೊಲೆ ಪ್ರಕರಣದಲ್ಲಿ ಮಗ ಜೈಲು ಸೇರಿದ ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆತನ ಚಿಂತೆಯಲ್ಲೇ ಮುಳುಗಿದ್ದ ಮಂಜುಳಮ್ಮ, ನಗರದ ಕೋಳಿ ಬುರುಜನಹಟ್ಟಿಯ ಮನೆಯಲ್ಲಿ ನಸುಕಿನ ಜಾವ 4 ಗಂಟೆ ಸುಮಾರಿಗೆ ನಿಧನರಾದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಪೊಲೀಸರು ರಾಘವೇಂದ್ರನನ್ನು ಕರೆತರಬಹುದು ಎಂಬ ನಿರೀಕ್ಷೆಯಲ್ಲಿ ಸಂಜೆವರೆಗೂ ಕಾದು ಬಳಿಕ ಜೋಗಿಮಟ್ಟಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಪುತ್ರ ರಾಘವೇಂದ್ರನಿಗೆ ತಾಯಿಯ ಮುಖವನ್ನು ವಿಡಿಯೋ ಕಾಲ್ ಮೂಲಕ ಕೊನೆಯ ಸಲ ತೋರಿಸಲಾಯಿತು ಎಂದು ಮೂಲಗಳು ತಿಳಿಸಿವೆ.