Advertisement

ಟಾಲಿವುಡ್ ನ ಪ್ರಸಿದ್ಧ ಸಂಕಲನಕಾರ ಗೌತಮ್ ರಾಜು ನಿಧನ

04:11 PM Jul 06, 2022 | Team Udayavani |

ಹೈದರಾಬಾದ್‌: 850ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದ, ತೆಲುಗು ಚಿತ್ರರಂಗದಲ್ಲಿ ಹಲವಾರು ಸೂಪರ್‌ಹಿಟ್ ಬ್ಲಾಕ್‌ಬಸ್ಟರ್‌ಗಳ ಹಿಂದಿನ ವ್ಯಕ್ತಿ, ಹಿರಿಯ ಸಂಕಲನಕಾರ ಗೌತಮ್ ರಾಜು (68) ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ  ಸಂಬಂಧಿತ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯರಾತ್ರಿ ಅವರ ಆರೋಗ್ಯ ಹದಗೆಟ್ಟಿದ್ದು, ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಗೌತಮ್ ರಾಜು ಅವರು 850 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಿತ್ರಗಳಿಗೆ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.  ಗಬ್ಬರ್ ಸಿಂಗ್, ಅಲ್ಲು ಅರ್ಜುನ್ ಅವರ ರೇಸ್ ಗುರ್ರಂ, ಬಲುಪು, ಬದ್ರಿನಾಥ್, ಡಾನ್ ಸೀನು ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:  ಸ್ಯಾಂಡಲ್‌ ವುಡ್‌ ನಲ್ಲಿ ಪ್ರೀತಿಯ ʼಅಂಬಾರಿʼ ಕಟ್ಟಿದ ಲೂಸ್‌ ಮಾದ ಯೋಗಿ ಫೋಟೋ ಗ್ಯಾಲರಿ

ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ಸಾಯಿ ಧರಮ್ ತೇಜ್ ಮುಂತಾದ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next