Advertisement

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

01:28 AM Sep 24, 2020 | Hari Prasad |

ಚೆನ್ನೈ: ಖ್ಯಾತ ಪಾಪ್‌ ಗಾಯಕ ಜಸ್ಟೀನ್‌ ಬೈಬರ್‌ ಅವರು ತಮಿಳಿನ ಸಂಗೀತ ಸಂಯೋಜಕ, ನಟ ಜಿ.ವಿ. ಪ್ರಕಾಶ್‌ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ್ದಾರೆ.

Advertisement

ಜಿ.ವಿ. ಪ್ರಕಾಶ್‌ ಅವರು ತಮ್ಮ ಏಕಗೀತೆ (ಸಿಂಗಲ್ಸ್‌), ಹೈ ಆ್ಯಂಡ್‌ ಡ್ರೈ ಅನ್ನು ಬಿಡುಗಡೆ ಮಾಡಿದ ನಂತರ ಇದು ನಡೆದಿದೆ.

ಪ್ರಕಾಶ್‌ ಅವರ ಮೊದಲ ಅಂತಾರಾಷ್ಟ್ರೀಯ ಆಲ್ಬಂ ಕೋಲ್ಡ್‌ ನೈಟ್‌ ಅನ್ನು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಮತ್ತು ನಟ ಧನುಷ್‌ ಅವರು ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆ ಮಾಡಿದ್ದಾರೆ.

ಜಸ್ಟಿನ್‌ ಬೈಬರ್‌ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದು, ಟ್ವಿಟರ್‌ನಲ್ಲಿ 112.5 ಮಿ.ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಜಸ್ಟಿನ್‌ ಬೈಬರ್‌ ಅವರನ್ನು ಫಾಲೋವರ್‌ ಆಗಿ ಹೊಂದಿದ ಮೊದಲ ತಮಿಳು ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್‌.

ಜಿ.ವಿ. ಪ್ರಕಾಶ್‌ ಅವರ ಮೊದಲ ಏಕಗೀತೆ, ಹೈ ಆ್ಯಂಡ್‌ ಡ್ರೈ ವಿಶ್ವಾದ್ಯಂತ ಸಂಗೀತ ಪ್ರೇಮಿಗಳ ಕೃಪೆಗೆ ಪಾತ್ರವಾಗಿದೆ.
ಇವರ ಈ ಏಕಗೀತೆ ಜನಪ್ರೀಯ ಸಂಗೀತ ವೇದಿಕೆಯಲ್ಲಿ ಜಸ್ಟಿನ್‌ ಬೈಬರ್‌ ಮತ್ತು ಅಮೇರಿಕ ರ್ಯಾಪರ್‌ ಕಾರ್ಡಿ ಬಿ. ಅವರೊಂದಿಗೆ ಟಾಪ್‌ ಪ್ಲೇ ಲಿಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ ಖುಷಿಯ ವಿಚಾರವನ್ನು ಜಿ.ವಿ. ಪ್ರಕಾಶ್‌ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. “ಇದು ಅತ್ಯಂತ ಖುಷಿಯ ವಿಚಾರ.

Advertisement

ನನ್ನ ನೆಚ್ಚಿನ ಜಸ್ಟಿನ್‌ ಬೈಬರ್‌ ಮತ್ತು ಕಾರ್ಡಿ ಬಿ. ಅವರೊಂದಿಗೆ ಟಾಪ್‌ ಪ್ಲೇ ಲಿಸ್ಟ್ ನಲ್ಲಿ ಕಾಣಿಸಿಕೊಂಡಿರುವದು ಸಂತಸ ತಂದಿದೆ ಎಂದು ಬೆದುಕೊಂಡು ಹಾಡಿನ ಲಿಂಕ್‌ ಹಂಚಿಕೊಂಡಿದ್ದಾರೆ. ಪ್ರಕಾಶ್‌ ತಮ್ಮ ಮೊದಲ ಏಕಗೀತೆಯನ್ನು ಜೂಲಿಯಾ ಗಾರ್ತಾ ಅವರೊಂದಿಗೆ ಸೇರಿ ತಯಾರಿಸಿದ್ದಾರೆ. ಹೈ ಆ್ಯಂಡ್‌ ಡ್ರೈ ನ ಲಿರಿಕ್‌ ವೀಡಿಯೋ ಯುಟ್ಯೂಬ್‌ನಲ್ಲಿ 256 ಸಾವಿರಕ್ಕೂ ಅಧಿಕ ವ್ಯೂವ್ಸ್‌ ಪಡೆದಿದೆ.

ಸೆ. 17ರಂದು ಈ ಆಲ್ಬಂ ಬಿಡುಗಡೆಯಾಗಿದ್ದು ಇಂದಿಗೂ ವಿವಿಧ ಸಂಗೀತ ವೇದಿಕೆಗಳಲ್ಲಿ ಟ್ರೆಂಡಿಗ್‌ನಲ್ಲಿದೆ.
ತಮ್ಮ ಮೊದಲ ಅಂತಾರಾಷ್ಟ್ರೀಯ ಆಲ್ಬಂ ಟ್ರೆಂಡಿಗ್‌ ಸಕ್ಸ‌ಸ್‌ನ ಜತೆಗೆ, ಇದೇ ವರ್ಷ ಟ್ರ್ಯಾಪ್‌ ಸಿಟಿ ಎಂಬ ಹೆಸರಿನ ಚಿತ್ರದ ಮೂಲಕ ಹಾಲಿವುಡ್‌ ಪ್ರವೇಶವನ್ನು ಕೂಡ ಜಿ.ವಿ. ಪ್ರಕಾಶ್‌ ಮಾಡಲಿದ್ದಾರೆ.

ರಿಕಿ ಬರ್ಚೆಲ್‌ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಡ್ರಗ್‌ ಪೆಡ್‌ಲರ್‌ ಒಬ್ಬ ಯಶಸ್ವಿ ರ್ಯಾಪರ್‌ ಆಗುವ ಕಥೆ ಇದಾಗಿರಲಿದೆ. ಜಿ.ವಿ. ಪ್ರಕಾಶ್‌ ಜತೆಗೆ ತಮಿಳು ನಟ ನೆಪೋಲಿಯನ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಪ್ರಕಾಶ್‌ ಇದರಲ್ಲಿ ವೈದ್ಯರೊಬ್ಬರ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದು, ಸದ್ಯಕ್ಕೆ ಇವರು ಅನೇಕ ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next