Advertisement

ಡೀಸೆಲ್‌ ಡಸ್ಟರ್‌ ಸ್ಥಗಿತ

07:35 AM Oct 31, 2018 | Karthik A |

ಹೊಸದಿಲ್ಲಿ: ಫ್ರಾನ್ಸ್‌ನ ಜನಪ್ರಿಯ ಕಾರು ಕಂಪನಿ ರೆನೋ ತನ್ನ ಡೀಸೆಲ್‌ ಚಾಲಿತ ಡಸ್ಟರ್‌ ಕಾರು ಉತ್ಪಾದನೆಯನ್ನು 2 ತಿಂಗಳ ಹಿಂದೆಯೇ ಸ್ಥಗಿತಗೊಳಿಸಿದೆ. ಈ ಮಾದರಿಯಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ವಾತಾವರಣ ಇರುವುದರಿಂದ ಕಂಪನಿ ಈ ನಿರ್ಧಾರ ಕೈಗೊಂಡಿದೆ ಎಂದು ಕಂಪನಿ ವಕ್ತಾರರು ಹೇಳಿದ್ದಾರೆ. 2012ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ಡಸ್ಟರ್‌ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆರಂಭದಲ್ಲಿ ಈ ಮಾದರಿ ವಾಹನ ಭಾರಿ ಜನಪ್ರಿಯತೆ ಪಡೆದಿತ್ತು. ಕಳೆದ 1 ವರ್ಷದಲ್ಲಿ ಡೀಸೆಲ್‌ ಮಾದರಿ ಕಾರಿಗೆ ಜನಪ್ರಿಯತೆ ಕುಗ್ಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next