ನವದೆಹಲಿ: ಆಧುನಿಕ ಕಾರು ಉತ್ಪಾದನೆ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ರೆನೋಲ್ಟ್ ಇಂಡಿಯಾ ಪ್ರೈ.ಲಿ., ಪ್ರಥಮ ಬಾರಿಗೆ ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿ ಸೆಗ್ಮೆಂಟ್‌ನ “ರೆನೋಲ್ಟ್ ಕ್ಯಾಪ್ಚರ್’ ಕಾರಿನ ಮುಂಗಡ ಬುಕಿಂಗ್‌ಗೆ ಚಾಲನೆ ನೀಡಿದೆ.
ಹಬ್ಬದ ದಿನಗಳಾಗಿರುವ ಕಾರಣ ಸಂಸ್ಥೆ ಈಗಾಗಲೇ ರೆನೋಲ್ಟ್ ಕ್ಯಾಪ್ಚರ್ ಕಾರುಗಳ ಉತ್ಪಾದನೆ ಮತ್ತು ವಿನ್ಯಾಸವನ್ನು ಪೂರ್ಣಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹಂತಕ್ಕೆ ತಲುಪಿದೆ. ಆ ನಿಟ್ಟಿನಲ್ಲಿ ಕ್ಯಾಪ್ಚರ್ ಕಾರಿನ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಶುರುಮಾಡಿದ್ದು, ಗ್ರಾಹಕರು ಮುಂಗಡವಾಗಿ 25 ಸಾವಿರ ರೂ. ನೀಡಿ ರೆನೋಲ್ಟ್ ಕ್ಯಾಪ್ಚರ್ ವಾಹನವನ್ನು ಕಾಯ್ದಿರಿಸುಬಹುದಾಗಿದೆ.
ರೆನೋಲ್ಟ್ ಕ್ಯಾಪ್ಚರ್ ಆ್ಯಪ್ ಅಥವಾ ರೆನೋಲ್ಟ್ ಇಂಡಿಯಾ ವೆಬ್‌ಸೈಟ್ ಮೂಲಕ ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಇತೀಚೆಗೆ ದೆಹಲಿಯಲ್ಲಿ ರೆನೋಲ್ಟ್ ಇಂಡಿಯಾ ಆಪರೇಷನ್ಸ್ ವಿಭಾಗದ ದೇಶೀಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮಿತ್ ಸಾಹ್ನೆ ಅವರು ನೂತನ ರೆನೋಲ್ಟ್ ಕ್ಯಾಪ್ಚರ್ ಕಾರನ್ನು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದರು.
“ಫ್ರಾನ್ಸ್ ಮೂಲದ ರೆನೋಲ್ಟ್ ಸಂಸ್ಥೆ ಭಾರತೀಯ ಆಟೋಮೋಟಿವ್ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದೆ. ಕಳೆದ ಕೆಲ ವರ್ಷಗಳಿಂದ ನಮ್ಮ ಸಂಸ್ಥೆಯ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜಾಗತಿಕ ಕಾರು ಮಾರುಕಟ್ಟೆಯಲ್ಲೂ ಪ್ರಿಮೀಯಂ ಎಸ್‌ಯುವಿ ರೆನೋಲ್ಟ್ ಕ್ಯಾಪ್ಚರ್ ಅತಿ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ,’ ಎಂದರು.
ವರ್ಷದಿಂದ ವರ್ಷಕ್ಕೆ ರೆನೋಲ್ಟ್ ಕಾರುಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಅಲ್ಲದೆ, ಫ್ರೆಂಚ್ ವಿನ್ಯಾಸ ಒಳಗೊಂಡಿರುವ ಅತ್ಯಾಧುನಿಕ ರೆನೋಲ್ಟ್ ಕ್ಯಾಪ್ಚರ್, ಐಎಲ್‌ಎಸ್ ಐಕಾನಿಕ್ ವಿನ್ಯಾಸ ಹಾಗೂ ಕಟ್ಟಿಂಗ್-ಎಡ್ಜ್ ತಂತ್ರಜ್ಞಾನದಿಂದ ಕೂಡಿದೆ. ಈ ಕಾರನ್ನು ಭಾರತದ ರಸ್ತೆಗಳಿಗೆ ಅನುಗುಣವಾಗಿ ರೂಪಿಸಲಾಗಿದೆ.
ಕಾರಿನ ಹೊರ ಹಾಗೂ ಒಳಾವರಣ ಅತ್ಯಾಧುನಿಕ ಪರಿಕರಗಳಿಂದ ಅಲಂಕೃತಗೊಂಡಿದ್ದು, ಸದ್ಯದಲ್ಲೇ 1.5 ಎಲ್‌ಎಚ್ 4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5ಎಲ್ ಕೆ9ಕೆ ಡೀಸೆಲ್ ಎಂಜಿನ್ ಕಾರುಗಳು ರಸ್ತೆಗಿಳಿಯಲಿವೆ. ಎಲ್ಲ ರೀತಿ ಆಧುನಿಕ ಹಾಗೂ ಗುಣಮಟ್ಟದ ಸೌಲಭ್ಯಗಳು ಕಾರು ಪ್ರಿಯರ ಮನಮೆಚ್ಚಲಿದ್ದು, ಬೆಂಗಳೂರಿನ ಎಕ್ಸ್‌ಶೋರೂಮ್ ದರ 15 ಲಕ್ಷ ರೂ.ನಿಂದ 20 ಲಕ್ಷ ರೂ. ಆಗಬಹುದು ಎಂದು ಅವರು ತಿಳಿಸಿದ್ದಾರೆ.