Advertisement
ಕಳೆದ ಬಜೆಟ್‌ನಲ್ಲಿ ಬಿಡುಗಡೆಗೊಂಡ 2.5ಕೋಟಿ ವೆಚ್ಚದ ಹೆಬ್ರಿ ಕಾರ್ಕಳ ಸಂಪರ್ಕಿಸುವ ಹೆಬ್ರಿಯಿಂದ ಅಮೃತಭಾರತಿ ಶಾಲೆಯ ತನಕದ 700 ಮೀಟರ್ ರಸ್ತೆ ಚತುಷ್ಪಥಗೊಳಿಸುವ ಕಾಮಗಾರಿ ಆರಂಭಗೊಂಡು 5ತಿಂಗಳು ಕಳೆದರೂ ರಸ್ತೆ ಬದಿಯ ಗೂಡಂಗಡಿಗಳು ಹಾಗೂ ಬೃಹದಾಕಾರದ ಮರಗಳು ಇನ್ನೂ ತೆರವುಗೊಳ್ಳದೆ ಇರುವುದು ರಸ್ತೆ ವಿಸ್ತರೀಕರಣ ಕಾಮಗಾರಿ ನಿಧಾನಗತಿಗೆ ಪ್ರಮುಖ ಕಾರಣವಾಗಿತ್ತು.
ರಸ್ತೆಯ ಇಕ್ಕೆಲಗಳಲ್ಲಿ ಕೋಳಿ ಅಂಗಡಿಗಳು, ಕ್ಯಾಂಟೀನ್, ತರಕಾರಿ ಅಂಗಡಿ, ವಾಹನ ದುರಸ್ತಿ ಅಂಗಡಿಗಳು ಸೇರಿದಂತೆ ಸುಮಾರು 13 ಅಂಗಡಿಗಳು ಇದ್ದು ತೆರವುಗೊಳಿಸಲು ಹೆಬ್ರಿ ಗ್ರಾ.ಪಂ. ಸೇರಿದಂತೆ ಇಲಾಖೆ ಕೂಡ ಸೂಚನೆ ನೀಡಿದರೂ ಗೂಡಂಗಡಿಗಳನ್ನು ಉಳಿಸುವಂತೆ ಜನಪ್ರತಿನಿಧಿಗಳ ಮೊರೆಹೋಗಿದ್ದರು. ಹೆಬ್ರಿ ತಾಲೂಕಾಗಿ ಘೋಷಣೆಯ ಜತೆಗೆ ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆಯ ಬದಿಯಲ್ಲಿರುವ ಗೂಡಂಗಡಿಗಳ ತೆರವು ಅನಿವಾರ್ಯವಾದ್ದರಿಂದ ಅಧಿಕಾರಿಗಳು ಶೀಘ್ರ ತೆರವಿಗೆ ಸೂಚನೆ ನೀಡಿದ್ದರೂ ತೆರವು ಕಾರ್ಯಕ್ಕೆ ಮುಂದಾಗದಿರುವುದನ್ನು ಗಮನಿಸಿ ಆ.9ರ ಒಳಗೆ ತೆರವು ಗೊಳಿಸಲು ಕೊನೆಯ ಸೂಚನೆ ನೀಡಲಾಗಿತ್ತು. ಅಧಿಕಾರಿಗಳಿಂದ ಪರಿಶೀಲನೆ
ಸಹಾಯಕ ಕಾರ್ಯಕಾರಿ ಅಭಿಯಂತರ ಸುಂದರ್, ಎಂಜಿನಿಯರ್ ಲೋಯಡ್, ಕಂದಾಯ ನಿರೀಕ್ಷಕ ಮಂಜುನಾಥ, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಹೆಗ್ಡೆ,ಪಿಡಿಒ ವಿಜಯ, ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ, ಹೆಬ್ರಿ ಗ್ರಾಮ ಕರಣಿಕ ಗಣೇಶ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.