Advertisement

ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ನೆನಪಿಸಿಕೊಳ್ಳಿ

06:21 PM Aug 16, 2022 | Team Udayavani |

ಶೃಂಗೇರಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಜನರ ಬಲಿದಾನವನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ತಹಶೀಲ್ದಾರ್‌ ಗೌರಮ್ಮ ಹೇಳಿದರು.

Advertisement

ರಾಷ್ಟ್ರೀಯ ಹಬ್ಬಗಳ ಸಮಿತಿ ಸೋಮವಾರ ಏರ್ಪಡಿಸಿದ್ದ ಪಪಂ ಎದುರು 75 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಸಂದೇಶ ನೀಡಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ದೇಶ ಸ್ವಾತಂತ್ರ ಬಂದಾಗ ಇದ್ದ ನೂರಾರು ಸಮಸ್ಯೆಯನ್ನು ಅಂದಿನ ಪ್ರಧಾನಿ ನೆಹರೂ ಸಮರ್ಥವಾಗಿ ನಿರ್ವಹಿಸಿದ್ದರಿಂದ ದೇಶ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಪಂಚವಾರ್ಷಿಕ ಯೋಜನೆಯ ಮೂಲಕ ಆಹಾರದಲ್ಲಿ ಸ್ವಾವಲಂಬನೆ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೈಗಾರಿಕೆ ಅಭಿವೃದ್ಧಿ ಸಹಿತ ದೇಶದ ಉನ್ನತಿಗೆ ಕಾರಣವಾಗಿದೆ ಎಂದರು.ಪಪಂ ಅಧ್ಯಕ್ಷ ಹರೀಶ್‌ ಶೆಟ್ಟಿ, ಉಪಾಧ್ಯಕ್ಷ ಎಂ.ಎಲ್‌
.ಪ್ರಕಾಶ್‌, ಪಪಂ ಸದಸ್ಯರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತೊರೆಹಡ್ಲು ಸರಕಾರಿ ಪ್ರೌಢಶಾಲೆ: ಬೇಗಾನೆ ಕಾಡಪ್ಪಗೌಡ ಧ್ವಜಾರೋಹಣ ಮಾಡಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗಾನಂದ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಸೇವೆಯಲ್ಲಿದ್ದ ನಾಕಪ್ಪನಾಯ್ಕ ಬಿಲಗದ್ದೆ, ಉಳುವೆ ಗೋಪಾಲರಾವ್‌, ಬೇಗಾನೆ ಧರ್ಮಪ್ಪಗೌಡರನ್ನು ಗೌರವಿಸಿದರು. ಮುಖ್ಯ ಶಿಕ್ಷಕ ದತ್ತಾತ್ರೇಯಯಾಜಿ ಸ್ವಾಗತಿಸಿದರು. ಗುರುಮೂರ್ತಿ ನಿರೂಪಿಸಿದರು.

ಸಪಪೂ ಕಾಲೇಜು: ಪ್ರಾಂಶುಪಾಲ ಅರುಣಕುಮಾರ್‌ ಧ್ವಜಾರೋಹಣ ಮಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್‌ ಪುದುವಾಳ್‌, ಸದಸ್ಯರಾದ ಎಚ್‌.ಕೆ. ಸುಬ್ರಮಣ್ಯ, ಕೆ.ಎಲ್‌.ಗೋಪಾಲಕೃಷ್ಣ ಇದ್ದರು.

Advertisement

ಜೆಸಿಬಿಎಂ ಕಾಲೇಜು: ಪ್ರಾಂಶುಪಾಲ ಡಾ| ಸ್ವಾಮಿ ಧ್ವಜಾರೋಹಣ ಮಾಡಿದರು.ಪಿಯು ಕಾಲೇಜಿನ ಉಪ ಪ್ರಾಂಶುಪಾಲ ಎ.ಜಿ. ಪ್ರಶಾಂತ್‌, ಎನ್‌ಸಿಸಿ ಕುಮಾರಸ್ವಾಮಿ ಉಡುಪ ಇದ್ದರು.

ಹಾಲಂದೂರು ಪಿಎಸಿಎಸ್‌: ಸಂಘದ ಅಧ್ಯಕ್ಷ ಎಂ.ಎನ್‌. ಚಂದ್ರಶೇಖರ್‌ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಎಂ.ಸಿ.ಅಶೋಕ್‌, ಸಿಇಒ ರಜನಿ ಇದ್ದರು.

ಬೇಗಾರ್‌ ಕರ್ನಾಟಕ ಪಬ್ಲಿಕ್‌ ಸ್ಕೂಲ್‌: ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಧ್ವಜಾರೋಹಣ ಮಾಡಿದರು. ಪ್ರಾಂಶುಪಾಲ ಶಿವರಾಂ, ಬೇಗಾರ್‌ ಗ್ರಾಪಂ ಅಧ್ಯಕ್ಷ ಲಕ್ಷ್ಮೀಶ, ಸದಸ್ಯರು ಭಾಗವಹಿಸಿದ್ದರು.

ಮೆಣಸೆ ಗ್ರಾಪಂ: ಗ್ರಾಪಂ ಅಧ್ಯಕ್ಷ ನವೀನ್‌ ಆರ್‌. ಕಲ್ಕಟ್ಟೆ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷೆ ಜಯಲಕ್ಷ್ಮೀ, ಅಭಿವೃದ್ಧಿ ಅಧಿ ಕಾರಿ ನಾಗಭೂಷಣ್‌, ಸದಸ್ಯರು ಇದ್ದರು.

ಸರಕಾರಿ ಪ್ರೌಢಶಾಲೆ ಶೃಂಗೇರಿ: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾನಂದ ಧ್ವಜಾರೋಹಣ ಮಾಡಿದರು. ಹಳೇ ವಿದ್ಯಾರ್ಥಿ ಸಂಘದ ವಿಜಯಕುಮಾರ್‌, ಶೃಂಗೇರಿ ಸುಬ್ಬಣ್ಣ, ಉಪ ಪ್ರಾಂಶುಪಾಲ ಶಶಿಧರ್‌ ಇದ್ದರು.

ಇನ್ನರ್‌ವ್ಹೀಲ್‌ ಕ್ಲಬ್‌: ರೋಟರಿ ಭವನದಲ್ಲಿ ನಿವೃತ್ತ ಪ್ರಾಂಶುಪಾಲ ಜನಾರ್ಧನ ಶ್ಯಾನುಭೋಗ್‌ ಧ್ವಜಾರೋಹಣ ಮಾಡಿದರು. ಕ್ಲಬ್‌ ಅಧ್ಯಕ್ಷೆ ಪ್ರಿಯದರ್ಶಿನಿ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್‌ ಅ ಧಿಕಾರಿ ಕೆ.ನಾಗೇಂದ್ರ, ಶತಮಾನ ಕಂಡ ಸಂಪೆಕೊಳಲಿನ ಬೆಳ್ಳಜ್ಜಿಯವರನ್ನು ಗೌರವಿಸಲಾಯಿತು.

ಮ್ಯಾಮೊಸ್‌: ಮ್ಯಾಮೊಸ್‌ ನಿರ್ದೇಶಕ ಅಂಬ್ಲೂರು ಸುರೇಶ್ಚಂದ್ರ ಧ್ವಜಾರೋಹಣ ಮಾಡಿದರು. ನಿರ್ದೇಶಕ ಟಿ.ಕೆ.ಪರಾಶರ, ವ್ಯವಸ್ಥಾಪಕ ಮಹೇಶ್ವರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next