Advertisement

ಕಾಳಸಂತೆಯಲ್ಲಿ ರೆಮ್‌ಡಿಸಿವಿಯರ್‌; ಇಬ್ಬರ ಸೆರೆ

06:09 PM Apr 27, 2021 | Team Udayavani |

ಬೆಳಗಾವಿ: ಅಕ್ರಮವಾಗಿ ಕಾಳಸಂತೆಯಲ್ಲಿ ಬೇಕಾಬೆಟ್ಟಿ ದರದಲ್ಲಿ ರೆಮ್‌ಡಿಸಿವಿಯರ್‌ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

Advertisement

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಪುರ ಗ್ರಾಮದ, ಸದ್ಯ ಬೆಳಗಾವಿ ಶಾಹೂನಗರದ ಸಮರ್ಥ ಗಲ್ಲಿಯಲ್ಲಿದ್ದ ಮಂಜುನಾಥ ದುಂಡಪ್ಪ ದಾನವಾಡಕರ (35) ಹಾಗೂ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ, ಸದ್ಯ ಶಿವಾಜ ನಗರದಲ್ಲಿದ್ದ ಸಂಜೀವ ಚಂದ್ರಶೇಖರ ಮಾಳಗಿ(33) ಎಂಬಾತರನ್ನು ಬಂಧಿಸಲಾಗಿದೆ.

ಕೋವಿಡ್‌ -19 ರೋಗಿಗಳಿಗೆ ನೀಡುವ ರೆಮ್‌ ಡಿಸಿವಿಯರ್‌ ಔಷಧಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಸಿಟಿ ಕ್ರೈಂ ಬ್ರಾಂಚ್‌ ಪೊಲೀಸರು ದಾಳಿ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ 3400 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಕಾಳಸಂತೆಯಲ್ಲಿ ಈ ಇಬ್ಬರೂ 25-30 ಸಾವಿರ ರೂ. ದರದಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಇನ್ಸಪೆಕ್ಟರ್‌ ನಿಂಗನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮೂರು ರೆಮ್‌ಡಿಸಿವಿಯರ್‌ ಔಷಧ ಬಾಟಲಿ, ಎರಡು ಮೊಬೆ„ಲ್‌, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next