Advertisement

ಟೆಂಟ್‌ನಲ್ಲಿ ವಾಸವಿದ್ದ ಕುಟುಂಬಗಳ ಸ್ಥಳಾಂತರ

11:46 PM Nov 23, 2019 | Team Udayavani |

ಉಡುಪಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಉಡುಪಿ ಜಿಲ್ಲಾ ನಾಗರಿಕ ಸೇವಾ ಸಮಿತಿ ಟ್ರಸ್ಟ್‌ ಇವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕರಾವಳಿ ಬೈಪಾಸ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್‌ನಲ್ಲಿ ವಾಸವಿದ್ದ ರಾಜಸ್ಥಾನ ಮೂಲದ 5 ಕುಟುಂಬಗಳ ಒಟ್ಟು 26 ಮಂದಿಯನ್ನು ಸುರಕ್ಷಿತವಾಗಿ ಬೇರೆ ಕಡೆ ಸ್ಥಳಾಂತರಿಸಿದ್ದಾರೆ.

Advertisement

ಮಕ್ಕಳು ರಸ್ತೆ ಬದಿಯಲ್ಲಿ ವಾಸವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುವುದರಿಂದ ಸಂಭವನೀಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ಮೂಲಕ ನವಯುಗ ಕಂಪೆನಿಯ ಸಹಯೋಗದೊಂದಿಗೆ ನಿರಂತರವಾಗಿ ಟೆಂಟ್‌ ಹಾಕುವ ಪ್ರದೇಶಗಳಲ್ಲಿ ಜೆ.ಸಿ.ಬಿ. ಮೂಲಕ ಅಗೆದು ಮುಂದೆ ಆ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು ಟೆಂಟ್‌ ಅಳವಡಿಸದಂತೆ ಮಾಡಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ, ಕಾನೂನು ಪರೀವಿಕ್ಷಣಾಧಿಕಾರಿ ಪ್ರಭಾಕರ ಆಚಾರ್‌, ಸಮಾಲೋಚಕಿ ಅಂಬಿಕಾ ಕೆ.ಎಸ್‌., ಸಮಾಜ ಸೇವಕ ಯೋಗೀಶ್‌, ಜಿಲ್ಲಾ ನಾಗರಿಕ ಸೇವಾ ಸಮಿತಿ ಟ್ರಸ್ಟ್‌ನ ನಿತ್ಯಾನಂದ ಒಳಕಾಡು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next