ಉಡುಪಿ: ತೋನ್ಸೆ ಪೈ ಕುಟುಂಬದ ಹಿರಿಯರ ಮನೆಯಲ್ಲಿ ಪ್ರತೀ ತಿಂಗಳಲ್ಲಿ ಸತ್ಯನಾರಾಯಣ ವ್ರತವು ನಿರಂತರ ಜರಗುತ್ತಿದ್ದು 215ನೇ ವ್ರತವು ಎ. 7ರಂದು ಶ್ಯಾಮಲ ಪೈ ಮತ್ತು ಎಸ್. ಗೋವಿಂದ್ರಾಯ ಪೈ ಅವರ ಸ್ಮರಣಾರ್ಥ ಅವರ ಪುತ್ರ ಎಸ್. ಗಣೇಶ್ ಗೋವಿಂದ್ರಾಯ ಪೈ ಮತ್ತು ಶ್ರುತಿ ಪೈ ಬಾರಕೂರು ಅವರ ಸೇವೆಯಾಗಿ ಜರಗಿತು.
ಭಜನಾ ಸೇವೆಯು ಶ್ರೀ ಮಹಾಲಸಾ ನಾರಾಯಣೀ ಭಜನಾ ಮಂಡಳಿ ತೋನ್ಸೆ ಅವರಿಂದ ಜರಗಿತು.
ವ್ರತವು ಕುಲ ಪುರೋಹಿತರಾದ ವೇ| ಕೆ. ರಾಮಚಂದ್ರ ಅವಧಾನಿ ಕಲ್ಯಾಣಪುರ ಅವರ ಪೌರೋಹಿತ್ಯದಲ್ಲಿ ಜರಗಿತು. ಸಿ.ಎ.ಕೆ. ಗಣೇಶ್ ಕಾಮತ್ ಉಡುಪಿ ಧಾರ್ಮಿಕ ಚಿಂತನೆ ಕಾರ್ಯಕ್ರಮ ನಿರ್ವಹಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ಇದರ ನಿವೃತ್ತ ಮ್ಯಾನೇಜರ್ ಟಿ. ಆರ್. ಶೆಣೈ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಚಿಂತಕ ಪಿ. ರಾಮಚಂದ್ರ ಕಾಮತ್ ಹಿರಿಯಡ್ಕ, ರಾಘವೇಂದ್ರ ಕಾಮತ್ ಕೆ. ಎಂ. ಸಿ. ಮಣಿಪಾಲ, ಮಂಜುನಾಥ ನಾಯಕ್ (P.W.D Excutive Engineer), ಟಿ. ವೆಂಕಟೇಶ್ ಶೆಣೈ ಮುಂಬೈ , ಸಾಸ್ತಾನ ಕುಟುಂಬದ ಹಿರಿಯರಾದ ಲಕ್ಷ್ಮಣ್ ಪೈ , ಮೋಹನದಾಸ ಪೈ ಉಪಸ್ಥಿತರಿದ್ದರು.
ಇತ್ತೀಚೆಗೆ ಸ್ವರ್ಗಸ್ಥರಾದ ಮಲ್ಪೆ$ ಕುಟುಂಬದ ಹಿರಿಯರಾದ ಎಂ. ಯಶವಂತ ಪೈ ಉಡುಪಿ , ಕೋಟೇಶ್ವರ ಕುಟುಂಬದ ಹಿರಿಯರಾದ ಶಾಂತಾ ಮೂಡ್ಲಗಿರಿ ಕಾಮತ್ ಕೋಟೇಶ್ವರ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಸೇವೆದಾರರ 175 ವರ್ಷಗಳ ವಂಶ ವೃಕ್ಷದ 7 ವಂಶಾವಳಿಯ ವಿವರವನ್ನು ತೋನ್ಸೆ ದೇವದಾಸ ಪೈ ಅವರು ನೀಡಿ ಹಿರಿಯರನ್ನು ಸ್ಮರಿಸಲಾಯಿತು. ಗೀತೆಯ ವಿಶ್ಲೇಷಣೆಯನ್ನು ಕೆ. ಮಂಗಳಾ ಗಣೇಶ್ ಕಾಮತ್ ಉಡುಪಿ,
ಸುಧೀಂದ್ರವಾಣಿಯನ್ನು ಸಿಂಧು ಕಾಮತ್ ಉಡುಪಿ ನಿರೂಪಿಸಿದರು.
ಕುಟುಂಬದ ಹಿರಿಯರಾದ ಟಿ. ಅಜಿತ್ ಪೈ, ಎಸ್. ಪ್ರಭಾಕರ ಪೈ, ಎಸ್. ಪ್ರಕಾಶ್ ಪೈ, ವೆಂಕಟೇಶ್ ಪೈ, ದೇವದಾಸ್ ಕಾಮತ್, ಟಿ. ಮಧುಸೂದನ್ ಪೈ, ಚಂದ್ರಕಾಂತ್ ಪ್ರಭು, ದಯಾನಂದ ಪೈ, ಪ್ರೇಮಾನಂದ ಪೈ, ಚರ್ಡಪ್ಪ ಕಿಣಿ, ಯೋಗೀಶ್ ಹೆಗ್ಡೆ, ಕಾಶೀನಾಥ್ ಪೈ, ಕಿಶೋರ್ ಪೈ, ಬಾಲಚಂದ್ರ ಪೈ, ಟಿ. ನರಸಿಂಹ ಪೈ, ಟಿ ಮಾಧವ ಪೈ, ಶ್ರೀಕಾಂತ್ ಕಾಮತ್, ಕೆ. ಯೋಗೀಶ್ ಕಾಮತ್, ಬಿ. ಮೋಹನದಾಸ ಪೈ, ಎಂ. ರಮೇಶ್ ಪೈ, ಎಸ್. ಶಶಿಧರ ಪೈ, ಎಸ್. ಎಸ್. ಪೈ, ಟಿ. ರಾಮದಾಸ ಪೈ, ಟಿ. ದೇವೇಂದ್ರ ಪೈ ಮತ್ತು ನಾರಾಯಣ ಪ್ರಭು ಉಪಸ್ಥಿತರಿದ್ದರು.ಟಿ. ಗಣೇಶ್ ಪೈ ಸ್ವಾಗತಿಸಿದರು. ಕೆ. ಸುರೇಶ ಪೈ ವಂದಿಸಿದರು.