ಮುಂಬಯಿ, ಮಾ. 1: ನಮ್ಮ ಆರಾಧ್ಯ ದೇವರಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಂದಿಸುತ್ತಾ, ಇಲ್ಲಿನ ಆರಾಧ್ಯ ದೇವರಾದ ಶನೀಶ್ವರ ದೇವರಿಗೆ ನಮಸ್ಕರಿಸುತ್ತಾ, ಇವತ್ತಿನ ದಿನ ಒಂದು ವಿಶೇಷ ದಿನವಾಗಿದೆ ಎಂದು ಹೇಳಿದರೂ ತಪ್ಪಾಗಲಾರದು. ಯಾಕೆಂದರೆ ನಾವು ಮುಂಬಯಿ ಮಹಾನಗರಕ್ಕೆ ಬಂದ ಉದ್ದೇಶವೇ ಬೇರೆಯಾದರೂ ಈ ಶುಭ ಶನಿವಾರ ದಿನದಂದು ನಮ್ಮನ್ನು ಇಲ್ಲಿಗೆ ಬರಮಾಡಿಕೊಳ್ಳಬೇಕು ಎಂದು ನಿಮ್ಮ ಮಂಡಳಿಯ ಹೇಳಿಕೆ ಬಂತು. ಆದ್ದರಿಂದ ಶನಿವಾರ ದಿನ ಶನೀಶ್ವರ ದೇವರ ಸನ್ನಿಧಾನಕ್ಕೆ ಬಂದೆವು ಎಂದರೆ ಅದು ಕೂಡಾ ನಮ್ಮ ಭಾಗ್ಯ ಎಂದು ಹೇಳಬಹುದು. ಯಾಕೆಂದರೆ ನಿಮ್ಮ ಮಂಡಳಿಯವರು ಕಟೀಲಮ್ಮನನ್ನು ನೆನಪಿಸಿಕೊಂಡು ಇಂದು ನಮ್ಮನ್ನು ಈ ಪುಣ್ಯ ಕ್ಷೇತ್ರಕ್ಕೆ ಕರೆಸಿಕೊಂಡಿದ್ದೀರಿ. ಇದರಲ್ಲಿ ನಿಮಗೂ ಕೂಡ ಭಾಗ್ಯ ಲಭಿಸಿದೆ ಎಂದು ಹೇಳಬಹುದು.
ಯೋಚನೆ ಮಾಡದೆ ನಾವು ಒಂದು ಯಾವ ಕಾರ್ಯಕ್ರಮ ಮಾಡಿದರೂ ಅದು ದೊಡ್ಡ ಪ್ರಸಾದ. ಯಾಕೆಂದರೆ ಇತ್ತೀಚೆಗೆ ಬ್ರಹ್ಮಕಲಶೋತ್ಸವ ಗೊಂಡು ಕಟೀಲು ಕ್ಷೇತ್ರದಲ್ಲಿ ಆರಾಧಿಸುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮೂಲ ಪ್ರಸಾದ ಶನಿ ದೇವರಿಗೆ ಅರ್ಪಣೆಯಾಗಿದೆ ಎಂದರೆ ಅದು ಕೂಡ ವಿಶೇಷತೆಯಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣರು ನುಡಿದರು.
ಫೆ. 29ರಂದು ಬೊರಿವಲಿಯ ಶ್ರೀ ಶನಿ ಮಹಾತ್ಮಾ ಪೂಜಾ ಮಿತ್ರ ಮಂಡಳಿಯ ಸಂಚಾಲಕತ್ವದ ಶ್ರೀ ಶನಿಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಮಂದಿರ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ. ನೀವೆಲ್ಲರೂ ಶನಿದೇವರನ್ನು ಭಕ್ತಿಯಿಂದ ಪೂಜೆ ಮಾಡುತ್ತಾ ಬಂದಿದ್ದೀರಿ. ನಿಮಗೂ ಒಳ್ಳೆಯದಾಗಲಿ. ಬಂದ ನಮಗೂ ಒಳ್ಳೆಯದಾಗಲಿ. ಯಾಕೆಂದರೆ ಈ ಪುಣ್ಯ ಕ್ಷೇತ್ರಕ್ಕೆ ಬಂದ ಕೂಡಲೇ ಇಲ್ಲಿ ನಿಮ್ಮ ಭಕ್ತರಲ್ಲಿ ಎಷ್ಟು ಶ್ರದ್ಧೆಯಿದೆ ಎಂದು ನಾವು ಕಣ್ಣಾರೆ ಕಂಡೆವು. ಇಂತಹ ಮಹಾನಗರದಲ್ಲಿ ದೊಡ್ಡ ದೊಡ್ಡ ಆಚರಣೆಯ ನಡುವೆಯೂ ನಿಮ್ಮ ಆರಾಧ್ಯ ದೇವರಾದ ಶನೀಶ್ವರ ದೇವರನ್ನು ಆರಾಧಿಸುತ್ತೀರಿ. ಅದು ಒಂದು ವಿಶೇಷ. ನಮ್ಮ ಆರಾಧ್ಯ ದೇವರಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮತ್ತು ಇಲ್ಲಿನ ಆರಾಧ್ಯ ದೇವರಾದ ಶನಿದೇವರ ಅನುಗ್ರಹ ನಿಮಗೆಲ್ಲರಿಗೂ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹಾಗೂ ಹರಿ ಪ್ರಸಾದ್ ಆಸ್ರಣ್ಣರು ಶನಿದೇವರಿಗೆ ಅರ್ಪಿಸುತ್ತಾ ಮಹಾಮಂಗಳಾರತಿ ನೆರವೇರಿತು. ಅನಂತರ ಆಗಮಿಸಿದ ಭಕ್ತಾದಿಗಳಿಗೆ ಕಟೀಲಮ್ಮನ ಮೂಲ ಪ್ರಸಾದ ವಿತರಿಸಿದರು.
ಈ ಸಂದರ್ಭ ಮಂದಿರದ ಪ್ರಧಾನ ಅರ್ಚಕರಾದ ಪಕ್ಷಿಕೆರೆ ವಿಜಯ ಉಪಾಧ್ಯಾಯ, ಕೃಷ್ಣ ಉಪಾಧ್ಯಾಯ, ಗುರು ಭಟ್, ಮಂಡಳಿಯ ಅಧ್ಯಕ್ಷರಾದ ಗೋವರ್ಧನ ಸುವರ್ಣ, ಉಪಾಧ್ಯಕ್ಷರಾದ ಗಿರೀಶ್ ಕರ್ಕೇರ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಕೇಶವ ಕಾಂಚನ್, ಜತೆ ಕೋಶಾಧಿಕಾರಿ ಸುಧಾಕರ ಸನಿಲ್, ಸಮಿತಿಯ ನಾಗೇಶ್ ಕರ್ಕೇರ, ಸಂಜೀವ ಸಾಲ್ಯಾನ್, ತಿಮ್ಮಪ್ಪ ಕೋಟ್ಯಾನ್, ರಘುನಾಥ್ ಸಾಲ್ಯಾನ್, ಕೃಷ್ಣ ಅಮೀನ್, ದಾಮೋದರ ಪುತ್ರನ್, ಭವಾನಿ ಸಾಲ್ಯಾನ್, ಸದಸ್ಯರುಗಳಾದ ಪ್ರಕಾಶ್ ಅಮೀನ್, ದೇವೇಂದ್ರ ಸುರತ್ಕಲ್, ಗೋಪಾಲ್ ಪುತ್ರನ್, ಯಶ್ ಶೆಟ್ಟಿ, ದಿವಾಕರ ಗೌಡ, ವಾಸುದೇವ ಕರ್ಕೇರ, ರಾಜೇಶ್ ಕರ್ಕೇರ, ಹರೀಶ್ ತಿಂಗಳಾಯ, ವಾಮನ್ ಸುವರ್ಣ, ಸ್ಥಳೀಯರಾದ ಪದ್ಮನಾಭ ಶೆಟ್ಟಿ, ಪ್ರಭಾಕರ ಶೆಟ್ಟಿ, ಸಂದೀಪ್ ಶೆಟ್ಟಿ, ದಯಾವತಿ ಮೆಂಡನ್, ಜನಾರ್ಧನ ಸಾಲ್ಯಾನ್, ವಿಜಯ ಮೆಂಡನ್, ಜಗನ್ನಾಥ್ ಕಾಂಚನ್, ಸರ್ವ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದರು.