Advertisement

Gurugram ಧಾರ್ಮಿಕ ಕೇಂದ್ರಕ್ಕೆ ಬೆಂಕಿ ಹಚ್ಚಿ ದಾಂಧಲೆ; ಪೊಲೀಸರಿಂದ ಪಹರೆ ಮುಂದುವರಿಕೆ

11:34 PM Aug 07, 2023 | Team Udayavani |

ಗುರುಗ್ರಾಮ/ಚಂಡೀಗಢ: ಹರಿಯಾಣದ ನೂಹ್‌ನಲ್ಲಿ ನಡೆದ ಹಿಂಸಾಚಾರಗಳು ನಿಯಂತ್ರಣಕ್ಕೆ ಬರುತ್ತಲೇ ಗುರುಗ್ರಾಮ ಜಿಲ್ಲೆಯ ಗ್ರಾಮವೊಂದರಲ್ಲಿ ಧಾರ್ಮಿಕ ಕೇಂದ್ರದ ಮೇಲೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಅಲ್ಲಿ ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದ್ದ ವಸ್ತುಗಳು ಸುಟ್ಟು ಹೋಗಿವೆ. ಜಿಲ್ಲೆಯಲ್ಲಿ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಇರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ.

Advertisement

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಜನರು ಈ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಧಾರ್ಮಿಕ ಕೇಂದ್ರಕ್ಕೆ ತಡರಾತ್ರಿ 1.30ರ ವೇಳೆಗೆ ಬೆಂಕಿ ಹಚ್ಚಲಾಯಿತು. ಸ್ಥಳೀ ಯರ ನೆರವಿನಿಂದ ಅದನ್ನು ನಿಯಂತ್ರಿ ಸಲಾಗಿದೆ ಎಂದು ಪೊಲೀಸರಿಗೆ ಸಲ್ಲಿಸಲಾ   ಗಿರುವ ದೂರಿನಲ್ಲಿ ಆರೋ ಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.

ತೆರವಿಗೆ ತಡೆಯಾಜ್ಞೆ: ಇತ್ತೀಚೆಗಷ್ಟೇ ಹಿಂಸಾಕೃತ್ಯಗಳು ನಡೆದು ಸದ್ಯ ತಣ್ಣಗಾ ಗಿರುವ ಹರಿಯಾಣದ ನೂಹ್‌ನಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಅಕ್ರಮ ಕಟ್ಟಡಗಳನ್ನು ಕೆಡವಿ ಹಾಕುವ ಕೆಲಸಕ್ಕೆ ತಡೆಯಾಜ್ಞೆ ವಿಧಿಸಲಾಗಿದೆ. ಸರಕಾರದ ಈ ಕ್ರಮದ ಬಗ್ಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾ| ಜಿ.ಎಸ್‌.ಸಂಧಾವಲಿಯಾ ನೇತೃತ್ವದ ನ್ಯಾಯಪೀಠ ಸ್ವಯಂಪ್ರೇರಿತವಾಗಿ ವಿಚಾ ರಣೆ ನಡೆಸಿತು. ಮುಂದಿನ ಹಂತ ಗಳಲ್ಲಿ ಅಕ್ರಮ ಕಟ್ಟಡಗಳನ್ನು ತೆರವಿನ ಕಾರ್ಯಾಚರಣೆ ನಡೆಸಕೂಡದು ಎಂದು ಆದೇಶ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next