Advertisement

ಧಾರ್ಮಿಕ ಕಟ್ಟಡಕ್ಕೆ ಭೂಮಿ: ಸುಪ್ರೀಂಕೋರ್ಟ್‌ ಪರಿಶೀಲನೆ 

10:00 AM Jan 23, 2017 | Team Udayavani |

ಹೊಸದಿಲ್ಲಿ: ಖಾಸಗಿ ಸಂಸ್ಥೆಗಳಿಗೆ ಉಚಿತ ಧರ್ಮಾಧಾರಿತ  ಕಟ್ಟಡಗಳ ನಿರ್ಮಾಣಕ್ಕಾಗಿ ಭೂಮಿ ಮಂಜೂರು ಮಾಡಲು ಸಾಧ್ಯವೇ ಎಂಬ ವಿಚಾರ  ಪರಿಶೀಲನೆಗೆ ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದೆ. ಚೆನ್ನೈ ಸಮೀಪದ ಉಲ್ಲಾಗರಂ ಗ್ರಾಮದಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣಕ್ಕಾಗಿ  ತಮಿಳುನಾಡು ಸರಕಾರ 1986ರಲ್ಲಿ 0.27 ಎಕರೆ ಭೂಮಿಯನ್ನು ಉಚಿತವಾಗಿ ಮಂಜೂರು ಮಾಡಿದ್ದನ್ನು  ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸರ್ಜಿ ಸಲ್ಲಿಸಲಾಗಿತ್ತು. 

Advertisement

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ  ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಹಾಗೂ ನ್ಯಾಯಮೂರ್ತಿ 
ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ, ಈ ಸಂಬಂಧ  ಮಾರ್ಚ್‌ 20ಕ್ಕೂ ಮೊದಲು ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ನೋಂದಣಿ ಮಾಡುವಂತೆ  ನಿರ್ದೇಶನ ನೀಡಿತಲ್ಲದೆ, ಖಾಸಗಿ ಸಂಸ್ಥೆಗಳಿಗೆ ಧರ್ಮಾಧಾರಿತ  ಕಟ್ಟಡಗಳ ನಿರ್ಮಾಣಕ್ಕಾಗಿ ಸರಕಾರ ಉಚಿತ ಭೂಮಿ ಮಂಜೂರು ಮಾಡಲು ಸಾಧ್ಯವೆ ಎಂಬ  ಕುರಿತು ಪರಿಶೀಲನೆ ನಡೆಸಲು ಸಮ್ಮತಿ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next