Advertisement
ನಗರದಂಚಿನ ಕುಕ್ಕುಂದೂರು ಗ್ರಾ.ಪಂ ವ್ಯಾಪ್ತಿಯ ಹುಡ್ಕೋ ಕಾಲನಿಯಲ್ಲಿ ತಾ| ಗುಡ್ಡೆ ಗುಳಿಗ ದೈವದ ಸ್ಥಾನವಿದೆ. 90 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ದೈವಸ್ಥಾನವಿದು. ಈಗ ಜೈನ ಕುಟುಂಬಕ್ಕೆ ಸೇರಿದ ಆಡಳಿತದಲ್ಲಿದೆ.
Related Articles
Advertisement
ಸರಕಾರಿ ಕಚೇರಿಗಳಲ್ಲಿ ಬೃಹತ್ ಗಂಟೆ ತೂಗು ಹಾಕಿ ಬಾರಿಸುವ ಕ್ರಮ ಹಿಂದೆ ಜಾರಿಯಲ್ಲಿತ್ತು. ಇಲ್ಲಿನ ತಾ| ಆಡಳಿತ ದಲ್ಲಿಯೂ ಇದೇ ವ್ಯವಸ್ಥೆಯಿತ್ತು. ಒಂದು ರಾತ್ರಿ ಕಾವಲು ಕಾಯುತ್ತಿದ್ದ ಕಾವಲು ಪೊಲೀಸ್ ಸಿಬಂದಿ ನಿದ್ದೆಗೆ ಜಾರಿದ್ದ ವೇಳೆ ಗಂಟೆ ತನ್ನಷ್ಟಕ್ಕೆ ಹೊಡೆದುಕೊಂಡು ಶಬ್ದ ಹೊರ ಹೊಮ್ಮಿಸಿದೆ. ಅಂದು ಗಂಟೆ ಪುಡಿಯಾಗಿತ್ತು. ಸಿಬಂದಿ ಎಚ್ಚರಗೊಂಡಾಗ ವಿಸ್ಮಯ ಬೆಳಕಿಗೆ ಬಂದಿತ್ತು. ಅಂದು ಗುಳಿಗ ದೈವ ತನ್ನ ಶಕ್ತಿಯೆ ಇರುವಿಕೆಯನ್ನು ತೋರ್ಪಡಿಸಿತ್ತು. ಅಂದಿನಿಂದ ಹಲವು ವಿದ್ಯಮಾನಗಳು ನಡೆದವು ಎಂದು ಹಿರಿಯರು ಹೇಳುತ್ತಾರೆ.
ಸಂಪ್ರದಾಯ ಪಾಲನೆ ಕಚೇರಿಯ ಕಡತಗಳು ಕಣ್ಣು ಕಟ್ಟಿದಂತಾಗುವುದು, ಅಧಿಕಾರಿಗಳುಪರಿಶೀಲನೆಗೆ ಬಂದಾಗ ದಾಖಲೆಗಳು ಮಾಯವಾಗುವುದು, ನೌಕರರ ಕೆಲಸಕ್ಕೆ ತೊಂದರೆ ಆಗುವುದು ಇತ್ಯಾದಿ ನಡೆಯುತ್ತಿತ್ತು. ಇದಕ್ಕೆಲ್ಲ ಪರಿಹಾರವೆಂಬಂತೆ ದೈವಕ್ಕೆ ಪ್ರಾರ್ಥನೆ ಹರಕೆ ನೀಡುತ್ತ ಬಂದ ಬಳಿಕ ಇದೆಲ್ಲವೂ ನಿಂತಿತು. ಈ ಸಂಪ್ರದಾ
ದೈವದ ಕೋರ್ಟ್‌ನಲ್ಲಿ ಪರಿಹಾರ :
ಪೊಲೀಸ್ ಇಲಾಖೆ ಕೂಡ ಇಲ್ಲಿ ದೈವದ ಮುಂದೆ ಶರಣಾಗುತ್ತದೆ. ಪ್ರತಿ ವರ್ಷ ಇಲಾಖೆ ವತಿಯಿಂದ ಕೋಲ ನೀಡಲಾಗುತ್ತಿದೆ. ಪೊಲೀಸರಿಗೆ ಸವಾಲಾದ ಅನೇಕ ಪ್ರಕರಣಗಳು ದೈವದ ಮೊರೆ ಹೋದ ಬಳಿಕ ಪರಿಹಾರ ಕಂಡಿವೆಯಂತೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ಹಿರಿಯ ಅಧಿಕಾರಿಗಳೇ ಇದನ್ನು ಹೇಳಿದ್ದಾರೆ. ಅನೇಕ ಸಂದರ್ಭ ಹರಕೆ ಹೊತ್ತ ಬಳಿಕವೇ ತಪ್ಪಿಸಿಕೊಂಡ ಕಳ್ಳ ಕೈಗೆ ಸಿಕ್ಕಿರುವುದು, ಕಳೆದು ಹೋದ ವಾಕಿಟಾಕಿ, ಟೋಪಿ ಮತ್ತೆ ಸಿಕ್ಕಿರುವುದು ನಡೆದಿದೆಯಂತೆ. ಯಾವುದೇ ಜಾತಿ, ಧರ್ಮದ ಅಧಿಕಾರಿ ಠಾಣೆಗೆ ಬಂದರೂ ಕೋಲ ತಪ್ಪುವುದಿಲ್ಲ ಎನ್ನುತ್ತಾರೆ ಪೊಲೀಸರೋರ್ವರು. ಎರಡೂ ಇಲಾಖೆ ಕಚೇರಿಗಳಲ್ಲಿ ಹರಕೆ ಡಬ್ಬವೂ ಇರಿಸಲಾಗಿದೆ.
ಕಥೆಗಳು ಸಾಕಷ್ಟಿವೆ :
ಕಾರಣಿಕ ದೈವದ ಮಹಿಮೆ ಕುರಿತು ಅನೇಕ ಕಥೆಗಳು ಸ್ಥಳಿಯವಾಗಿ ಪ್ರಚಲಿತ ದಲ್ಲಿವೆ. ದೈವಕ್ಕೆ ಕೋಲ ನೀಡದೆ ಇದ್ದಲ್ಲಿ ನಾನಾ ರೂಪದಲ್ಲಿ ಸಮಸ್ಯೆಗಳು ಕಾಣಿಸಿಕೊಂಡು ಮಹಿಮೆಯನ್ನು ತೋರಿಸಿಕೊಡು ವಷ್ಟು ಪ್ರಭಾವಶಾಲಿ ದೈವವೆಂಬ ನಂಬಿಕೆ ಸ್ಥಳೀಯರು, ಅಧಿಕಾರಿ ವಲಯದಲ್ಲಿದೆ. ವ್ಯಾಪಾರ, ಕಷ್ಟ-ನಷ್ಟ, ದಾಂಪತ್ಯ, ವಿಚ್ಛೇದನ, ಬಂಜೆತನ ಹೀಗೆ ಅನೇಕ ದೋಷ ಹಾಗೂ ಸಮಸ್ಯೆಗಳಿಗೆ ಇಲ್ಲಿನ ದೈವಕ್ಕೆ ಕೋಲ ಸಹಿತ ವಿವಿಧ ರೂಪದ ಹರಕೆಗಳನ್ನು ಒಪ್ಪಿಸುತ್ತಾರೆ.
ಕೋಲದ ಹರಕೆ ಸಂಪ್ರದಾಯ :
ತಾಲೂಕು ಗುಳಿಗ ದೈವಕ್ಕೆ ತಾಲೂಕಾಡಳಿತದಿಂದ ಕೋಲದ ಹರಕೆ ಕೊಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಕಚೇರಿಯ ಎಲ್ಲರೂ ಸೇರಿ ನಾವದನ್ನು ಭಯ, ಭಕ್ತಿಯಿಂದ ಪಾಲಿಸುತ್ತೇವೆ. –ಪುರಂದರ ಹೆಗ್ಡೆ , ತಹಶೀಲ್ದಾರ್, ಕಾರ್ಕಳ
ಪೊಲೀಸ್ ಇಲಾಖೆಯಿಂದ ಕೋಲ ಸಲ್ಲಿಕೆ :
ಠಾಣೆಯ ಶಸ್ತ್ರಾಸ್ತ್ರವೊಂದು ಕಾಣೆ ಆಗಿತ್ತು. ನೇಮದ ವೇಳೆ ದೈವದ ಮುಂದೆ ಅರಿಕೆ ಮಾಡಿಕೊಂಡಾಗ ಬಾವಿಯೊಂದರಲ್ಲಿ ಇರುವ ಕುರಿತು ದೈವ ನುಡಿದಿತ್ತು. ನುಡಿದಂತೆ ಬಾವಿಯಲ್ಲಿ ಶಸ್ತ್ರಾಸ್ತ್ರ ಕಂಡುಬಂದಿತ್ತು. ಅನಂತರದಲ್ಲಿ ಪೊಲೀಸ್ ಇಲಾಖೆಯಿಂದ ಕೋಲ ಸಲ್ಲುತ್ತಿದೆ. –ಭಾವಗುತ್ತು ಸುಕುಮಾರ ಜೈನ್,ಆಡಳಿತ ಮೊಕ್ತೇಸರರು.