Advertisement

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನಿಂದ ಧರ್ಮದ ಪ್ರಸ್ತಾಪ: ಮುತಾಲಿಕ್‌

10:10 AM Jul 27, 2017 | |

ಚಿಕ್ಕಮಗಳೂರು: ಕಳೆದ 50 ವರ್ಷಗಳಿಂದಲೂ ಸಮಾಜ ಹಾಗೂ ಧರ್ಮವನ್ನು ಒಡೆದು ಆಳುತ್ತಿರುವ ಕಾಂಗ್ರೆಸ್‌ ಈಗ ರಾಜಕೀಯ ಲಾಭಕ್ಕಾಗಿ ಲಿಂಗಾಯಿತ ಧರ್ಮದ ವಿಚಾರ ಎತ್ತಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆರೋಪಿಸಿದರು.

Advertisement

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹಿಂದಿನಿಂದಲೂ ಬ್ರಿಟೀಷರಂತೆಯೇ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಈವರೆಗೂ ಅದು ಸಮುದಾಯ, ಧರ್ಮ ಹಾಗೂ ಸಂಘಟನೆಗಳನ್ನು
ಒಡೆದು ಕುತಂತ್ರದ ರಾಜಕಾರಣವನ್ನೇ ಮಾಡುತ್ತಿತ್ತು. ವೀರಶೈವ-ಲಿಂಗಾಯಿತ ಎಂದು ಎರಡು ಹೆಸರುಗಳಿದ್ದರೂ
ಅದು ಒಂದೇ ಆತ್ಮವಿದ್ದಂತೆ. ಈವರೆಗೂ ಇಲ್ಲದ ವಿಚಾರವನ್ನು ಕಾಂಗ್ರೆಸ್‌ ಈಗೇಕೆ ಎತ್ತಿದೆ ಎಂದು ಪ್ರಶ್ನಿಸಿದರು. 

ಸ್ವಾಮೀಜಿಗಳು, ಸಮಾಜದ ಮುಖಂಡರು ಕಾಂಗ್ರೆಸ್‌ ಪಕ್ಷದ ಈ ಕುತಂತ್ರಕ್ಕೆ ಬಲಿಯಾಗಬಾರದು. ಈಗಾಗಲೇ ಹಿಂದೂ ಸಮಾಜ ಒಡೆದು ಛಿದ್ರವಾಗಿದೆ. ಇದನ್ನು ಮತ್ತಷ್ಟು ಛಿದ್ರಗೊಳಿಸಲು ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿಕೊಂಡರು.

ಮತ್ತೂಂದು ಅಯೋಧ್ಯೆ: ದತ್ತಪೀಠ ವಿವಾದವನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು. ಹಿಂದೂಗಳಿಗೆ ದತ್ತಪೀಠ ಬಿಟ್ಟುಕೊಟ್ಟು, ನಾಗೇನಹಳ್ಳಿಯಲ್ಲಿ ಇರುವ ದರ್ಗಾವನ್ನು ಮುಸ್ಲಿಮರಿಗೆ ಬಿಟ್ಟುಕೊಡಬೇಕು. ಈ ಕೆಲಸವನ್ನು ಬೇಗನೆ
ಮಾಡಬೇಕು. ಹಿಂದೂಗಳ ತಾಳ್ಮೆ ಪರೀಕ್ಷಿಸಬಾರದು. ಇಲ್ಲವಾದಲ್ಲಿ ಇದು ಮತ್ತೂಂದು ಅಯೋಧ್ಯೆ ಆಗುವುದರಲ್ಲಿ
ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಸಿದರು.

ರಾಜಕೀಯ ಪಕ್ಷಗಳಿಗೆ ಈ ವಿವಾದ ಬಗೆಹರಿಸುವ ಇಚ್ಚಾಶಕ್ತಿ ಇಲ್ಲ. ಈ ವಿಚಾರದಲ್ಲಿ ಬಿಜೆಪಿಯೂ ಹೊರತಾಗಿಲ್ಲ. 5 ವರ್ಷಗಳ ಕಾಲ ರಾಜ್ಯದಲ್ಲಿ ಅವರು ಆಡಳಿತ ನಡೆಸಿದರು. ಅವರು ಅಧಿಕಾರಕ್ಕೆ ಬಂದಿದ್ದೂ ದತ್ತಪೀಠದ ವಿಚಾರದಿಂದಲೆ. ಆಗ ಅವರೇಕೆ ಸಮಸ್ಯೆ ಬಗೆಹರಿಸಲಿಲ್ಲ ಎಂದು ಪ್ರಶ್ನಿಸಿದ ಮುತಾಲಿಕ್‌, ಈ ವಿವಾದವನ್ನು ಜೀವಂತವಾಗಿಟ್ಟು ಅದರ
ಲಾಭ ಪಡೆಯುವ ಹುನ್ನಾರ ರಾಜಕೀಯ ಪಕ್ಷಗಳದ್ದಾಗಿದೆ. ಈ ವಿವಾದದ ಮೂಲಕ ಹಿಂದೂ ಭಕ್ತರನ್ನು ಹಾಗೂ ಸಂಘಟನೆಗಳ ಮುಖಂಡರ ಬಲಿ ಪಡೆಯಲಾಗುತ್ತಿದೆ ಎಂದು ದೂರಿದರು.

Advertisement

ಯೋಗ್ಯರಲ್ಲ: ರಮಾನಾಥ ರೈ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಒಂದು ಜಿಲ್ಲೆಯನ್ನೇ ಸರಿಯಾಗಿ ನೋಡಿಕೊಳ್ಳಲು ಆಗದ ವ್ಯಕ್ತಿಯಿಂದ ಗೃಹಖಾತೆಯಂತಹ ಪ್ರಮುಖ ಸ್ಥಾನವನ್ನು ನಿಭಾಯಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು. ರಮಾನಾಥ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ಅಶಾಂತಿ ಉಂಟಾಗುವ ಸಾಧ್ಯತೆ ಇದೆ. ಇದರಿಂದ ದುರಂತಗಳು ಹೆಚ್ಚಾಗಲಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next