Advertisement

“ಧರ್ಮ, ಕಲೆ ಸಾಮಾಜಿಕ ಜವಾಬ್ದಾರಿ ಕ್ಷೇತ್ರಗಳು’

12:50 AM Jan 23, 2019 | Harsha Rao |

ಮಂಗಳೂರು: ಧರ್ಮ, ಕಲೆಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಎರಡೂ ಕ್ಷೇತ್ರಗಳು ಸಾಮಾಜಿಕವಾಗಿ ಮಹತ್ವದ ಬದಲಾವಣೆ ಹಾಗೂ ಜವಾಬ್ದಾರಿಯ ಕ್ಷೇತ್ರ ಗಳಾಗಿವೆ ಎಂದು ಹಿರಿಯ ವಿದ್ವಾಂಸ ಪ್ರಸನ್ನ ಹೆಗ್ಗೊàಡು ಅಭಿಪ್ರಾಯಪಟ್ಟರು.

Advertisement

ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ಪ್ರಾಂತೀಯ ಕೆಥೋಲಿಕ್‌ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಂತೂರಿನ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಮಂಗಳವಾರ ಪ್ರದಾನ ಮಾಡಿದ “ಸಂದೇಶ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಸಂದೇಶ ಪ್ರಶಸ್ತಿಯು ತಲಾ 25,000 ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಕಲೆ ಹಾಗೂ ಧರ್ಮದ ನಡುವಿನ ಸಂಬಂಧವನ್ನು ಇತ್ತೀಚಿನ ದಿನಗಳಲ್ಲಿ ತಪ್ಪಾಗಿ ಗ್ರಹಿಸಲಾಗುತ್ತಿದೆ. ಕಲೆಗೂ ಧರ್ಮಕ್ಕೂ ಸಂಬಂಧ ಇಲ್ಲ ಎಂಬ ನೆಲೆಯ ಚಿಂತನೆ ಮೂಡಿದೆ. 

ಆದರೆ ಸಾಮಾಜಿಕ ವ್ಯವಸ್ಥೆ ಉನ್ನತಿಗೇರಿಸುವ ನೆಲೆಯಲ್ಲಿ ಈ ಎರಡೂ ಕ್ಷೇತ್ರ ಸಂಬಂಧ ಬೆಸೆದು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿವೆ. ಧರ್ಮ ಗುರು ಮಾಡುವ ಸಮಾಜ ಸುಧಾರಣೆಯ ಕಾರ್ಯ ಹಾಗೂ ಕಲಾವಿದನ ಸಮಾಜ ಜಾಗೃತಿ ಪರಸ್ಪರ ಸಂಬಂಧ ಬೆಸೆದುಕೊಳ್ಳಬೇಕಿದೆ ಎಂದರು.

ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು ಹಾಗೂ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಾಧ್ಯಕ್ಷರಾದ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಮುಖ್ಯ ಅತಿಥಿಗಳಾಗಿದ್ದರು.

Advertisement

ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ನೆಲ್ಸನ್‌ ಪ್ರಕಾಶ್‌ ದಲ್ಮೇದ ಸ್ವಾಗತಿಸಿದರು. ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿ’ಸೋಜಾ ಪ್ರಸ್ತಾವನೆಗೈದರು. 

ಸಂದೇಶ ಪ್ರತಿಷ್ಠಾನದ ವಿಶ್ವಸ್ತ ರೊಯ್‌ ಕ್ಯಾಸ್ಟಲಿನೋ ಉಪಸ್ಥಿತರಿದ್ದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಂದೇಶ ಪ್ರಶಸ್ತಿ ಪುರಸ್ಕೃತರು
1. ಪ್ರಸನ್ನ ಹೆಗ್ಗೊàಡು- ಸಾಹಿತ್ಯ ಪ್ರಶಸ್ತಿ
2. ಮಂಜಮ್ಮ ಜೋಗತಿ- ಕಲಾ ಪ್ರಶಸ್ತಿ
3. ಬಿ.ಎಂ. ಹನೀಫ್‌ – ಮಾಧ್ಯಮ ಪ್ರಶಸ್ತಿ
4. ಬಿ.ಎಂ. ರೋಹಿಣಿ- ಶಿಕ್ಷಣ ಪ್ರಶಸ್ತಿ
5. ವಂ| ಬೆನ್‌ ಬ್ರಿಟ್ಟೊ  ಪ್ರಭು -ಕೊಂಕಣಿ ಸಂಗೀತ ಪ್ರಶಸ್ತಿ 
6. ವಂ| ಟೆಜಿ ಥಾಮಸ್‌, ನಿರ್ದೇಶಕರು ಸ್ನೇಹಸದನ್‌ ಹಾಗೂ ಭ| ಜಾನ್ಸಿ, ನಿರ್ದೇಶಕರು ಜೀವದಾನ್‌ ಸಂಸ್ಥೆ- ಸಂದೇಶ ವಿಶೇಷ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next