ಆಳಂದ: ತಾಲೂಕಿನ ಕೋರಳ್ಳಿ ಗ್ರಾಮದ ರೈತ ಗಂಗಾಧರ ಗುರುಲಿಂಗಪ್ಪ ವಾರದ ಅವರ ಎತ್ತು ಕಳೆದ ವರ್ಷ ವಿದ್ಯುತ್ ತಗುಲಿ ಮೃತಪಟ್ಟಿದ್ದರಿಂದ ಜೆಸ್ಕಾಂನಿಂದ ಮಂಜೂರಾದ 50 ಸಾವಿರ ರೂ. ಪರಿಹಾರ ಚೆಕ್‌ನ್ನು ಶಾಸಕ ಸುಭಾಷ ಗುತ್ತೇದಾರ ಸಂತ್ರಸ್ತ ರೈತನಿಗೆ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, 50 ಸಾವಿರ ರೂ. ನೀಡಿದ ಪರಿಹಾರ ಹಣವನ್ನು ಕೃಷಿ ಚಟುವಟಿಕೆಗಳಿಗೆ ಬಳಿಸಿಕೊಂಡು ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು. ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ ಮಾತನಾಡಿ, ವಿದ್ಯುತ್ ತಗುಲಿ ಎತ್ತು ಮೃತಪಟ್ಟಿದ್ದರಿಂದ ಸಂತ್ರಸ್ತ ರೈತನಿಗೆ ಪರಿಹಾರ ವಿತರಿಸಲಾಗಿದೆ ಎಂದರಲ್ಲದೇ, ತಾಲೂಕಿನಲ್ಲಿ ಖಾಲಿ ಇರುವ ಜೆಇ ಹುದ್ದೆಗಳನ್ನು ತುಂಬುವಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಲೈನ್‌ಮ್ಯಾನ್ ರಜನೀಶ ಜಂಗಲೆ, ಮುಖಂಡ ಪ್ರಭುಲಿಂಗ ವಾರದ, ಈರಣ್ಣಾ ಬೀದಿ, ಸಚಿನ್ ನರೋಣೆ ಇತರರು ಇದ್ದರು.