Advertisement

ಪರಿಹಾರ ವಿತರಣೆ ವಿಳಂಬ-ಅಧಿಕಾರಿ ಅಮಾನತು

01:12 PM Jun 23, 2022 | Team Udayavani |

ಅಫಜಲಪುರ: ಜಿಲ್ಲಾಧಿಕಾರಿ ಯಶವಂತ ಗುರುಕರ್‌ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಆಗಮಿಸಿದಾಗ ಗ್ರಾ.ಪಂ ನಿವೃತ್ತ ನೌಕರರು ಬಾಕಿ ವೇತನ ಪಾವತಿ ಮಾಡಿಸಿ, ಇಲ್ಲವೇ ವಿಷ ಕೊಡಿ ಎಂದು ವಿಷದ ಬಾಟಲಿಯೊಂದಿಗೆ ಜಿಲ್ಲಾಧಿಕಾರಿಗಳ ಬಳಿ ಬಂದಾಗ “ವಿಷ ತೋರಿಸಿ ಅಂಜಿಕೆ ಹಾಕುವುದಲ್ಲ, ಸಮಸ್ಯೆ ಹೇಳಿ’ ಎಂದು ಸಿಡಿಮಿಡಿಗೊಂಡರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿ ಅಹವಾಲು ಸ್ವೀಕರಿಸುತ್ತಿರುವಾಗ ಈ ಪ್ರಸಂಗ ನಡೆಯಿತು. ಗೌರ (ಬಿ) ಗ್ರಾಪಂ ನಿವೃತ್ತ ನೌಕರರು ಜಿಲ್ಲಾಧಿಕಾರಿಗಳ ಬಳಿ ಹೂವಿನ ಬುಟ್ಟಿಯಲ್ಲಿ 1500ರೂ. ಹಾಗೂ ವಿಷದ ಬಾಟಲಿಯೊಂದಿಗೆ ಬಂದು ತಮ್ಮ ಅಳಲನ್ನು ತೋಡಿಕೊಂಡರು. ನಾವು ವೇತನಕ್ಕಾಗಿ ಸತ್ಯಾಗ್ರಹ ಮಾಡಿದರೂ ಪ್ರಯೋಜನವಾಗಿಲ್ಲ, ನಾವು ಮಾಡಿದ ಕೆಲಸಕ್ಕೆ ವೇತನ ನೀಡಲು ಅಧಿಕಾರಿಗಳು ಹಿಂದೇಟು ಹಾಕುವುದೇಕೆ? ಹೀಗಾಗಿ ನೀವೆ ನಮಗೆ ವಿಷ ನೀಡಿ ಎಂದಾಗ ಜಿಲ್ಲಾಧಿಕಾರಿಗಳು “ಮುಖಂಡರು ಎನಿಸಿಕೊಂಡವರನ್ನು ಕರೆತಂದು, ವಿಷ ತೋರಿಸಿ ಹೆದರಿಸಬೇಡಿ. ನಿಮ್ಮ ಸಮಸ್ಯೆ ಹೇಳಿದ್ದೀರಿ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರಲ್ಲದೇ ಪಿಡಿಒ ಅವರನ್ನು ಕರೆದು ತರಾಟೆಗೆ ತೆಗೆದುಕೊಂಡು ಸಂಜೆ ವೇಳೆಗೆ ಇವರ ವೇತನ ಪಾವತಿಯಾಗಬೇಕು ಎಂದು ತಾಕೀತು ಮಾಡಿದರು.

ಅಧಿಕಾರಿ ಅಮಾನತು: ಮೇ ತಿಂಗಳಲ್ಲಿ ಬಂದ ಅಕಾಲಿಕ ಮಳೆಯಿಂದ ತಾಲೂಕಿನ ಬಡದಾಳ, ರೇವೂರ ಗ್ರಾಮದ ಬೆಳೆ ಹಾನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 4.50ಲಕ್ಷ ರೂ. ಪರಿಹಾರ ಬಂದು 45 ದಿನವಾದರೂ ರೈತರಿಗೆ ಪರಿಹಾರ ನೀಡದೇ ಕಾಲಹರಣ ಮಾಡಿದ ಅಧಿಕಾರಿ ಸೊಹೇಲ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ತಹಶೀಲ್ದಾರ್‌ ಸಂಜೀವಕುಮಾರ ದಾಸರ್‌, ತಾಪಂ ಇಒ ರಮೇಶ ಸುಲ್ಪಿ, ಅಧಿಕಾರಿಗಳಾದ ಚೇತನ ಗುರಿಕಾರ, ನಾಗರಾಜ ಕ. ಸಂಜುಕುಮಾರ ಚವ್ಹಾಣ, ಕೆ. ಬಾಲಕೃಷ್ಣ, ಮೀನಾಕ್ಷಮ್ಮ ಪಾಟೀಲ, ಅಶೋಕ ಬಬಲಾದ, ಸೈಯದ್‌ ಇಸಾ, ಎಸ್‌.ಎಚ್‌ ಗಡಗಿಮನಿ, ಸುರೇಂದ್ರನಾಥ ಹಾಗೂ ಇನ್ನಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next