Advertisement
ಭಾರತೀಯ ಟೆಲಿಕಾಂ ಉದ್ಯಮವನ್ನು ಉಳಿಸಿಕೊಳುವ ಸಲುವಾಗಿ ಈ ಟ್ಯಾರಿಫ್ ಪ್ಲ್ಯಾನ್ ಹೆಚ್ಚಿಸುವುದು ಅನಿವಾರ್ಯ. ಹೀಗಾಗಿ ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಕಂಪೆನಿ ಮುಂದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಿಲಯನ್ಸ್ ತಿಳಿಸಿದೆ.
Related Articles
Advertisement
ಭಾರತದಲ್ಲಿ ಮೊಬೈಲ್ ಡೇಟಾ ಶುಲ್ಕಗಳು ವಿಶ್ವದ ಅತ್ಯಂತ ಕಡಿಮೆ ದರದಲ್ಲಿವೆ. ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಡೇಟಾ ಸೇವೆಗಳ ಅಗತ್ಯಕ್ಕೆ ಅನುಸಾರವಾಗಿ ಚಂದಾದಾರರಿಗೆ ಕಡಿಮೆ ಬೆಲೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಆದರೆ ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ಏರ್ ಟೆಲ್, ವೊಡಾಫೋನ್–ಐಡಿಯಾ ಮತ್ತು ಇತರ ಟೆಲಿಕಾಂ ಆಪರೇಟ್ ಕಂಪೆನಿಗಳು ಸರ್ಕಾರಕ್ಕೆ ಹಣವನ್ನು ಪಾವತಿಸಬೇಕಾಗಿದೆ.
ಭಾರತಿ ಏರ್‌ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.
ಟೆಲಿಕಾಂ ಕಂಪೆನಿಗಳ ವಾರ್ಷಿಕ ಹೊಂದಾಣಿಕೆಯ ಒಟ್ಟು ಆದಾಯವನ್ನು (ಎಜಿಆರ್) ಲೆಕ್ಕಾಚಾರ ಮಾಡುವಲ್ಲಿ ದೂರಸಂಪರ್ಕೇತರ ವ್ಯವಹಾರಗಳಿಂದ ಬರುವ ಆದಾಯವನ್ನು ಸೇರಿಸುವ ಕುರಿತು ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎತ್ತಿಹಿಡಿದಿದೆ. ಅದರಲ್ಲಿ ಒಂದು ಭಾಗವನ್ನು ಬೊಕ್ಕಸಕ್ಕೆ ಪರವಾನಗಿ ಮತ್ತು ಸ್ಪೆಕ್ಟ್ರಮ್ ಶುಲ್ಕವಾಗಿ ಪಾವತಿಸಲಾಗುತ್ತದೆ.