Advertisement

OPPO A15 ಈಗ ಮತ್ತಷ್ಟು ಅಗ್ಗ : ಜಿಯೋ ಬಳಕೆದಾರರಿಗೆ ಸಿಗುತ್ತಿದೆ ಬಾರಿ ರಿಯಾಯಿತಿ..!

01:28 PM Aug 20, 2021 | Team Udayavani |

ನವ ದೆಹಲಿ : ಭಾರತದಲ್ಲಿ ಒಪ್ಪೋ ತನ್ನ ಎ15 (OPPO A15) ನನ್ನು ಅಕ್ಟೋಬರ್ 2020 ರಲ್ಲಿ ಬಿಡುಗಡೆಗೊಳಿಸಿತ್ತು. ಕೆಲವೇ ದಿನಗಳಲ್ಲಿ,ಒಪ್ಪೋ ಎ15 ಎಸ್ (OPPO A15s) ನನ್ನು ಡಿಸೆಂಬರ್‌ ನಲ್ಲಿ ಬಿಡುಗಡೆ ಮಾಡಿತ್ತು. ನಂತರ ಫೋನಿನ ಬೇಡಿಕೆ ಕಡಿಮೆ ಇದ್ದ ಕಾರಣದಿಂದ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಫೋನಿನ ಬೆಲೆಯನ್ನು ಕಡಿತಗೊಳಿಸಿತ್ತು.

Advertisement

ಜುಲೈ  ನಲ್ಲಿ ಸಂಸ್ಥೆ ಬೇಡಿಕೆ ಹೆಚ್ಚಳವಾದ ಕಾರಣ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಮಾಡಿತ್ತು. ಆದರೇ, ಮತ್ತೆ ಈಗ ರಿಯಾಯಿತಿ ದರದಲ್ಲಿ ಸಂಸ್ಥೆ ಗ್ರಾಹಕರಿಗೆ ನೀಡುತ್ತಿದೆ.

ಹೌದು, ಒಪ್ಪೋ ಭಾರತದಲ್ಲಿ ಟೆಲಿಕಾಂ ನೆಟ್ ವಕರ್ ನ ದೈತ್ಯ ಜಿಯೋ ದೊಂದಿಗೆ ಪಾಲುದಾರಿಕೆ ಹೊಂದಿದೆ. 10 ತಿಂಗಳ ಹಳೆಯ Oppo A15 ನ 3GB + 32GB ವೇರಿಯಂಟ್ ನ ಸ್ಮಾರ್ಟ್ ಫೋನ್ ನನ್ನು ಭಾರಿ ರೀಯಾಯಿತಿದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ.

ಇದನ್ನೂ ಓದಿ : ವಿದ್ಯುತ್ ಕೂಡಾ ಇಲ್ಲದ ಊರಿನಿಂದ ಬಂದ ನನಗೆ ಬಿಜೆಪಿ ಬಹಳಷ್ಟು ಕೊಟ್ಟಿದೆ: ಶೋಭಾ ಕರಂದ್ಲಾಜೆ

Oppo A15 ನ 3GB + 32GB ರೂಪಾಂತರದ ಬೆಲೆ 10,990 ರೂ. ಆದರೆ  ಸುಮಾರು 999 ರೂ ರಿಯಾಯಿತಿ ದರದೊಂದಿಗೆ  ರಿಯಾಯಿತಿಯೊಂದಿಗೆ 9,991 ರೂ.ಗೆ ಗ್ರಾಹಕರ ಪಾಲಿಗೆ ಒದಗುತ್ತಿದೆ.

Advertisement

ಇನ್ನು, ಬಳಕೆದಾರರು 7000 ರೂ. ಮೌಲ್ಯದ ಜಿಯೋ ರೀಚಾರ್ಜ್ ಯೋಜನೆಗಳನ್ನು ಮತ್ತು ನೋ ಕಾಸ್ಟ್ ಇಎಂಐ ಪ್ರಯೋಜನಗಳನ್ನು ಸಹ ಪಡೆಯಬಹುದು.

OPPO A15 ಪ್ಲಾಸ್ಟಿಕ್ ಬಿಲ್ಡ್ ಮತ್ತು 6.52-ಇಂಚಿನ HD+ LCD ಪ್ಯಾನೆಲ್ ನನ್ನು ಒಳಗೊಂಡಿದ್ದು, ಮೀಡಿಯಾ ಟೆಕ್ ಹೆಲಿಯೋ P35 SoC ಜೊತೆಗೆ LPDDR4x RAM ನೊಂದಿಗೆ ಚಾಲಿತವಾಗಿದೆ.

ಫೋನ್ 13MP ಪ್ರೈಮರಿ ಸೆನ್ಸಾರ್, 2MP ಮ್ಯಾಕ್ರೋ ಶೂಟರ್ ಮತ್ತು 2MP ಡೆಪ್ತ್ ಸೆನ್ಸಾರ್ ನನ್ನು ಹೊಂದಿರುವ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನಿಂದ ಆಕರ್ಷಕವಾಗಿದೆ. ಇನ್ನು, 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಫಿಂಗರ್‌ ಪ್ರಿಂಟ್ ಸೆನ್ಸರ್, ಡ್ಯುಯಲ್-ಸಿಮ್, 4 ಜಿ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಜಿಎನ್‌ಎಸ್‌ಎಸ್, 3.5 ಎಂಎಂ ಹೆಡ್‌ ಫೋನ್ ಜ್ಯಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಮೈಕ್ರೋ ಯುಎಸ್‌ ಬಿ ಪೋರ್ಟ್ ಸೇರಿವೆ. 4,230mAh ಬ್ಯಾಟರಿಯನ್ನು ಹೊಂದಿದೆ.

ಇದನ್ನೂ ಓದಿ : ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ: ಜನತೆಯಲ್ಲಿ ಮನವಿ ಮಾಡಿದ ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next