Advertisement

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

09:02 PM Jan 19, 2022 | Team Udayavani |

ನವದೆಹಲಿ: ರಿಲಯನ್ಸ್‌ ಜಿಯೋ 2021ರ ಮಾರ್ಚ್‌ ವರೆಗೆ ಖರೀದಿಸಿದ ಎಲ್ಲಾ ತರಂಗಾಂತರಗಳಿಗೆ 30,791 ಕೋಟಿ ರೂ. ಮೊತ್ತವನ್ನು ಕೇಂದ್ರ ದೂರಸಂಪರ್ಕ ಸಚಿವಾಲಯಕ್ಕೆ ಪಾವತಿ ಮಾಡಿರುವುದಾಗಿ ಬುಧವಾರ ಪ್ರಕಟಿಸಿದೆ.

Advertisement

ಈ ಮೊತ್ತದಲ್ಲಿ ಪಾವತಿ ಮಾಡಬೇಕಾಗಿರುವ ಬಡ್ಡಿಯೂ ಸೇರಿದೆ ಎಂದು ಕಂಪನಿ ಹೇಳಿಕೊಂಡಿದೆ. 2014, 2015 ಮತ್ತು 2016ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ತರಂಗಾತರ ಖರೀದಿಸಲಾಗಿತ್ತು.

ಮೂರು ಹರಾಜು ಪ್ರಕ್ರಿಯೆಗಳಲ್ಲಿ ರಿಲಯನ್ಸ್‌ ಜಿಯೋ 585.3 ಮೆಗಾ ಹರ್ಟ್ಸ್ ಸ್ಪೆಕ್ಟ್ರಂಗಳನ್ನು ಖರೀದಿ ಮಾಡಿತ್ತು.

ಇದನ್ನೂ ಓದಿ:ಮಂಗಳೂರು : ಶಾಲೆಗಳಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದರೆ ಭೌತಿಕ ತರಗತಿ ರದ್ದು ; ಡಿ.ಸಿ

ಇಂಥ ಕ್ರಮದ ಮೂಲಕ ಕೇಂದ್ರ ಸರ್ಕಾರ ದೂರಸಂಪರ್ಕ ಕಂಪನಿಗಳಿಗೆ ನೀಡಿದ ನಾಲ್ಕು ವರ್ಷ ಸ್ಪೆಕ್ಟ್ರಂ ಮೊತ್ತ ಪಾವತಿ ಅವಧಿಯನ್ನು ಬಳಕೆ ಮಾಡದೇ ಇರಲು ಜಿಯೋ ನಿರ್ಧರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next