Advertisement

ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ ಹಂಪಿ ವಿಶೇಷ ವಿನ್ಯಾಸಗಳ ಹೊಸ ಆಭರಣ ಬಿಡುಗಡೆ

09:07 AM May 03, 2019 | Nagendra Trasi |

ಮುಂಬೈ:  ಭಾರತದ ಅತ್ಯಂತ ಪ್ರಸಿದ್ಧ ಪರಂಪರೆ ತಾಣಗಳಿಂದ ಸ್ಫೂರ್ತಿ ಪಡೆದ ರಿಲಯನ್ಸ್ ಜ್ಯುವೆಲ್ಸ್, ಹೊಸದಾಗಿ ‘ಅಪೂರ್ವಂ’ ಆಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಅಪೂರ್ವಂ ಎಂಬುದು ಸಂಕೀರ್ಣವಾಗಿ ವಿನ್ಯಾಸ ಹೊಂದಿರುವ ದೇವಾಲಯ ಮಾದರಿಯ ಚಿನ್ನದ ಆಭರಣಗಳ ಒಂದು ಸುಂದರವಾದ ಸಂಗ್ರಹವಾಗಿದ್ದು, ಇದು ಉನ್ನತ ದರ್ಜೆಯ ಕಲೆಗಾರಿಕೆ ಮತ್ತು ಭಾರತೀಯ ಪರಂಪರೆಯನ್ನು ಪ್ರತಿನಿಧಿಸುತ್ತಿದೆ.

Advertisement

ಹೊಚ್ಚಹೊಸ ಅಪೂರ್ವಂ ಸಂಗ್ರಹವು ದಕ್ಷಿಣ ಮತ್ತು ಪಶ್ಚಿಮ ಭಾರತದ ಕೆಲವು ಪ್ರಮುಖ ಮತ್ತು ಪ್ರಸಿದ್ಧ ಸ್ಮಾರಕಗಳಿಂದ ಸ್ಫೂರ್ತಿ ಪಡೆದುಕೊಂಡಿದೆ. ಅಪೂರ್ವಂ ಸಂಗ್ರಹದ ಪ್ರತಿ ಆಭರಣವು ವಿವರ ಮತ್ತು ಸೂಕ್ಷ್ಮವಾದ ಕರಕುಶಲತೆಯಿಂದ ತಯಾರಾಗಿದ್ದು, ವಿಶೇಷವಾಗಿ ಮದುವೆಗಳು, ಕುಟುಂಬದ ಸಂಭ್ರಮ ಕೂಟಗಳು ಮತ್ತು ಉತ್ಸವಗಳಲ್ಲಿ ಧರಿಸಲು, ವಿಶಿಷ್ಟ ಮತ್ತು ಪರಿಪೂರ್ಣವಾದ ಅಲಂಕಾರಕ್ಕೆ ಸೂಕ್ತವಾಗಿರಲಿದೆ.

ಈ ಸಂಗ್ರಹವು ರಿಲಯನ್ಸ್ ಜ್ಯುವೆಲ್ಸ್ ಶೋ ರೂಮ್‌ಗಳಲ್ಲಿ ಲಭ್ಯವಿದೆ. ಸಂಗ್ರಹಣೆಯನ್ನು ಇನ್ನಷ್ಟು ರೋಮಾಂಚನಗೊಳಿಸುವ ಸಲುವಾಗಿ ಅಕ್ಷಯ ತೃತಿಯಾ ಅಂಗವಾಗಿ ವಿಶೇಷ ಆಫರ್ ಅನ್ನು ಸಹ ನೀಡಲಾಗುತ್ತಿದೆ. ಇಂದರಿಂದಾಗಿ ಗ್ರಾಹಕರು ಮೇ 7, 2019 ರವರೆಗೆ ಚಿನ್ನದ ಆಭರಣಗಳ ಮೇಕಿಂಗ್ ಮೇಲೆ 25 ಪ್ರತಿಶತ ಕಡಿತವನ್ನು ಹಾಗೂ ವಜ್ರದ ಆಭರಣಗಳ ಮೇಲೆ 25 ಪ್ರತಿಶತದಷ್ಟು ಕಡಿತವನ್ನು ಪಡೆಯಬಹುದಾಗಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯ ಸ್ಫೂರ್ತಿಯನ್ನು ಪಡೆದು ಈ ಅಪೂರ್ವಂ ದೇವಸ್ಥಾನದ ಸಂಗ್ರಹವನ್ನು ರೂಪಿಸಲಾಗಿದೆ. ಅಪೂರ್ವಂ ಆಭರಣಗಳಲ್ಲಿ ವಿಜಯ ವಿಠಲ ದೇವಾಲಯದ ಪ್ರತಿಬಿಂಬಗಳನ್ನು ಮತ್ತು ಪ್ರವೇಶ ಗೋಡೆಗಳಿರುವ ಸಂಕೀರ್ಣ ಕೆತ್ತನೆಗಳನ್ನು ಸೇರಿದಂತೆ ಹಂಪಿಯ ಪ್ರಸಿದ್ಧ ಕೆತ್ತನೆಗಳ ವಿನ್ಯಾಸವನ್ನು ಕಾಣಬಹುದಾಗಿದೆ. ಲೋಟಸ್ ಮಹಲಿನ ಸುಂದರವಾದ ಕಮಾನುಗಳು, ಎಲಿಫೆಂಟ್  ಹನ್ನೊಂದು ಗುಮ್ಮಟಗಳು ಮತ್ತು ಪವಿತ್ರ ನೀರಿನ ತೊಟ್ಟಿಯಾದ ಪುಷ್ಕಾರ ರಚನೆಯು ಈ ಆಭರಣ ಸಂಗ್ರಹಣೆಯಲ್ಲಿರುವ ವಿನ್ಯಾಸಗಳಿಗೆ ಸ್ಫೂರ್ತಿಯಾಗಿವೆ.

ಈ ಅಪೂರ್ವಂ ಸಂಗ್ರಹದಲ್ಲಿ ಹಂಪಿಗೆ ಹೊರತಾಗಿ ಪ್ರಸಿದ್ಧಿಯನ್ನು ಪಡೆದಿರುವ ಸ್ಮಾರಕಗಳಾದ ಬೇಲೂರು ಚೆನ್ನ ಕೇಶವ ದೇವಾಲಯದ ತಳಹದಿಯ ನಾಲ್ಕು ಹಂತಗಳು ಮತ್ತು ಆನೆಗಳು, ಕುದುರೆಗಳು ಮತ್ತು ಅಲಂಕೃತ ಚಿತ್ರಣಗಳನ್ನು ಕಾಣಬಹುದಾಗಿದೆ. ಭುವನೇಶ್ವರಿ ಗುಮ್ಮಟದ ಗ್ಲಿಂಪ್ಸಸ್, ದೇವಸ್ಥಾನದಲ್ಲಿರುವ ಒಳಾಂಗಣದ ಛಾವಣಿಯನ್ನು ಮತ್ತು ತಲೆಕೆಳಗಾದ ಕಮಲದ ವಿನ್ಯಾಸವನ್ನು ಸಹ ಸಂಗ್ರಹದಲ್ಲಿ ಕಾಣಬಹುದು. ದೇವಾಲಯದ ದ್ವಾರದಲ್ಲಿ ಕೆತ್ತಿರುವ ದಶಾವತಂ ಮತ್ತು ದೇವಾಲಯದೊಳಗೆ ಇರುವ ನೃರ್ತಕಿಯರ ಕೆತ್ತನೆಗಳನ್ನು ಈ ಸಂಗ್ರಹದಲ್ಲಿ ಕಾಣಬಹುದಾಗಿದೆ.

Advertisement

“ರಿಲಯನ್ಸ್ ಜ್ಯುವೆಲ್ಸ್ ಯಾವಾಗಲೂ ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ಕೊಡುಗೆ ನೀಡಲು ಪ್ರಯತ್ನಿಸುತ್ತಿದೆ ಮತ್ತು ಈ ಮಂಗಳಕರ ಅಕ್ಷಯ ತೃತಿಯ ಸಂದರ್ಭದಲ್ಲಿ ಸುಂದರವಾಗಿ ರಚಿಸಲಾದ ದೇವಸ್ಥಾನ ಆಭರಣ ಸಂಗ್ರಹವಾದ ಅಪೂರ್ವಂವನ್ನು ಪರಿಚಿಸಲಾಗಿದೆ. ಈ ಸಂಗ್ರಹಣೆಯಲ್ಲಿ ಪ್ರತಿಯೊಂದು ತುಣುಕುಗಳು ಸಂಕೀರ್ಣವಾದ ವಿನ್ಯಾಸ ಮತ್ತು ಕಲೆಗಾರಿಕೆಯ ಮೇರುಕೃತಿಯಾಗಿದೆ ಎಂದು ನಾವು ನಂಬುತ್ತೇವೆ, ಇದು ನಮ್ಮ ಗ್ರಾಹಕರನ್ನು ಮೆಚ್ಚಿಸುತ್ತದೆ” ಎಂದು ರಿಲಯನ್ಸ್ ಜ್ಯುವೆಲ್ಸ್ ವಕ್ತರರು ತಿಳಿಸಿದ್ದಾರೆ.

ಹಲವು ವರ್ಷಗಳಿದ ರಿಲಯನ್ಸ್ ಜ್ಯುವೆಲ್ಸ್ ಪ್ರತಿದಿನ ಧರಿಸುವ ಆಭರಣಗಳಿಂದ ವಿಶೇಷ ಸಂದರ್ಭಗಳಲ್ಲಿ ಧರಿಸುವ ವಿವಿಧ ಮಾದರಿಯ ವಿವಿಧ ಶ್ರೇಣಿಯನ್ನು ಗ್ರಾಹಕರಿಗೆ ಪರಿಚಯಿಸುತ್ತಾ ಬಂದಿದೆ. ಗ್ರಾಹಕರ ಮೇಲೆ ಪ್ರಭಾವ ಬೀರುವ ಮತ್ತು ವಿಶಿಷ್ಟ ಆಭರಣಗಳ ಮೇಲೆ ಗರಿಷ್ಠ ಗಮನ ಹರಿಸಿರುವ ರಿಲಯನ್ಸ್ ಜ್ಯುವೆಲ್ಸ್‌ ಶೀಘ್ರವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಮುಂದುವರೆಸಿದೆ. ರಿಲಯನ್ಸ್ ಜ್ಯುವೆಲ್ಸ್‌ಗಳು ಪ್ರಸ್ತುತ ಭಾರತದಲ್ಲಿ 66 ಕ್ಕೂ ಹೆಚ್ಚಿನ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ವತಂತ್ರ ಮತ್ತು ಅಂಗಡಿ ಅಂಗಡಿ (ಸಿಐಎಸ್) ಮಾದರಿಗಳಲ್ಲಿ ಲಭ್ಯವಿದೆ. ರಿಲಯನ್ಸ್ ಜ್ಯುವೆಲ್ ಗಳು ಗ್ರಾಹಕರಿಗೆ ಬೆರಗುಗೊಳಿಸುವ ವಾತಾವರಣ, ಆಕರ್ಷಕ ಪ್ರದರ್ಶನಗಳು, ಸಮೃದ್ಧ ವಿನ್ಯಾಸ ಮತ್ತು ಉತ್ತಮ ಗ್ರಾಹಕರ ನೆರವನ್ನು ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next