ಹೊಸದಿಲ್ಲಿ: ದೇಶದಲ್ಲಿ 2003ರಿಂದ ಕಾರ್ಯಾಚರಿಸುತ್ತಿರುವ ಜರ್ಮನಿ ಮೂಲದ ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ಇಂಡಿಯಾ ಪ್ರೈ. ಲಿ.ಕಂಪೆನಿಯನ್ನು ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೈಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಖರೀದಿಸಿದೆ.
ಒಟ್ಟು 2,850 ಕೋಟಿ ರೂ. ಮೊತ್ತಕ್ಕೆಆರ್‌ಆರ್‌ವಿಎಲ್ ಈ ವಹಿವಾಟು ನಡೆಸಿದೆ. ಜರ್ಮನಿ ಮೂಲದ ಕಂಪೆನಿಯ ಪೂರ್ಣ ಪ್ರಮಾಣದ ಷೇರುಗಳನ್ನು ದೇಶೀಯ ಕಂಪೆನಿ ಖರೀದಿಸಿದೆ.
ಬೆಂಗಳೂರು ಸೇರಿದಂತೆ 31 ಸ್ಥಳಗಳಲ್ಲಿ ಆಹಾರ ವಸ್ತುಗಳನ್ನು ಮಾರುವ ಮಳಿಗೆಗಳನ್ನು ಮೆಟ್ರೊ ಹೊಂದಿದ್ದು, 3,500 ಮಂದಿ ಉದ್ಯೋಗಿಗಳನ್ನು ಹೊಂದಿದೆ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಕಂಪೆನಿಗಳಿಗೆ ಹೂಡಿಕೆ ಅವಕಾಶ ಲಭಿಸಿದ ಬಳಿಕ ದೇಶಕ್ಕೆ ಕಾಲಿರಿಸಿದ ಮೊದಲ ಕಂಪೆನಿ ಇದಾಗಿತ್ತು.