Advertisement

ಆರ್‌ಟಿ-ಪಿಸಿಆರ್‌ ಪರೀಕ್ಷೆ ಬಳಿಕವೇ ಬಿಡುಗಡೆ

01:55 AM May 10, 2020 | Sriram |

ಕೋವಿಡ್-19 ಸೋಂಕಿನ ಚಿಕಿತ್ಸೆ ಪಡೆದವರು ಒಂದೊಮ್ಮೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಇಲ್ಲವೇ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಅಂಥವರನ್ನು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಿ ವರದಿ ನೆಗೆಟಿವ್‌ ಬಂದರೆ ಮಾತ್ರ ಡಿಸ್ಚಾರ್ಜ್ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Advertisement

ಸೋಂಕುಪೀಡಿತರ ಡಿಸ್ಚಾರ್ಜ್ ನೀತಿಯನ್ನು ಪರಿಷ್ಕರಿಸಿರುವ ಸಚಿವಾಲಯ, ಚಿಕಿತ್ಸೆ ಬಳಿಕ ಸೋಂಕಿನ ಲಕ್ಷಣ ಹೊಂದಿರದ, ಅಲ್ಪ ಪ್ರಮಾಣದಲ್ಲಿ ಪೂರ್ವ ಲಕ್ಷಣಗಳನ್ನು ಹೊಂದಿರುವ, ಸೌಮ್ಯ ಮತ್ತು ಅತೀ ಸೌಮ್ಯ ಪ್ರಕರಣ ಎಂದು ಪರಿಗಣಿಸಲ್ಪಟ್ಟವರನ್ನುಡಿಸ್ಚಾರ್ಜ್ ವೇಳೆ ಪರೀಕ್ಷೆಗೆ ಒಳಪಡಿಸುವ ಅಗತ್ಯ ಇಲ್ಲ ಎಂದಿದೆ. ಇದುವರೆಗೆ ಇದ್ದ ನಿಯಮದ ಪ್ರಕಾರ ಕ್ವಾರಂಟೈನ್‌ಗೆ ಒಳಗಾದವರನ್ನು 14ನೇ ದಿನ ಪರೀಕ್ಷೆಗೆ ಒಳಪಡಿಸಿ, ಫಲಿತಾಂಶ ನೆಗೆಟಿವ್‌ ಬಂದರೂ 24 ತಾಸುಗಳಲ್ಲಿ ಮತ್ತೂಮ್ಮೆ ಪರೀಕ್ಷೆ ನಡೆಸಲಾಗುತ್ತಿತ್ತು.

ಮೂರು ಹಂತದ ಕೋವಿಡ್‌ ಪರೀಕ್ಷೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಮತ್ತು ವೈದ್ಯ ಕೀಯ ತೀವ್ರತೆ ಆಧರಿಸಿದ ಸೋಂಕುಪೀಡಿತರ ವರ್ಗೀಕರಣಕ್ಕೆ ಅನುಗುಣವಾಗಿ ಡಿಸ್ಚಾರ್ಜ್ ನೀತಿಯನ್ನು ಪರಿಷ್ಕರಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಔಷಧದ ನೆರವಿಲ್ಲದೆಯೇ ಮೂರು ದಿನಗಳ ಅವಧಿಯಲ್ಲಿ ಜ್ವರ ಕಡಿಮೆಯಾದರೆ ಅಥವಾ ಮರುಕಳಿಸದಿದ್ದರೆ ಮತ್ತು ಆಮ್ಲಜನಕದ ನೆರ ವಿಲ್ಲದೆ ರೋಗಿಯ ಉಸಿರಾಟವು ನಾಲ್ಕು ದಿನಗಳ ವರೆಗೆ ಶೇ.95ಕ್ಕಿಂತಲೂ ಉತ್ತಮವಾಗಿದ್ದರೆ ಅಂತಹವರನ್ನು 10 ದಿನಗಳ ಅನಂತರ ಪರೀಕ್ಷೆ ಇಲ್ಲದೆಯೇ ಮನೆಗೆ ಕಳುಹಿಸಬಹುದು. ಆದರೆ 7 ದಿನಗಳ ವರೆಗೆ ಮನೆಯಲ್ಲೇ ಐಸೊಲೇಶನ್‌ಗೆ ಒಳಪಡುವಂತೆ ರೋಗಿಗೆ ಸಲಹೆ ನೀಡಬೇಕು. ಜ್ವರ ಹೆಚ್ಚಿರುವ, ಆಮ್ಲಜನಕದ ನೆರವಿಲ್ಲದೆ ಉಸಿರಾಡಲು ತೊಂದರೆ ಅನುಭವಿಸುವ ರೋಗಿ ಗಳು ಪೂರ್ಣ ಗುಣಮುಖರಾದ ಬಳಿಕವೇ ಡಿಸ್ಚಾರ್ಜ್ ಮಾಡಬೇಕು ಎಂದು ಪರಿಷ್ಕೃತ ನೀತಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next