Advertisement

ಕೊರೊನಾ ನಿಯಂತ್ರಿಸಲು ಕೈಪಿಡಿ ಬಿಡುಗಡೆ

08:51 PM Mar 18, 2020 | Lakshmi GovindaRaj |

ಮೈಸೂರು: ಕೊರೊನಾಗೆ ಹೆದರುವ ಅಗತ್ಯವಿಲ್ಲ, ಎಲ್ಲರೂ ಮುಂಜಾಗ್ರತೆ ಕ್ರಮ ಅನುಸರಿಸಿದರೆ ಈ ಕಾಯಿಲೆಯಿಂದ ದೂರವಿರಬಹುದು ಎಂದು ಶಾಸಕ ಎಸ್‌.ಎ. ರಾಮದಾಸ್‌ ಹೇಳಿದರು. ನಗರದ ಅಗ್ರಹಾರದಲ್ಲಿರುವ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಕರೊನಾ ತಡೆಗಟ್ಟುವ ಬಗ್ಗೆ ಪಕ್ಷದ ವತಿಯಿಂದ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement

ಕೊರೊನಾ ಅಂತಹ ದೊಡ್ಡ ಕಾಯಿಲೆಯೇನಲ್ಲ. ಕೊರೊನಾಗಿಂತ ದೊಡ್ಡ ದೊಡ್ಡ ರೋಗಗಳನ್ನು ಮನುಕುಲ ನೋಡಿದೆ. ಎಬೋಲಾ, ಹಕ್ಕಿಜ್ವರದಂತಹ ಕಾಯಿಲೆಗಳು ಕೊರೊನಾಗಿಂತಲೂ ಅಪಾಯಕಾರಿಯಾದುದು. ಆದ್ದರಿಂದ ಯಾರೂ ಈ ಕಾಯಿಲೆ ಬಗ್ಗೆ ಹೆಚ್ಚು ಆತಂಕಪಡುವ ಅವಶ್ಯಕತೆಯಿಲ್ಲ ಎಂದರು.

ಕೊರೊನಾದಿಂದ ಶೇ.2ರಷ್ಟು ಜನರು ಮಾತ್ರ ಮೃತಪಟ್ಟಿದ್ದಾರೆ. ನಾವು ಮನಸ್ಸು ಮಾಡಿದರೆ ಕೊರೊನಾವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ನಮ್ಮ ಜೀವನಶೈಲಿಯನ್ನು ಹೇಗೆ ಬದಲಾಯಿಸಿಕೊಂಡರೆ ಕೊರೊನಾ ತಡೆಗಟ್ಟಲು ಸಾಧ್ಯ ಎಂಬುದನ್ನು ನಾವು ಬೂತ್‌ ಮಟ್ಟದಲ್ಲಿ ಜನರಿಗೆ ತಿಳಿಸುತ್ತೇವೆ.

ಇಂದಿನಿಂದ ಒಂದು ವಾರ ಸಪ್ತಾಹ ಮಾಡಿ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಪ್ರಾಣಾಯಾಮ, ಯೋಗ, ಅಗ್ನಿಹೋತ್ರದ ಮಹತ್ವ ತಿಳಿಸಿಕೊಡುತ್ತೇವೆ ಎಂದು ಹೇಳಿದರು. ಪ್ರಾಣಾಯಾಮ ಹಾಗೂ ಅಗ್ನಿಹೋತ್ರದಿಂದ (ಹೋಮ) ಸೋಂಕು ತಡೆಗಟ್ಟುವ ಬಗ್ಗೆ ತಿಳಿಸಿಕೊಡುವ ಕೈಪಿಡಿ,

ಶುಂಠಿ, ಅರಿಶಿನ, ಮೆಣಸು, ಬೆಳ್ಳುಳ್ಳಿಯಂತಹ ಆರೋಗ್ಯಕರ ಪದಾರ್ಥಗಳನ್ನು ಮನೆಮನೆಗೂ ಹೋಗಿ, ಜನರಿಗೆ ನೀಡಿ ಅದನ್ನು ಬಳಸಲು ಹೇಳುತ್ತೇವೆ. ಪ್ರತಿದಿನ 12 ನಿಮಿಷ 6 ಮುದ್ರೆಗಳನ್ನು ಮಾಡಿದರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ತಿಳಿಸಿಕೊಡುತ್ತೇವೆ. ಒಂದು ವಾರ ರಾಜಕೀಯ ಬಿಟ್ಟು ಆರೋಗ್ಯದತ್ತ ಗಮನ ಹರಿಸುತ್ತೇವೆ ಎಂದರು.

Advertisement

ನಂತರ ಹೋಮಕುಂಡಕ್ಕೆ ಅಗ್ನಿಸ್ಪಶ‌ ಮಾಡಿ ಹೊಗೆಯಿಂದ ದೇಹದಲ್ಲಿ ಆಗುವ ಆರೋಗ್ಯಕರ ಬದಲಾವಣೆಗಳ ಬಗ್ಗೆ ತಿಳಿಸಿಕೊಟ್ಟರು. ಹೋಮ ಮಾಡುವುದು ಹಿಂದೂ ಧರ್ಮಕ್ಕೆ ಮಾತ್ರ ಸೇರಿದ್ದಲ್ಲ. ವಿದೇಶದ ಕೆಲವು ಚರ್ಚ್‌ಗಳಲ್ಲಿ ಭಾನುವಾರದ ಪ್ರಾರ್ಥನೆಗೆ ಮುಂಚೆ 10 ನಿಮಿಷ ಅಗ್ನಿ ಹೊತ್ತಿಸಿ ನಂತರ ಪ್ರಾರ್ಥಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು’ ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ಮನವಿ: ಸ್ವಯಿಚ್ಛೆಯಿಂದ ಪರೀಕ್ಷೆ ಮಾಡಿಸಿಕೊಳ್ಳಲು ಬಯಸುವವರಿಗೆ ಅವಕಾಶ ಮಾಡಿಕೊಡುವುದರ ಜೊತೆಗೆ, ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಪರೀಕ್ಷಾ ಕೇಂದ್ರ, ಹಕ್ಕಿಜ್ವರ ಮತ್ತಿತರ ಸಮಸ್ಯೆಗಳಿಗೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆಯುರ್ವೇದ ವೈದ್ಯ ಡಾ. ಪ್ರಸನ್ನ ವೆಂಕಟೇಶ್‌ ಮಾತನಾಡಿ, ಜನರು ಈ ವೈರಸ್‌ಗೆ ಹೆದರುವ ಅಗತ್ಯವಿಲ್ಲ. ನೂರು ಮಂದಿ ಕೊರೊನಾ ಪೀಡಿತರಲ್ಲಿ ಸಾಯುವವರ ಸಂಖ್ಯೆ ಶೇ.2 ರಷ್ಟು ಮಾತ್ರ. ಉಳಿದ ಶೇ.98 ರಷ್ಟು ಮಂದಿ ಉಳಿಯುತ್ತಾರೆ. ಇದಕ್ಕೆ ಕಾರಣ ಮನುಷ್ಯನ ದೇಹದಲ್ಲಿರುವ ರೋಗನಿರೋಧಕ ಶಕ್ತಿ.

ನಮ್ಮ ಜೀವನ ಶೈಲಿ ಹಾಗೂ ಆಹಾರ ಕ್ರಮ ಮತ್ತು ಯೋಗದಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಹೇಳಿದರು. ಈ ವೇಳೆ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್‌, ಧನ್ಯಕುಮಾರ್‌, ಶ್ರೀಹರಿ, ವಡಿವೇಲು, ಆಯುರ್ವೇದ ವೈದ್ಯ ಡಾ. ಪ್ರಸನ್ನ ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next