Advertisement

ಯೋಗಗುರು ರಮೇಶ್‌ ಅವರ ಯೋಗ ಪುಸಕ ಬಿಡುಗಡೆ

06:33 PM Jul 11, 2022 | Team Udayavani |

ಹಾಸನ: ಯೋಗಾಚಾರ್ಯ ಎಚ್‌ ಬಿ ರಮೇಶ್‌ ಅವರದು ಬಹುಮುಖ ವ್ಯಕ್ತಿತ್ವ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಿ ಎಸ್‌ ಮಂಜುನಾಥ್‌ ತಿಳಿಸಿದರು.

Advertisement

ನಗರದ ಮಹಾರಾಜ ಪಾರ್ಕಿನಲ್ಲಿರುವ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಯೋಗ ಗುರು ಎಚ್‌.ಬಿ ರಮೇಶ್‌ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ರಚಿಸಿದ ಯೋಗಾಸನ ಪ್ರಾಣಾಯಾಮ ಶಕ್ತಿ ಚಕ್ರಗಳ ಅನುಸಂಧಾನ ಮತ್ತು ಯೋಗಸಾಧಕರ ಪರಿಚಯ ಕೃತಿ ಬಿಡುಗಡೆ ಮಾಡಿ ಮಾತನಾಡಿ ದೈಹಿಕ ಶಿಕ್ಷಕ, ಯೋಗಗುರು, ನಟ, ನಾಟಕಕಾರ ರಂಗಕರ್ಮಿ, ಲೇಖಕ ಸಾಹಿತ್ಯಪ್ರೇಮಿ ಸಂಘಟಕರಾದ ರಮೇಶರದ್ದು ಬಹುಮುಖ ಪ್ರತಿಭೆ.

ಪ್ರಾಣಾಯಾಮದ ಭಾಗವಾದ ಪೂರಕ, ರೇಚಕ ಮತ್ತು ಕುಂಭಕಗಳು ಹುಟ್ಟು ಸಾವಿನ ನಡುವಿನ ಜೀವನವನ್ನು ಸಮರ್ಥವಾಗಿ ಹಿಡಿದಿ ಡುವದಾಗಿದೆ ಎಂದು ಕೃತಿಯಲ್ಲಿ ವಿವರಿಸಲಾಗಿದೆ ಎಂದರು. ಬಳ್ಳಾರಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್‌ ಎಚ್‌. ಎಲ್‌.ಜನಾರ್ಧನ್‌ ಮಾತನಾಡಿ, ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಎಚ್‌.ಬಿ ರಮೇಶ್‌ ಅವರದ್ದು ಅನುಪಮ ಸಾಧನೆ. ವೈದ್ಯ ವೃತ್ತಿಯಲ್ಲಿರುವ ನನಗೆ ಕನ್ನಡ ನಾಡು ನುಡಿ ಸೇವೆಮಾಡಲು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ರಮೇಶ್‌ರವರ ಪ್ರೇರಣೆ ಕಾರಣ ಎಂದರು.

ಲೇಖಕ ಗೊರೂರು ಶಿವೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ ಎಚ್‌.ಬಿ ರಮೇಶ್‌ ದೈಹಿಕ ಶಿಕ್ಷಕರಾಗಿ ವೃತ್ತಿ ಆರಂಭಿಸಿದ್ದರು. ಪ್ರವೃತ್ತಿಯಲ್ಲಿ ರಂಗಕರ್ಮಿ. ಲೇಖಕರಾಗಿ 56 ಕೃತಿಗಳನ್ನು ರಚಿಸಿದ್ದಾರೆ.ಯೋಗ ಸಾಧಕರಾಗಿ ರಾಜ್ಯಾದ್ಯಂತ 800ಕ್ಕೂ ಹೆಚ್ಚು ಯೋಗ ಶಿಬಿರಗಳನ್ನು, ಶಾಲಾ -ಕಾಲೇಜುಗಳಲ್ಲಿ ಯೋಗ ಪ್ರಾತ್ಯಕ್ಷಿಕೆಗಳನ್ನು ನಡೆಸಿ 1987ರಿಂದ ನಗರಸಭೆಯ ವತಿಯಿಂದ ವಿವೇಕಾನಂದ ಯೋಗ ಶಿಕ್ಷಣ ಶಾಲೆಯನ್ನು ಸ್ಥಾಪಿಸಿ ಇದುವರೆಗೂ
ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ 90 ವರ್ಷ ಪೂರೈಸಿದ ಯೋಗ ಶಿಕ್ಷಕ ಎಚ್‌ ಬಿ ರಮೇಶ್‌ ಅವರನ್ನು ಉದ್ಯಮಿ ಹಾಗೂ ಸಮಾಜ ಸೇವಕ ಗೋಪಾಲಕೃಷ್ಣ ಪ್ರಭು ರವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಣಾರ್ಥಿಗಳಾದ ರಾಜೇಶ್‌, ಪರಮೇಶ್‌, ಚಂದ್ರು, ಶ್ರೀಮತಿ ನಿರ್ಮಲ, ಹಾಗೂ ಸುಜಾತ ಅವರನ್ನು ಯೋಗ ಗುರು ಎಚ್‌.ಬಿ ರಮೇಶ್‌ ಸನ್ಮಾನಿಸಿ ಗೌರವಿಸಿದರು.

Advertisement

ಯೋಗ ಶಾಲೆಯ ಶಿಕ್ಷಣಾರ್ಥಿಗಳ ಆದ ಧರ್ಮಪ್ಪ ಪುಟ್ಟಪ್ಪ ,ತೋಟಗಾರಿಕೆ ಇಲಾಖೆಯ ಮಂಜುನಾಥ,ನಿವೃತ್ತ ಬ್ಯಾಂಕ್‌ ಅಧಿಕಾರಿ ಕೃಷ್ಣಮೂರ್ತಿ, ಉದ್ಯಮಿಗಳಾದ ಗೋಪಿನಾಥ್‌ ರಾಮಚಂದ್ರ, ಪರಮೇಶ್‌ , ಚೆಲುವೇಗೌಡ, ಶ್ರೀಮತಿ ನಂದ, ರುಕ್ಮಿಣಿ ಕೋಮಲ ಚಂದ್ರಕಲ, ಕುಸುಮ, ಭಾರತಿ, ಮೋಹನಕುಮಾರಿ ಹಾಗೂ ಇತರ ಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next