Advertisement

ಶಾಲೆಯ ರಜಾ ದಿನದ ಮಾಹಿತಿ ಬಿಡುಗಡೆ

01:12 AM Feb 13, 2019 | |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದ ತರಗತಿ ನಡೆಯುವ ದಿನಗಳು, ಮಧ್ಯಂತರ ಹಾಗೂ ಬೇಸಿಗೆ ರಜಾ ದಿನದ ಮಾಹಿತಿ ಒಳಗೊಂಡ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

Advertisement

2019-20ನೇ ಸಾಲಿನಲ್ಲಿ 250 ದಿನಗಳ ಶೈಕ್ಷಣಿಕ ಅವಧಿ ಇರುತ್ತದೆ. ಶಾಲಾ ದಿನಗಳ ಮೊದಲ ಅವಧಿ 2019ರ ಮೇ.29ಕ್ಕೆ ಆರಂಭವಾಗಿ ಅಕ್ಟೋಬರ್‌ 5ಕ್ಕೆ ಕೊನೆಗೊಳ್ಳಲಿದೆ.

ಎರಡನೇ ಅವಧಿ ಅಕ್ಟೋಬರ್‌ 21ರಿಂದ ಆರಂಭವಾಗಿ 2020ರ ಏಪ್ರಿಲ್‌ 11ರಂದು ಮುಕ್ತಾಯವಾಗಲಿದೆ. ಈ ವರ್ಷದ ಅಕ್ಟೋಬರ್‌ 6ರಿಂದ 20ರ ವರೆಗೆ ಮಧ್ಯಂತರ ರಜೆ
ನೀಡಲಾಗುತ್ತಿದೆ. 2020 ಏಪ್ರಿಲ್‌ 12ರಿಂದ ಮೇ 24ರ ವರೆಗೆ ಬೇಸಿಗೆ ರಜೆ ನೀಡಲು ಇಲಾಖೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next