ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ಟ್ಯಾಬ್ಲೋಗೆ ಅವಕಾಶ ನೀಡದ ವಿಚಾರ ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕರ್ನಾಟಕ ವಿಶ್ವದಲ್ಲಿ ಇತಿಹಾಸದ ಚಾಪು ಹೊಂದಿರುವ ಪ್ರಗತಿಪರ ರಾಜ್ಯ. ರಾಜ್ಯಕ್ಕೆ ಭಾರತ ಸರ್ಕಾರ ಗೌರವ ಕೊಡುತ್ತಾ ಬಂದಿತ್ತು. ರಾಜ್ಯದ ಇತಿಹಾಸ ಪರಿಚಯ ಮಾಡಲಾಗುತ್ತಿತ್ತು. ಈಗ ಟ್ಯಾಬ್ಲೋಗೆ ಅವಕಾಶ ಕೊಟ್ಟಿಲ್ಲ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಗುಜರಾತ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಏರೋಸ್ಪೇಸ್ ಸ್ಥಳಾಂತರ ಮಾಡಲು ಹೊರಟಿದ್ದರು. ಈಗ ರಾಜ್ಯಕ್ಕೆ ಅನ್ಯಾಯವಾಗಿದೆ, ಇದನ್ನು ಸಹಿಸಲ್ಲ. ಕೇಂದ್ರದ ಮಂತ್ರಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಉಗ್ರರ ದಾಳಿಯಿಂದ ಕುಟುಂಬ,ನೆರೆಹೊರೆಯವರನ್ನು ರಕ್ಷಿಸಿದ ಸಾಕು ನಾಯಿ.!
ಇಲ್ಲದಿದ್ದರೆ ಸಚಿವರ ಮನೆಗೆ ಘೇರಾವ್ ಹಾಕುತ್ತೇವೆ. ಕುವೆಂಪು ಅವರಿಗೂ ಅವಮಾನ ಮಾಡಿದ್ದಾರೆ. ಇದು ಹೊಸದಲ್ಲ, ತಕ್ಕ ಪಾಠ ಕಲಿಸಬೇಕಾಗುತ್ತದೆ. ಕರ್ನಾಟಕವೆಂದರೆ ಹೇಳುವರು ಕೇಳುವವರು ಇಲ್ಲದಂತಾಗಿದೆ. ಡಬಲ್ ಇಂಜಿನ್ ಸರ್ಕಾರ ಎನ್ನುವವರು ಡಬಲ್ ಆಕ್ಟಿಂಗ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.